
ಬೆಂಗಳೂರು: ಹಣಕಾಸು ಸಚಿವರಾಗಿ ನನಗಿದು ಹೊಸ ಅನುಭವ, ಬಜೆಟ್ ಮಂಡಿಸಲು ಉತ್ಸುಕನಾಗಿದ್ದೇನೆ ಎಂದು ಚೊಚ್ಚಲ ಬಜೆಟ್ ಮಂಡಿಸುತ್ತಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ಮುನ್ನ ವಿಧಾನಸೌಧಕ್ಕೆ ಆಗಮಿಸುವ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಣಕಾಸು ಖಾತೆಯನ್ನೂ ಕೂಡ ನಾನೇ ಇಟ್ಟುಕೊಂಡಿರುವುದರಿಂದ ಬಜೆಟ್ ನ್ನು ನಾನೇ ಮಂಡಿಸುತ್ತಿದ್ದೇನೆ. ಇದು ನನಗೆ ಹೊಸ ಅನುಭವ. ಇದನ್ನು ನಾನು ಸವಾಲೆಂದು ಸ್ವೀಕರಿಸಿ ರಾಜ್ಯದ ಅಭಿವೃದ್ಧಿಗೆ ಪೂರಕವಾದ ಬಜೆಟ್ ನೀಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement