ಗ್ರಾಮ ಪಂಚಾಯತ್ ಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಸೌಲಭ್ಯ: ಇ ಆಡಳಿತಕ್ಕೆ ಬಜೆಟ್ ನಲ್ಲಿ ಒತ್ತು

ಇತ್ತೀಚೆಗೆ ಬಹುತೇಕ ಕೆಲಸ ಕಂಪ್ಯೂಟರ್ ಮತ್ತು ಆನ್ ಲೈನ್ ಮೂಲಕ ನಡೆಯುತ್ತಿರುವಾಗ ಸರ್ಕಾರಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇತ್ತೀಚೆಗೆ ಬಹುತೇಕ ಕೆಲಸ ಕಂಪ್ಯೂಟರ್ ಮತ್ತು ಆನ್ ಲೈನ್ ಮೂಲಕ ನಡೆಯುತ್ತಿರುವಾಗ ಸರ್ಕಾರಿ ಕಚೇರಿಗಳಲ್ಲಿ ನೌಕರರ ಅವಲಂಬನೆಯನ್ನು ಕಡಿಮೆ ಮಾಡಿ ಇ-ಆಡಳಿತಕ್ಕೆ ಪ್ರಸಕ್ತ ಸಮ್ಮಿಶ್ರ ಸರ್ಕಾರ ಒತ್ತು ನೀಡಿದೆ.

ಮುಖ್ಯಮಂತ್ರಿಯನ್ನು ಕಂಡು ತಮ್ಮ ಸಮಸ್ಯೆಗಳನ್ನು, ಕುಂದುಕೊರತೆಗಳನ್ನು ಹೇಳಬೇಕೆಂದರೆ ಇಷ್ಟು ದಿನ ಜನರು ಬೆಂಗಳೂರಿಗೆ ಬರಬೇಕಾಗಿತ್ತು. ಆದರೆ ಇನ್ನು ಮುಂದೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ವಿಡಿಯೊ ಕಾನ್ಫರೆನ್ಸ್ ವ್ಯವಸ್ಥೆ ಜಾರಿಗೆ ತರಲಾಗುತ್ತದೆ. ಈ ಮೂಲಕ ಜನರು ವಿಡಿಯೊ ಕಾನ್ಫರೆನ್ಸ್ ಮೂಲಕ ಮುಖ್ಯಮಂತ್ರಿಯನ್ನು ಸಂಪರ್ಕಿಸಬಹುದು.

ಸರ್ಕಾರದ ಹಲವು ಇಲಾಖೆಗಳ ಯೋಜನೆಗಳಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ ವಿಸ್ತರಿಸಲು ಕುಟುಂಬ ಆಧಾರಿತ ವ್ಯವಸ್ಥೆಗಳನ್ನು ಒದಗಿಸಲು ಕುಟುಂಬ ಗುರುತು ಚೀಟಿ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com