ಹೊಸ ತಾಲೂಕುಗಳಿಗೆ ಕುಮಾರ ಬಜೆಟ್ ನಲ್ಲಿಲ್ಲ ಅನುದಾನ: ಭುಗಿಲೆದ್ದ ಅಸಮಾಧಾನ

45 ದಶಕಗಳ ಬೇಡಿಕೆಯಾಗಿದ್ದ ಹೊಸ ತಾಲೂಕುಗಳ ಸ್ಥಾಪನೆಗೆ ಪರಿಷತ್ ಮತ್ತು ವಿಧಾನ ಸಭೆ ಅನುಮೋದನೆ ನೀಡಿದೆ. ಆದರೆ ಆರಂಭದಲ್ಲೇ ಅದಕ್ಕೆ ...
ಎಚ್.ಡಿ ಕುಮಾರ ಸ್ವಾಮಿ(ಸಾಂದರ್ಭಿಕ ಚಿತ್ರ)
ಎಚ್.ಡಿ ಕುಮಾರ ಸ್ವಾಮಿ(ಸಾಂದರ್ಭಿಕ ಚಿತ್ರ)
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಹಲವರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ,.
45 ದಶಕಗಳ ಬೇಡಿಕೆಯಾಗಿದ್ದ ಹೊಸ ತಾಲೂಕುಗಳ ಸ್ಥಾಪನೆಗೆ ಪರಿಷತ್ ಮತ್ತು ವಿಧಾನ ಸಭೆ ಅನುಮೋದನೆ ನೀಡಿದೆ. ಆದರೆ ಆರಂಭದಲ್ಲೇ ಅದಕ್ಕೆ ಸಿಗಬೇಕಾಗದ ಅನದಾನ ಸಿಗುತ್ತಿಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ ಮಂಡಿಸಿದ 2017-18 ನೇ ಸಾಲಿನ ಆಯವ್ಯಯದಲ್ಲಿ 21 ಜಿಲ್ಲೆಗಳಲ್ಲಿ 50 ತಾಲೂಕುಗಳ ಸ್ಥಾಪನೆಗಾಗಿಗ 2ಸಾವಿರ ಕೋಟಿ ರು ಘೋಷಿಸಿದ್ದರು.
ಕಳೆದ ಐದು ವರ್ಷಗಳಲ್ಲಿ ಹೊಸ ತಾಲೂಕು ರಚನೆ ಮಾಡುವುದರಲ್ಲಿ ಇಲ್ಲಿನ ಜನ ಹಲವು ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ಬಿಜೆಪಿ ಎಂಎಲ್ ಸಿ ಕವಟಗಿಮಠ ಮಹಾಂತೇಶ್ ಹೇಳಿದ್ದಾರೆ,
ಹೊಸ ತಾಲೂಕುಗಳ ರಚನೆಯಾದ ನಂತರ ಹಿಂದಿನ ಸರ್ಕಾರ ಇವುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ವಿಫಲವಾಗಿತ್ತು, ಅಗತ್ಯ ಸಿಬ್ಬಂದಿ ನೇಮಕಾತಿ  ಮಾಡಿಲ್ಲ, ಕೆಲವು ತಾಲೂಕುಗಳಲ್ಲಿ ರೆವಿನ್ಯೂ ಇನ್ಸ್ ಪೆಕ್ಚರ್ ಘಲೇ ವಿಶೇಷ ತಹಶೀಲ್ದಾರ್ ಆಗಿ ನೇಮಿಸಲಾಗಿದೆ, 
ತಹಶೀಲ್ದಾರ್ ಗಳಿಲ್ಲದೇ ರಚನೆಯಾಗಿರುವ ಹೊಸ ತಾಲೂಕುಗಳದ್ದು ತ್ರಿಶಂಕು ಸ್ಥಿತಿಯಾಗಿದೆ ಮುಂದಿನ ವಿಧಾನ ಪರಿಷತ್ ಅದಿವೇಶನದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಹೇಳಿದ್ದಾರೆ.  
ಈ ಸಂಬಂಧ ಕಂದಾಯ ಸಚಿವ ಆರ್.ವಿ ದೇಶಪಾಂಡೆ ಪ್ರತಿಕ್ರಿಯಿಸಿದ್ದು, ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು ಹಾಗೂ ಎಲ್ಲಾ 50 ತಾಲೂಕುಗಳಿಗೂ ತಹಶೀಲ್ದಾರ್ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com