ಜಾನುವಾರು ಗೊಬ್ಬರ ನಿರ್ವಹಣೆಗೆ ಉತ್ತೇಜನ: ಬಜೆಟ್ ನಲ್ಲಿ ಗೋಬರ್ ಧನ್ ಯೋಜನೆ ಘೋಷಣೆ

ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ಯೋಜನೆ ಘೋಷಿಸಿದ್ದು, ಜಾನುವಾರು ಗೊಬ್ಬರ ನಿರ್ವಹಣೆಯನ್ನು ಈ ಯೋಜನೆ ಉತ್ತೇಜಿಸಲಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ 2018-19 ನೇ ಸಾಲಿನ ಬಜೆಟ್ ನಲ್ಲಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೊಸ ಯೋಜನೆ ಘೋಷಿಸಿದ್ದು, ಜಾನುವಾರು ಗೊಬ್ಬರ ನಿರ್ವಹಣೆಯನ್ನು ಈ ಯೋಜನೆ ಉತ್ತೇಜಿಸಲಿದೆ. 
ಜಾನುವಾರು ಗೊಬ್ಬರವನ್ನು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡುವುದನ್ನು ಉತ್ತೇಜಿಸುವುದಕ್ಕಾಗಿ ಗೋಬರ್ ಧನ್ ಯೋಜನೆ ಘೋಷಿಸಲಾಗಿದ್ದು, ಜಾನುವಾರು ಗೊಬ್ಬರವಷ್ಟೇ ಅಲ್ಲದೇ ಕೃಷಿ ಭೂಮಿಯಲ್ಲಿನ ಘನ ತ್ಯಾಜ್ಯ ನಿರ್ವಹಣೆಗೂ ಉತ್ತೇಜನ ನೀಡಲಿದ್ದು, ಅವುಗಳನ್ನು ಕಾಂಪೋಸ್ಟ್, ರಸಗೊಬ್ಬರ, ಜೈವಿಕ ಅನಿಲ ಮತ್ತು ಜೈವಿಕ-ಸಿಎನ್ ಜಿ ಯನ್ನಾಗಿ ಮರುಬಳಕೆ ಮಾಡುವುದನ್ನೂ ಸಹ ಈ ಯೋಜನೆ ಉತ್ತೇಜಿಸಲಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com