ತೆರಿಗೆ ವಿನಾಯ್ತಿ ಮಿತಿ ಏರಿಕೆ ಸೇರಿದಂತೆ, ಜನಸಾಮಾನ್ಯರು ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿದ್ದ ಮೋದಿ ಸರ್ಕಾರದ 2018-19 ನೇ ಸಾಲಿನ ಹಾಗೂ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಿದೆ. ಈ ಲೇಖನದಲ್ಲಿ ನೀವು ಪತ್ರಿಕೆಯಲ್ಲಿ ಕಾಣದೆ ಇದ್ದದ್ದು ಅಥವಾ ಹೆಚ್ಚಿನ ಪ್ರಚಾರ ಪಡೆಯದೇ ಹೋದ ವಿಚಾರಗಳನ್ನ ಪ್ರಸ್ತಾಪಿಸುತ್ತೇನೆ. ಅವುಗಳು ಇವತ್ತಿನ ಮಟ್ಟಿಗೆ ನಮ್ಮ ಜೀವನ ಮಟ್ಟದಲ್ಲಿ ಸುಧಾರಣೆ ತರದೇ ಇರಬಹದು ಆದರೆ ಅವುಗಳು ಮುಂದಿನ ದಿನಗಳಲ್ಲಿ ಹೆಚ್ಚಿನ ಫಲವನ್ನ ಕೊಡುತ್ತವೆ ಎನ್ನುವುದರಲ್ಲಿ ಸಂಶಯವಿಲ್ಲ. ಬನ್ನಿ ಬಜೆಟ್ ನ ಹೆಚ್ಚು ಸಡ್ಡು ಮಾಡದ ಆದರೆ ಪ್ರಮುಖವಾದ ಅಂಶಗಳತ್ತ ಹರಿಸೋಣ ಚಿತ್ತ.