ಬಜೆಟ್ ಮಂಡನೆಯ 'ಸೂಟ್ ಕೇಸ್' ನ ಕುತೂಹಲಕಾರಿ ಕಥೆ

ಸಾಮಾನ್ಯವಾಗಿ ಪ್ರತಿವರ್ಷ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಮುುನ್ನ ಹಣಕಾಸು ಸಚಿವರು ...
ಬಜೆಟ್ ಮಂಡನೆಗೆ ಮುನ್ನ ಸೂಟ್ ಕೇಸ್ ನೊಂದಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್
ಬಜೆಟ್ ಮಂಡನೆಗೆ ಮುನ್ನ ಸೂಟ್ ಕೇಸ್ ನೊಂದಿಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್

ನವದೆಹಲಿ: ಸಾಮಾನ್ಯವಾಗಿ ಪ್ರತಿವರ್ಷ ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆಗೆ ಮುುನ್ನ ಹಣಕಾಸು ಸಚಿವರು ಕೆಂಪು ಸೂಟ್ ಕೇಸ್ ಹಿಡಿದುಕೊಂಡು ಬಂದು ಸಂಸತ್ತು ಹೊರಗೆ ಮಾಧ್ಯಮಗಳ ಕ್ಯಾಮರಾಗಳಿಗೆ ನಸುನಗುತ್ತಾ ಫೋಸ್ ಕೊಡುತ್ತಾರೆ.

ಪ್ರತಿವರ್ಷ ಹಣಕಾಸು ಸಚಿವರು ಕೆಂಪು ಬಣ್ಣದ ಸೂಟ್ ಕೇಸನ್ನೇ ಹಿಡಿದುಕೊಂಡು ಬರುತ್ತಾರೆ ಎಂಬುದೇನಿಲ್ಲ. ಅದು ಕೆಲ ವರ್ಷ ಕಪ್ಪು ಬಣ್ಣ, ಕಂದು, ಕೇಸರಿ, ಬೂದು ಬಣ್ಣ ಕೂಡ ಆಗಿರಬಹುದು. ಪ್ರಣಬ್ ಮುಖರ್ಜಿಯವರು ಡಾ ಮನಮೋಹನ್ ಸಿಂಗ್ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದಾಗ ಬ್ರಿಟನ್ ನ ಗ್ರಾಡ್ ಸ್ಟೊನ್ ಗೆ ಹೋಲುವ ವೆಲ್ವೆಟ್ ಬಣ್ಣದ ಸೂಟ್ ಕೇಸ್ ಹೊತ್ತು ಲೋಕಸಭೆಗೆ ಬಂದಿದ್ದರು.

ಸರ್ಕಾರದ ಬಜೆಟ್ ನ ಲೆಕ್ಕಪತ್ರದ ದಾಖಲೆಗಳನ್ನು ಸೂಟ್ ಕೇಸ್ ನಲ್ಲಿ ಹೊತ್ತುತರುವ ಸಂಪ್ರದಾಯ ಆರಂಭವಾಗಿದ್ದು 18ನೇ ಶತಮಾನದಲ್ಲಿ ಬ್ರಿಟನ್  ಸರ್ಕಾರದ ಖಜಾನೆಯ ಚಾನ್ಸೆಲರ್ ಮೂಲಕ.

1860ರಲ್ಲಿ ಅಂದಿನ ಬ್ರಿಟನ್ ಬಜೆಟ್ ಮುಖ್ಯಸ್ಥ ವಿಲಿಯಮ್ ಇ ಗ್ಲಾಡ್ ಸ್ಟನ್ ಕೆಂಪು ಬಣ್ಣದ ಸೂಟ್ ಕೇಸ್ ನಲ್ಲಿ ಹೊತ್ತು ತಂದಿದ್ದರು. ನಂತರ ಅವರು ಬ್ರಿಟನ್ ಪ್ರಧಾನಿಯಾದರು. ನಂತರ ಬಂದ ಅನೇಕ ಸರ್ಕಾರಗಳು ಅದೇ ಸೂಟ್ ಕೇಸನ್ನು ಬಳಸಿದವು.

ಭಾರತದಲ್ಲಿ ಮೊದಲ ಬಾರಿಗೆ ಕೇಂದ್ರ ಸಾಮಾನ್ಯ ಬಜೆಟ್ ಮಂಡನೆಯಾಗಿದ್ದು 1947ರಲ್ಲಿ ಆರ್ ಕೆ ಶಣ್ಮುಖಮ್ ಚೆಟ್ಟಿಯವರ ಮೂಲಕ. ಸ್ವಾತಂತ್ರ್ಯ ಸಿಕ್ಕಿ ಕೆಲ ತಿಂಗಳುಗಳು ಕಳೆದಿದ್ದವು. ಅಂದು ಚರ್ಮದ ಬ್ಯಾಗಿನಲ್ಲಿ ಬಜೆಟ್ ನ ದಾಖಲೆಗಳನ್ನು ಅವರು ಹೊತ್ತು ತಂದು ಮಂಡಿಸಿದ್ದರು. ನಂತರ 10 ವರ್ಷಗಳ ನಂತರ ಟಿಟಿ ಕೃಷ್ಣಮಾಚಾರಿ ಫೈಲ್ ಬ್ಯಾಗ್ ನ ರೀತಿಯದ್ದನ್ನು ತಂದಿದ್ದರು. 1958ರಲ್ಲಿ ಬಜೆಟ್ ಮಂಡಿಸಿದ್ದ ಜವಹರಲಾಲ್ ನೆಹರೂ ಕಪ್ಪು ಬಣ್ಣದ ಸೂಟ್ ಕೇಸ್ ತಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com