ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಬಂಪರ್ ಬಜೆಟ್ : ಪ್ರಯೋಜನಗಳೇನು ಇಲ್ಲಿದೆ ಮಾಹಿತಿ

ನಿರ್ಮಲಾ ಸೀತಾರಾಮನ್ ಮಂಡಿಸಿರುವ ತಮ್ಮ ಚೊಚ್ಚಲ ಕೇಂದ್ರ ಬಜೆಟ್ 2019-20 ನಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಅತಿ ಹೆಚ್ಚು ಪ್ರಯೋಜನವಾಗುವ ಬದಲಾವಣೆಗಳನ್ನು ಘೋಷಿಸಿದ್ದಾರೆ.
ನವದೆಹಲಿ: ನಿರ್ಮಲಾ ಸೀತಾರಾಮನ್ ಮಂಡಿಸಿರುವ ತಮ್ಮ ಚೊಚ್ಚಲ ಕೇಂದ್ರ ಬಜೆಟ್ 2019-20 ನಲ್ಲಿ ಮಧ್ಯಮ ವರ್ಗದ ಗೃಹ ಖರೀದಿದಾರರಿಗೆ ಅತಿ ಹೆಚ್ಚು ಪ್ರಯೋಜನವಾಗುವ ಬದಲಾವಣೆಗಳನ್ನು ಘೋಷಿಸಿದ್ದಾರೆ. 
45 ಲಕ್ಷ ರೂಪಾಯಿ ವರೆಗಿನ ಮನೆಯನ್ನು ಸಾಲ ಪಡೆದು ಕೊಳ್ಳುವವರಿಗೆ ಹೆಚ್ಚುವರಿಯಾಗಿ 1.50 ಲಕ್ಷ ರೂಪಾಯಿ ಬಡ್ಡಿ ಕಡಿತವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಹಿಂದಿದ್ದ 2 ಲಕ್ಷ ರೂಪಾಯಿ ಬಡ್ಡಿ ಕಡಿತ ಪ್ರಯೋಜನವೂ ಸೇರಿ ಈಗ ಒಟ್ಟಾರೆ 3.5 ಲಕ್ಷ ರೂಪಾಯಿ ಬಡ್ಡಿ ವಿನಾಯಿತಿ ಸಿಗಲಿದೆ. ಮಾರ್ಚ್ 31, 2020 ವರೆಗೆ ಗೃಹ ಸಾಲ ಪಡೆಯುವವರಿಗೆ ಈ ಪ್ರಯೋಜನ ದೊರೆಯಲಿದೆ.
ಕೇಂದ್ರ ಸರ್ಕಾರದ ಈ ಘೋಷಣೆಯಿಂದಾಗಿ 15 ವರ್ಷದವರೆಗೆ ಸಾಲದ ಅವಧಿ ಹೊಂದುವ ಮಧ್ಯಮ ವರ್ಗದವರಿಗೆ 7 ಲಕ್ಷ ರೂಪಾಯಿ ವರೆಗೆ ಪ್ರಯೋಜನ ದೊರೆಯಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com