ಕಾರ್ಮಿಕ ಸುಧಾರಣೆಗಳನ್ನು ಅನಾವರಣಗೊಳಿಸಿದ ನಿರ್ಮಾಲಾ ಸೀತಾರಾಮನ್‍: ವಿದೇಶಿ ಹೂಡಿಕೆ ಉತ್ತೇಜನಕ್ಕೆ ಪ್ರಸ್ತಾವನೆ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್; ನಲ್ಲಿ 2020ರ ವೇಳೆಗೆ ಭಾರತವನ್ನು 3 ಟ್ರಿಲಿಯನ್; ಆರ್ಥಿಕತೆಯನ್ನಾಗಿಸುವ, ಮುಂದಿನ ವರ್ಷಗಳಲ್ಲಿ 5 ಟ್ರಿಲಿಯನ್
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಮಂಡಿಸಿದ ತಮ್ಮ ಚೊಚ್ಚಲ ಬಜೆಟ್; ನಲ್ಲಿ 2020ರ ವೇಳೆಗೆ ಭಾರತವನ್ನು 3 ಟ್ರಿಲಿಯನ್; ಆರ್ಥಿಕತೆಯನ್ನಾಗಿಸುವ, ಮುಂದಿನ ವರ್ಷಗಳಲ್ಲಿ 5 ಟ್ರಿಲಿಯನ್ ; ಆರ್ಥಿಕತೆಯನ್ನಾಗಿಸುವ ಗುರಿಯೊಂದಿಗೆ ವಿಶಾಲ ಮಾರ್ಗನಕ್ಷೆ ಮುಂದಿಟ್ಟಿದ್ದಾರೆ. 
ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಸಲು ಕೆಲ ಬದಲಾವಣೆಗಳನ್ನು ಪ್ರಸ್ತಾಪಿಸಿದ ಸಚಿವರು ನೀರು ಮತ್ತು ಅನಿಲ ಗ್ರಿಡ್ ಹಾಗೂ ಪ್ರಾದೇಶಿಕ ವಿಮಾನ ನಿಲ್ದಾಣಗಳಿಗೆ ನೀಲನಕ್ಷೆ ರೂಪಿಸುವುದಾಗಿ ಹೇಳಿದ್ದಾರೆ. 
ಲೋಕಸಭೆಯಲ್ಲಿ ಮಂಡಿಸಲಾದ 2019-20ರ ಬಜೆಟ್ ಪ್ರಸ್ತಾವನೆಯಲ್ಲಿ, ಸರ್ಕಾರ ಅನೇಕ ಕಾರ್ಮಿಕ ಕಾನೂನುಗಳನ್ನು ನಾಲ್ಕು ಕಾರ್ಮಿಕ ಸಂಕೇತಗಳ ಗುಂಪಾಗಿ ಸುಗಮಗೊಳಿಸುತ್ತದೆ ಎಂದು ಹಣಕಾಸು ಸಚಿವರು ಹೇಳಿದರು.
ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್ ಮತ್ತು 3 ಡಿ ಮುದ್ರಣದಂತಹ ಹೊಸ ಯುಗದ ಕೌಶಲ್ಯಗಳಲ್ಲಿ ತರಬೇತಿ ನೀಡುವುದಕ್ಕೆ ಸರ್ಕಾರ ಗಮನ ಹರಿಸಲಿದೆ ಎಂದು ಅವರು ಹೇಳಿದರು.
ಹೂಡಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ, ವಿಮಾನಯಾನ, ಮಾಧ್ಯಮ, ಅನಿಮೇಷನ್ ಮತ್ತು ವಿಮಾ ವಲಯಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಸುಧಾರಣೆಗಳನ್ನು ತಂದು ಉದಾರೀಕರಣಗೊಳಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (ಐಎಫ್;ಎಸ್;ಸಿ)ಗಳನ್ನು ಹೆಚ್ಚಿಸಲು ಮತ್ತು ಸಾಲ ಖಾತರಿ ನಿಗಮವನ್ನು ಸ್ಥಾಪಿಸಲು ಕೈಗೊಂಡಿರುವ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಸಾಮಾಜಿಕ ಉದ್ಯಮಗಳು ಮತ್ತು ಸ್ವಯಂಸೇವಾ ಸಂಸ್ಥೆಗಳಿಗೆ ವಿದ್ಯುನ್ಮಾನ ನಿಧಿ ಸಂಗ್ರಹ ಯೋಜನೆ ಆರಂಭಿಸಲಾಗುವುದು. ಕೆಲ ಕಂಪನಿಗಳಲ್ಲಿ ವಿದೇಶಿ ಹೂಡಿಕೆಗೆ ಶಾಸನಬದ್ಧ ಮಿತಿಗಳನ್ನು ಹೆಚ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. 
ಕೇಂದ್ರ ಸರ್ಕಾರ 1,05,000 ಕೋಟಿ ರೂ.ಮೊತ್ತದ ಬಂಡವಾಳ ಹಿಂತೆಗೆತ ಗುರಿಯನ್ನು ಹೊಂದಿದೆ. ಅಲ್ಲದೆ, ರೈಲ್ವೆ ನಿಲ್ದಾಣ ಆಧುನೀಕರಣದ ಬೃಹತ್; ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. 
ಮಾರುಕಟ್ಟೆ ಸುಧಾರಣೆಗಳನ್ನು ಸಾಧಿಸುವ ಗುರಿಯ ಕ್ರಮಗಳನ್ನು ಅನಾವರಣಗೊಳಿಸಿದ ಸಚಿವರು,  ಕನಿಷ್ಠ ಸಾರ್ವಜನಿಕ ಪಾಲುದಾರಿಕೆಯನ್ನು ಶೇ.25 ರಿಂದ ಶೇ 35 ಕ್ಕೆ ಏರಿಸುವುದರ ಕುರಿತು ಷೇರು ವಿನಿಮಯ ಮಂಡಳಿ ಮೌಲ್ಯಮಾಪನ ಮಾಡಲಿದೆ. 2019-20ರಲ್ಲಿ ಸಾಲ ಖಾತರಿ ನಿಗಮವನ್ನು ಸ್ಥಾಪಿಸಲಾಗುವುದು. ಮೂಲ ಸೌಕರ್ಯ ವಲಯವನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ದೀರ್ಘಕಾಲೀನ ಬಾಂಡ್;ಗಳಿಗಾಗಿ ಮಾರುಕಟ್ಟೆಗಳನ್ನು ವಿಸ್ತಾರಗೊಳಿಸು ಕ್ರಿಯಾ ಯೋಜನೆ ರೂಪಿಸಲಾಗುವುದು ಎಂದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com