ಕೇಂದ್ರ ಬಜೆಟ್
ಚಿಪ್ಪಿನಲ್ಲಿ ಕೇಂದ್ರ ಬಜೆಟ್, ಎಲ್ಲವೂ ಇದೆ: ಆದರೆ ಯಾವುದೂ ಕೈಗೆಟುವುದಿಲ್ಲ: ಸಿದ್ದರಾಮಯ್ಯ
ಕೇಂದ್ರ ಬಜೆಟ್-2019-20 ರ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ನವದೆಹಲಿ: ಕೇಂದ್ರ ಬಜೆಟ್-2019-20 ರ ಬಗ್ಗೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಟ್ವಿಟರ್ ನಲ್ಲಿ ಬಜೆಟ್ ಬಗ್ಗೆ ಬರೆದಿರುವ ಸಿದ್ದರಾಮಯ್ಯ ಚಿಪ್ಪಿನಲ್ಲಿ ಬಜೆಟ್ ಸೂರ್ಯನ ಕೆಳಗೆ ಎಲ್ಲವೂ ಇದೆ ಆದರೆ ಯಾವುದೂ ಕೈಗೆಟುವುಕುದಿಲ್ಲ ಎಂದು ಬರೆದಿದ್ದಾರೆ.
ನಿರ್ಮಲಾ ಸೀತರಾಮನ್ ಮಂಡಿಸಿದ ಚೊಚ್ಚಲ ಬಜೆಟ್ ನಲ್ಲಿ ಗೃಹ ನಿರ್ಮಾಣ ಸಾಲದ ಮೇಲಿನ ತೆರಿಗೆ ವಿನಾಯಿತಿ, ಎಂಎಸ್ ಎಂಇಗಳಿಗೆ 59 ನಿಮಿಷದಲ್ಲಿ 1 ಕೋಟಿ ಸಾಲ ಮಂಜೂರು ಮಾಡುವುದು, ಸ್ಟಾರ್ಟ್ ಅಪ್ ಗಳಿಗೆ ತೆರಿಗೆ ತಪಾಸಣೆ ವಿನಾಯಿತಿ ಸೇರಿದಂತೆ ಮಧ್ಯಮ ವರ್ಗ, ಉದ್ಯಮಿಗಳಿಗೆ ಉಪಯುಕ್ತವಾಗುವಂತಹ ಯೋಜನೆಗಳನ್ನು ಘೋಷಿಸಿದ್ದರೂ, ಚಿನ್ನದ ಮೇಲಿನ ಸುಂಕ ಹೆಚ್ಚಳ, ಪೆಟ್ರೋಲ್, ಡೀಸೆಲ್ ಸುಂಕ, ಟೈಲ್ಸ್ ಸೇರಿದಂತೆ ಸೇರಿದಂತೆ ಮಧ್ಯಮ ವರ್ಗದವರು ಬಳಕೆ ಮಾಡುವ ಉತ್ಪನ್ನಗಳ ಬೆಲೆಯನ್ನೂ ಏರಿಕೆ ಮಾಡಿದ್ದು ಒಂದೆಡೆ ತೆರಿಗೆದಾರರಿಗೆ ಬರೆ ಹಾಕಿದ್ದು, ಶ್ರೀಸಾಮಾನ್ಯನ ಜೆಬಿಗೂ ಹೊರೆಯಾಗುವಂತೆ ಮಾಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ