ಯಾವುದೇ ಮುಚ್ಚು ಮರೆ ಇಲ್ದೇ ಹೇಳ್ತಿದ್ದೇನೆ: ಕೇಂದ್ರದ ವಿರುದ್ಧ ಸಿಎಂ ಯಡಿಯೂರಪ್ಪ ಬಹಿರಂಗ ಅಸಮಾಧಾನ! 

2020 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವಾಗಲೇ ಸಿಎಂ ಯಡಿಯೂರಪ್ಪ ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಕೇಂದ್ರದಿಂದ ಅನುದಾನ ಕಡಿಮೆಯಾಗಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಬಜೆಟ್ ನಂತರ ನಡೆದ ಸುದ್ಧಿಗೋಷ್ಠಿಯಲ್ಲೂ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ. 
ಯಾವುದೇ ಮುಚ್ಚು ಮರೆ ಇಲ್ದೇ ಹೇಳ್ತಿದ್ದೇನೆ: ಕೇಂದ್ರದ ವಿರುದ್ಧ ಸಿಎಂ ಯಡಿಯೂರಪ್ಪ ಬಹಿರಂಗ ಅಸಮಾಧಾನ!
ಯಾವುದೇ ಮುಚ್ಚು ಮರೆ ಇಲ್ದೇ ಹೇಳ್ತಿದ್ದೇನೆ: ಕೇಂದ್ರದ ವಿರುದ್ಧ ಸಿಎಂ ಯಡಿಯೂರಪ್ಪ ಬಹಿರಂಗ ಅಸಮಾಧಾನ!
Updated on

ಬೆಂಗಳೂರು: 2020 ನೇ ಸಾಲಿನ ರಾಜ್ಯ ಬಜೆಟ್ ಮಂಡಿಸುವಾಗಲೇ ಸಿಎಂ ಯಡಿಯೂರಪ್ಪ ರಾಜ್ಯದ ಹಣಕಾಸು ಪರಿಸ್ಥಿತಿ ಹಾಗೂ ಕೇಂದ್ರದಿಂದ ಅನುದಾನ ಕಡಿಮೆಯಾಗಿರುವುದರ ಬಗ್ಗೆ ಪ್ರಸ್ತಾಪಿಸಿದ್ದರು. ಬಜೆಟ್ ನಂತರ ನಡೆದ ಸುದ್ಧಿಗೋಷ್ಠಿಯಲ್ಲೂ ಸಿಎಂ ಈ ಬಗ್ಗೆ ಮಾತನಾಡಿದ್ದಾರೆ. 

ವಿಧಾನಸೌಧದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಸಿಎಂ ಯಡಿಯೂರಪ್ಪ ಕೇಂದ್ರ ಸರ್ಕಾರದಿಂದ ನಮಗೆ ಬರಬೇಕಾದ ಹಣ ಕಡಿಮೆಯಾಗಿದೆ, ಕೇಂದ್ರ ಸರ್ಕಾರದಿಂದ ಸಿಗಬೇಕಿದ್ದ ಅನುದಾನ ಹಾಗೂ ಜಿಎಸ್ಟಿ ಪಾಲು ಸಹ ಕಡಿಮೆಯಾಗಿದೆ, ಯಾವುದೇ ಮುಚ್ಚು ಮರೆ ಇಲ್ಲದೇ ಹೇಳ್ತಿದ್ದೇನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
 
ಇದರ ಪರಿಣಾಮವಾಗಿ ರಾಜ್ಯದ ಸಂಪನ್ಮೂಲ ಕಳೆದ ವರ್ಷಗಳಿಗೆ ಹೊಲಿಸಿದರೆ ಈ ಬಾರಿ 15 ಸಾವಿರ ಕೋಟಿ ಕಡಿಮೆಯಾಗಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಸ್ವಲ್ಪ ಸರಿ ಇಲ್ಲ. ಯಾವುದೇ ಮುಚ್ಚು ಮರೆ ಇಲ್ಲದೇ ಬಜೆಟ್ ಬಗ್ಗೆ ಮಾತನಾಡಿದ್ದೇನೆ. ಬಜೆಟ್ ಮೇಲಿನ ಚರ್ಚೆ ವೇಳೆ ಉತ್ತರ ಕೊಡುವೆ ಎಂದು ಸಿಎಂ ಹೇಳಿದ್ದಾರೆ. 

ಕೇಂದ್ರದಿಂದ ಅನುದಾನ ಕಡಿಮೆಯಾಗಿರುವ ವಿಚಾರವಾಗಿ ಇನ್ನಷ್ಟು ಮಾತನಾಡಿರುವ ಯಡಿಯೂರಪ್ಪ, ಅನುದಾನ ಕಡಿಮೆಯಾಗಿರುವುದು, ಜಿಎಸ್ ಟಿ ಪಾಲಿನ ಬಗ್ಗೆ 15 ನೇ ಹಣಕಾಸು ಕುರಿತು ನಡೆಯುವ ಸಭೆಯಲ್ಲಿ ಪ್ರಸ್ತಾಪ ಮಾಡುತ್ತೆವೆ. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಆ ಸಭೆಗೆ ಹೋಗಲಿದ್ದಾರೆ ಎಂದು ಸಿಎಂ  ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com