ಕರ್ನಾಟಕ ಬಜೆಟ್ 2020-21: ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂ ಕಡಿಮೆ-ಸಿಎಂ ಯಡಿಯೂರಪ್ಪ 

ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂಪಾಯಿ ಕಡಿಮೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 
ಕರ್ನಾಟಕ ಬಜೆಟ್ 2020-21: ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂ ಕಡಿಮೆ-ಸಿಎಂ ಯಡಿಯೂರಪ್ಪ
ಕರ್ನಾಟಕ ಬಜೆಟ್ 2020-21: ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂ ಕಡಿಮೆ-ಸಿಎಂ ಯಡಿಯೂರಪ್ಪ

ಬೆಂಗಳೂರು: ರಾಜ್ಯಕ್ಕೆ ಕೇಂದ್ರದಿಂದ ಸಿಗಬೇಕಿದ್ದ ಅನುದಾನದಲ್ಲಿ 8000 ಕೋಟಿ ರೂಪಾಯಿ ಕಡಿಮೆಯಾಗಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ. 

ಮಾ.05 ರಂದು 2020-21 ನೇ ಸಾಲಿನ ಬಜೆಟ್ ಮಂಡನೆ ಮಾಡಿರುವ ಸಿಎಂ ಯಡಿಯೂರಪ್ಪ ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಸದನಕ್ಕೆ ಮಾಹಿತಿ ನೀಡಿದ್ದು, ಕೇಂದ್ರದ ಅನುದಾನ, ಜಿಎಸ್ ಟಿ ಪಾಲು, ತೆರಿಗೆ ಸಂಗ್ರಹದ ಬಗ್ಗೆ ಮಾತನಾಡಿದ್ದಾರೆ. 

"ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಿಗಬೇಕಿದ್ದ 11 ಸಾವಿರ ಕೋಟಿ ರೂಪಾಯಿ ಪಾಲು ಸಿಕ್ಕಿಲ್ಲ, ಅನುದಾನದಲ್ಲಿಯೂ ಸುಮಾರು 8000 ರೂಪಾಯಿ ಕೋಟಿ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. ಇನ್ನು ಮಾಹಿತಿ ತಂತ್ರಜ್ಞಾನದಿಂದ ರಾಜ್ಯಕ್ಕೆ ಬರುತ್ತಿದ್ದ ಆದಾಯದಲ್ಲಿಯೂ ಕುಸಿತ ಕಂಡಿದೆ ಎಂದು ಸಿಎಂ ಹೇಳಿದ್ದಾರೆ. 

ತೆರಿಗೆ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಉತ್ಪನ್ನಗಳ ಮೂಲಕ ದೇಶಕ್ಕೆ ಆದಾಯ ತಂದುಕೊಡುತ್ತಿದೆ. ಆದರೆ ರಾಜ್ಯ ಸರ್ಕಾರಕ್ಕೆ ಇದರಿಂದ ಹೆಚ್ಚು ಆದಾಯ ಬರುತ್ತಿಲ್ಲ. 2019-20 ನೇ ಸಾಲಿನಲ್ಲಿ ಕೇಂದ್ರದ ತೆರಿಗೆಯಲ್ಲಿ ರಾಜ್ಯದ ಪಾಲು ಕಡಿಮೆಯಾಗಿದೆ. 1,993 ಕೋಟಿ ರೂಪಾಯಿ ಕಡಿಮೆಯಾಗಿದ್ದು, ರಾಜ್ಯದ ಸಂಪನ್ಮೂಲ ಇಳಿಕೆಯಾಗಿದೆ. ಜಿಎಸ್ ಟಿ ನಿರೀಕ್ಷಿತ ಸಂಗ್ರಹ ಖೋತ ಕಾರಣ ಸುಮಾರು 3000 ಕೋಟಿ ರೂಪಾಯಿ ರಾಜ್ಯದ ಪಾಲು ಕಡಿಮೆಯಾಗಿದ್ದು, ಕೆಲವು ಇಲಾಖೆಗಳ ವೆಚ್ಚ ಕಡಿಮೆ ಮಾಡಿದ್ದೇವೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com