ಬಜೆಟ್ 2022 ಮಂಡನೆಗೆ ಮುನ್ನ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
ಬಜೆಟ್ 2022 ಮಂಡನೆಗೆ ಮುನ್ನ ಲೋಕಸಭೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಕೇಂದ್ರ ಬಜೆಟ್ 2022: ಕೈಗಾರಿಕೋದ್ಯಮಿಗಳು, ರಿಯಲ್ ಸೆಕ್ಟೇರ್ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ

ಕೋವಿಡ್-19 ಸಾಂಕ್ರಾಮಿಕ ಕಳೆದೆರಡು ವರ್ಷಗಳಿಂ ತಂದ ಸಂಕಷ್ಟದ ಮಧ್ಯೆಯೂ ಉದ್ಯಮಿಗಳು, ವ್ಯಾಪಾರಿಗಳು, ರಿಯಲ್ ಎಸ್ಟೇಟ್ ವಲಯದ ಉದ್ಯಮಿಗಳು ಕೇಂದ್ರ ಬಜೆಟ್-2022(Union Budget 2022)ನ್ನು ಸ್ವಾಗತಿಸಿದ್ದಾರೆ.

ಭುವನೇಶ್ವರ: ಕೋವಿಡ್-19 ಸಾಂಕ್ರಾಮಿಕ ಕಳೆದೆರಡು ವರ್ಷಗಳಿಂ ತಂದ ಸಂಕಷ್ಟದ ಮಧ್ಯೆಯೂ ಉದ್ಯಮಿಗಳು, ವ್ಯಾಪಾರಿಗಳು, ರಿಯಲ್ ಎಸ್ಟೇಟ್ ವಲಯದ ಉದ್ಯಮಿಗಳು ಕೇಂದ್ರ ಬಜೆಟ್-2022(Union Budget 2022)ನ್ನು ಸ್ವಾಗತಿಸಿದ್ದಾರೆ. ಇದೊಂದು ವಿಸ್ತಾರವಾದ ಬೆಳವಣಿಗೆ ಆಧಾರಿತ ಬಜೆಟ್ ಆಗಿದೆ ಎಂದು ಹೇಳಿದರೆ ಇನ್ನು ಕೆಲವರು ಮಧ್ಯಮ ಮತ್ತು ಸಣ್ಣ ಗಾತ್ರದ ಉದ್ಯಮ ವಲಯಗಳಿಗೆ ಬೆಂಬಲದ ಬಗ್ಗೆ ಬಜೆಟ್ ನಲ್ಲಿ ಸ್ಪಷ್ಟತೆಯಿಲ್ಲ ಎಂದು ಹೇಳಿದ್ದಾರೆ.

ಆರ್ಥಿಕ ಚೇತರಿಕೆ ಮತ್ತು ಖಾಸಗಿ ಹೂಡಿಕೆಯಲ್ಲಿ ಹೆಚ್ಚೆಚ್ಚು ಮಂದಿಯನ್ನು ಸೇರಿಸಿಕೊಳ್ಳಲು, ಸರ್ಕಾರಿ ಬಂಡವಾಳ ವೆಚ್ಚದಲ್ಲಿ ಗಣನೀಯ ಹೆಚ್ಚಳವು ಸ್ವಾಗತಾರ್ಹ ಹೆಜ್ಜೆಯಾಗಿದೆ. ಇಸಿಎಲ್‌ಜಿಎಸ್ ವಿಸ್ತರಣೆ ಮತ್ತು ಹೊಟೇಲ್ ಉದ್ಯಮ ವಲಯಕ್ಕೆ 50 ಸಾವಿರ ಕೋಟಿ ರೂಪಾಯಿಗಳ ಸಹಾಯವು ಕೋವಿಡ್-19 ಸಾಂಕ್ರಾಮಿಕ ರೋಗದಿಂದಾದ ಆರ್ಥಿಕ ಸಂಕಷ್ಟದಿಂದ ಹೊರಬರಲು ಸಹಾಯವಾಗಲಿದೆ ಎಂದು ಎಫ್ಐಸಿಸಿಐ ಹಿರಿಯ ಉಪಾಧ್ಯಕ್ಷ ಮತ್ತು ಐಎಂಎಫ್ಎ ವ್ಯವಸ್ಥಾಪಕ ನಿರ್ದೇಶಕ ಶುಭ್ರಕಾಂತ್ ಪಾಂಡಾ ಹೇಳಿದ್ದಾರೆ. 

ಬಜೆಟ್‌ನಲ್ಲಿ ಹಣಕಾಸಿನ ಶಿಸ್ತು ಮತ್ತು ವಿತ್ತೀಯ ನಿಯಂತ್ರಣಗಳಿಗೆ ಸೂಕ್ತ ಆದ್ಯತೆ ನೀಡಲಾಗಿದೆ ಎನ್ನುತ್ತಾರೆ ಉತ್ಕಾಲ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಲಿಮಿಟೆಡ್. UCCIL) ಹೇಳಿದೆ. "SIDBI ಮೂಲಕ ಸುಗಮಗೊಳಿಸಲಾದ ಸಹ-ಹೂಡಿಕೆ ಮಾದರಿಯ ಅಡಿಯಲ್ಲಿ ಸಂಯೋಜಿತ ಬಂಡವಾಳದೊಂದಿಗೆ ನಿಧಿಯ ಸ್ಥಾಪನೆಯು ಅನಾರೋಗ್ಯದ ಉದ್ಯಮಗಳಿಗೆ ಹಣಕಾಸು ಒದಗಿಸುವತ್ತ ಗಮನಹರಿಸುತ್ತದೆ. ಔಷಧೀಯ, ಕೃಷಿ ಮತ್ತು ಡಿಜಿಟಲೀಕರಣದಂತಹ ಸೂರ್ಯೋದಯ ವಲಯಗಳಿಗೆ ಬೆಂಬಲ ನೀಡುತ್ತದೆ ಎಂದು ಯುಸಿಸಿಐಎಲ್ ಉಪಾಧ್ಯಕ್ಷ (ವಾಣಿಜ್ಯ)ಅಶೋಕ್ ಶಾರದಾ ಹೇಳುತ್ತಾರೆ. ಆದಾಯ ತೆರಿಗೆ ವ್ಯತ್ಯಾಸ ಮಾಡದೇ ಇರುವುದು ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದ ವರ್ಗಗಳಿಗೆ ನಿರಾಶೆ ತಂದಿದೆ ಎಂದು ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com