ಕೇಂದ್ರ ಬಜೆಟ್ 2022: ಪ್ರಸಕ್ತ ವರ್ಷದಲ್ಲಿ ಇ-ಪಾಸ್ ಪೋರ್ಟ್ ಜಾರಿ, ಕಾಗದರಹಿತ ಇ-ಬಿಲ್ ವ್ಯವಸ್ಥೆ, ಅನುಪಯುಕ್ತ ಕಾನೂನು ರದ್ದು
ಇ-ಪಾಸ್ ಪೋರ್ಟ್ ನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಹೊರಡಿಸಲಾಗುವುದು. ಈ ಮೂಲಕ ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್-2022ರ ಮಂಡನೆ ವೇಳೆ ಪ್ರಕಟಿಸಿದ್ದಾರೆ.
Published: 01st February 2022 12:50 PM | Last Updated: 01st February 2022 01:17 PM | A+A A-

ಲೋಕಸಭೆಯಲ್ಲಿ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್
ನವದೆಹಲಿ: ಇ-ಪಾಸ್ ಪೋರ್ಟ್ ನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಹೊರಡಿಸಲಾಗುವುದು. ಈ ಮೂಲಕ ನಾಗರಿಕರಿಗೆ ಪಾಸ್ ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಲಾಗುವುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್-2022ರ ಮಂಡನೆ ವೇಳೆ ಪ್ರಕಟಿಸಿದ್ದಾರೆ.
ಲೋಕಸಭೆಯಲ್ಲಿ ಕೇಂದ್ರ ಬಜೆಟ್ ಮಂಡನೆ ವೇಳೆ ಈ ವಿಷಯ ಪ್ರಕಟಿಸಿದ ಅವರು, ಚಿಪ್ ನೊಂದಿಗೆ ಸೇರಿಸಿದ ಇ-ಪಾಸ್ ಪೋರ್ಟ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು. ಸಂಪೂರ್ಣವಾಗಿ ಕಾಗದರಹಿತ, ಇ-ಬಿಲ್ ವ್ಯವಸ್ಥೆಯನ್ನು ಎಲ್ಲಾ ಕೇಂದ್ರ ಸಚಿವಾಲಯಗಳು ಪ್ರಾರಂಭಿಸಲಿವೆ.
The issuance of e-Passports using embedded chips and futuristic tech will be rolled out in 2022-23 to enhance the convenience for citizens in overseas travel. #AatmanirbharBharatKaBudget pic.twitter.com/Y6uiLIV1St
— BJP (@BJP4India) February 1, 2022
ನಗರ ಯೋಜನೆಗಾಗಿ ಅಸ್ತಿತ್ವದಲ್ಲಿರುವ 5 ಶೈಕ್ಷಣಿಕ ಸಂಸ್ಥೆಗಳನ್ನು 250 ಕೋಟಿ ರೂಪಾಯಿಗಳ ದತ್ತಿ ನಿಧಿಯೊಂದಿಗೆ ಸೆಂಟರ್ ಫಾರ್ ಎಕ್ಸಲೆನ್ಸ್ ಎಂದು ಗೊತ್ತುಪಡಿಸಲಾಗುತ್ತದೆ. 75 ಸಾವಿರ ಅನುಸರಣೆಗಳನ್ನು ತೆಗೆದುಹಾಕಲಾಗಿದ್ದು, ವ್ಯವಹಾರಗಳಿಗೆ ಸುಲಭವಾಗುವಂತೆ 1,486 ಕೇಂದ್ರ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. 25 ಸಾವಿರ ಅನವಶ್ಯಕ ನಿಯಮಗಳು ರದ್ದು. 1,483 ಅನುಪಯುಕ್ತ ಕಾನೂನು ರದ್ದು. ಲೈಸೆನ್ಸ್ ರಾಜ್ ಕಿತ್ತು ಹಾಕಲು ಕ್ರಮ. ಗ್ರಾಮ ಸೌಕರ್ಯಕ್ಕೆ ವಿಶೇಷ ಅನುದಾನ.
ಕೇಂದ್ರ ಸರ್ಕಾರದ ಬಂಡವಾಳ ವೆಚ್ಚವು 2022-23 ರಲ್ಲಿ ರೂ 10.68 ಲಕ್ಷ ಕೋಟಿಗಳೆಂದು ಅಂದಾಜಿಸಲಾಗಿದೆ, ಇದು ಜಿಡಿಪಿಯ ಸುಮಾರು ಶೇಕಡಾ 4.1ರಷ್ಟಾಗಿದೆ. ಆತ್ಮನಿರ್ಭರವನ್ನು ದೇಶದಲ್ಲಿ ಉತ್ತೇಜಿಸಲು ಮತ್ತು ರಕ್ಷಣಾ ಉಪಕರಣಗಳ ಆಮದುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ದೇಶೀಯ ಉದ್ಯಮಕ್ಕೆ ರಕ್ಷಣೆಗಾಗಿ ಬಂಡವಾಳ ಸಂಗ್ರಹಣೆಯ ಬಜೆಟ್‌ನ ಶೇಕಡಾ 68ರಷ್ಟು ಮೀಸಲಿಡಲಾಗಿದೆ. ಇದು ಕಳೆದ ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಶೇ.58ರಷ್ಟು ಹೆಚ್ಚಾಗಿದೆ.
ಜನರ ಮತ್ತು ಸರಕು ಸಾಗಾಟಕ್ಕೆ ಸುಗಮ: ದೇಶದ ನಾಗರಿಕರು ಮತ್ತು ವಸ್ತುಗಳ ಸುಗಮ ಸಾಗಾಟಕ್ಕೆ ಪ್ರಸಕ್ತ ವರ್ಷದಲ್ಲಿಯೇ ಪ್ರಧಾನ ಮಂತ್ರಿ ಘಟಿ ಶಕ್ತಿ ಮಾಸ್ಟರ್ ಯೋಜನೆಯನ್ನು ಹೆದ್ದಾರಿಗಳಿಗೆ ರಚಿಸಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿ ಸಂಪರ್ಕ ಜಾಲವನ್ನು 20 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕ ಸಂಪನ್ಮೂಲ ಮೂಲಕ 25 ಸಾವಿರ ಕೋಟಿ ರೂಪಾಯಿಗಳಿಗೆ ವಿಸ್ತರಿಸಲಾಗುವುದು ಎಂದರು.
ಡಿಜಿಟಲ್ ಗೆ ಹೆಚ್ಚು ಒತ್ತು: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರಂಭದಿಂದಲೂ ಡಿಜಿಟಲೀಕರಣ, ಡಿಜಿಟಲ್ ವ್ಯವಹಾರಕ್ಕೆ ಹೆಚ್ಚು ಒತ್ತು ನೀಡುತ್ತಾ ಬಂದಿದೆ. ಈ ಬಾರಿಯ ಬಜೆಟ್ ನಲ್ಲಿ ಡಿಜಿಟಲ್ ಆಸ್ತಿ ಮೇಲೆ ಶೇಕಡಾ 30ರಷ್ಟು ತೆರಿಗೆ, ಸಹಕಾರ ಸಂಘಗಳಿಗೆ ತೆರಿಗೆ ಮುಕ್ತಿ, ಕ್ರಿಪ್ಟೊ ಕರೆನ್ಸಿ ಮೇಲೆ ತೆರಿಗೆ ಹೊರಿಸಲಾಗಿದೆ.