ಕೇಂದ್ರ ಬಜೆಟ್ 2022: ಎಲ್ಲಾ ಬ್ಯಾಂಕುಗಳ ಜೊತೆ ಅಂಚೆ ಕಚೇರಿಗಳ ಜೋಡಣೆ, ಎವಿಜಿಎಸ್ ವಲಯಗಳ ಉತ್ತೇಜನಕ್ಕೆ ಕಾರ್ಯಪಡೆ
ಹಣಕಾಸಿನ ಒಳಹರಿಯುವಿಕೆಗೆ ಉತ್ತೇಜನ ನೀಡಲು ಕೋರ್ ಬ್ಯಾಂಕಿಂಗ್ ಪರಿಹಾರದೊಂದಿಗೆ(CBS) ಎಲ್ಲಾ ಅಂಚೆ ಕಚೇರಿಗಳನ್ನು ಜೋಡಣೆ ಮಾಡಲಾಗುವುದು ಎಂದು ಕೇಂದ್ರ ಬಜೆಟ್-2022 ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
Published: 01st February 2022 01:24 PM | Last Updated: 01st February 2022 01:33 PM | A+A A-

ನಿರ್ಮಲಾ ಸೀತಾರಾಮನ್
ನವದೆಹಲಿ: ಹಣಕಾಸಿನ ಒಳಹರಿಯುವಿಕೆಗೆ ಉತ್ತೇಜನ ನೀಡಲು ಕೋರ್ ಬ್ಯಾಂಕಿಂಗ್ ಪರಿಹಾರದೊಂದಿಗೆ(CBS) ಎಲ್ಲಾ ಅಂಚೆ ಕಚೇರಿಗಳನ್ನು ಜೋಡಣೆ ಮಾಡಲಾಗುವುದು ಎಂದು ಕೇಂದ್ರ ಬಜೆಟ್-2022 ಮಂಡನೆ ವೇಳೆ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಇಂದು ಲೋಕಸಭೆಯಲ್ಲಿ ಬಜೆಟ್ ಮಂಡನೆ ಭಾಷಣ ಮಾಡಿದ ಅವರು, ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕ್‌ಗಳನ್ನು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕ್‌ಗಳು ಸ್ಥಾಪಿಸಲಿವೆ ಎಂದರು.
ಏನಿದು ಕೋರ್ ಬ್ಯಾಂಕಿಂಗ್ ಪರಿಹಾರ?: ಕೋರ್ ಬ್ಯಾಂಕಿಂಗ್ ಪರಿಹಾರ (CBS) ಬ್ಯಾಂಕ್ ಶಾಖೆಗಳ ಸಂಪರ್ಕವಾಗಿದೆ. ಇದು ಗ್ರಾಹಕರು ತಮ್ಮ ಖಾತೆಗಳನ್ನು ನಿರ್ವಹಿಸಲು ಮತ್ತು ಪ್ರಪಂಚದ ಯಾವುದೇ ಭಾಗದಿಂದ ವಿವಿಧ ಬ್ಯಾಂಕಿಂಗ್ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗುತ್ತದೆ. ಸರಳವಾಗಿ ಹೇಳುವುದಾದರೆ, ಬ್ಯಾಂಕಿಂಗ್ ವಹಿವಾಟುಗಳನ್ನು ಮಾಡಲು ನಿಮ್ಮ ಸ್ವಂತ ಶಾಖೆಗೆ ಭೇಟಿ ನೀಡುವ ಅಗತ್ಯವಿಲ್ಲ. ನೀವು ಅದನ್ನು ಯಾವುದೇ ಸ್ಥಳದಿಂದ ಯಾವುದೇ ಸಮಯದಲ್ಲಿ ಮಾಡಬಹುದಾಗಿದೆ.
-ಬ್ಯಾಂಕಿಂಗ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಂದಿರುವ ಸರಳ ಕ್ರಮಗಳು ಹೀಗಿವೆ: ಸರಕುಗಳ ಸುಲಭ ಸಾಗಾಟಕ್ಕೆ ಏಕೀಕೃತ ಲಾಜಿಸ್ಟಿಕ್ಸ್ ಇಂಟರ್ಫೇಸ್ ಪ್ಲಾಟ್‌ಫಾರ್ಮ್‌ನಲ್ಲಿ ಎಲ್ಲಾ-ಮೋಡ್ ಆಪರೇಟರ್‌ಗಳ ನಡುವೆ ಅಂಕಿಅಂಶ ವಿನಿಮಯ ಮಾಡುವ ಕ್ರಮ ತರಲಾಗುವುದು.
-ಭಾರತದ ಉತ್ತರ ಭಾಗದ ಗಡಿಯಲ್ಲಿರುವ ಗ್ರಾಮಗಳು ಅಭಿವೃದ್ಧಿಯನ್ನು ಹೆಚ್ಚಿಸಲು ಹೊಸ ಗ್ರಾಮ ಕಾರ್ಯಕ್ರಮವನ್ನು ತರಲಾಗುವುದು.
-ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ (ಎವಿಜಿಸಿ) ವಲಯವು ಯುವಕರ ಶಕ್ತಿ, ಕೌಶಲ್ಯ, ಸಾಮರ್ಥ್ಯಕ್ಕೆ ತಕ್ಕಂತೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಇದಕ್ಕಾಗಿ AVGC ಪ್ರಚಾರ ಕಾರ್ಯಪಡೆಯನ್ನು ಸ್ಥಾಪಿಸಲಾಗುವುದು.
-ಕೃಷಿ ಉತ್ಪನ್ನ ಮೌಲ್ಯ ಸರಪಳಿಗೆ ಸಂಬಂಧಿಸಿದ ಕೃಷಿ ಮತ್ತು ಗ್ರಾಮೀಣ ಉದ್ಯಮಗಳಿಗೆ ಸ್ಟಾರ್ಟ್‌ಅಪ್‌ಗಳಿಗೆ ಹಣಕಾಸು ಒದಗಿಸಲು ನಬಾರ್ಡ್ ಮೂಲಕ ನಿಧಿಯನ್ನು ಒದಗಿಸುವುದು. ಸ್ಟಾರ್ಟ್‌ಅಪ್‌ಗಳು ಎಫ್‌ಪಿಒಗಳನ್ನು ಬೆಂಬಲಿಸುವ ಮೂಲಕ ರೈತರಿಗೆ ತಂತ್ರಜ್ಞಾನವನ್ನು ಒದಗಿಸುತ್ತದೆ.