ಕೇಂದ್ರ ಬಜೆಟ್ 2022: ಯಾವುದು ಅಗ್ಗ? ಯಾವುದು ದುಬಾರಿ? ಇಲ್ಲಿದೆ ಮಾಹಿತಿ...

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. 
(ಸಾಂಕೇತಿಕ ಚಿತ್ರ)
(ಸಾಂಕೇತಿಕ ಚಿತ್ರ)

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆ.1 ರಂದು 2022-23 ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡುವುದಾಗಿ ಘೋಷಿಸಿದ್ದಾರೆ. 

ತೆರಿಗೆ ಇಳಿಕೆ ಮಾಡಿರುವುದರ ಪರಿಣಾಮ ಒಂದಷ್ಟು ಉತ್ಪನ್ನ, ಪದಾರ್ಥಗಳ ಬೆಲೆಯೂ ಇಳಿಕೆಯಾಗಿದೆ. 

ಬೆಲೆ ಅಗ್ಗವಾಗಿರುವ ವಸ್ತು/ ಪದಾರ್ಥಗಳ ವಿವರ ಹೀಗಿದೆ. 

  1. ಮೊಬೈಲ್ 
  2. ಚಾರ್ಜರ್ 
  3. ಚಿನ್ನ, ವಜ್ರಾಭರಣ
  4. ಎಲೆಕ್ಟ್ರಾನಿಕ್ಸ್ ಉಪಕರಣಗಳು 
  5. ಬಟ್ಟೆ. ಚಪ್ಪಲಿ ಚರ್ಮದ ಉತ್ಪನ್ನಗಳು 
  6. ವಿದೇಶಿ ಉತ್ಪನ್ನಗಳ ಬೆಲೆ ಇಳಿಕೆ 
  7. ಪೆಟ್ರೋಲಿಯಂ ಉತ್ಪನ್ನಗಳಿಗೆ ಅಗತ್ಯವಿರುವ ರಾಸಾಯನಿಕಗಳ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ 
  8. ಸ್ಟೀಲ್ ಸ್ಟ್ರಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕ
  9. ವಿದೇಶಿ ಯಂತ್ರೋಪಕರಣಗಳು 
  10. ಕೃಷಿ ಸರಕುಗಳು 
  11. ಸಹಕಾರದ ಹೆಚ್ಚುವರಿ ಶುಲ್ಕ ಶೇ.12-7 ಕ್ಕೆ ಇಳಿಕೆ

ಯಾವುದು ದುಬಾರಿ?

  1. ಕ್ರಿಪ್ಟೋಕರೆನ್ಸಿ ಮೇಲಿನ ಹೂಡಿಕೆ 
  2. ಆಮದುಮಾಡಿಕೊಳ್ಳಲಾಗುವ ವಸ್ತುಗಳು 
  3. ಛತ್ರಿಗಳ ಮೇಲಿನ ಸುಂಕ ಏರಿಕೆ
  4. ಚಿನ್ನದ ತದ್ರೂಪಿ ಆಭರಣಗಳು 
  5. ಬ್ಲೆಂಡಿಂಗ್ ರಹಿತ ಇಂಧನ
  6. ಕ್ಯಾಪಿಟಲ್ ಸರಕುಗಳು

ಇದೇ ವೇಳೆ ಮೆಂತೆ ಎಣ್ಣೆಯ ಮೇಲಿನ ಕಸ್ಟಮ್ ಸುಂಕವನ್ನು ಸಹ ಕಡಿಮೆ ಮಾಡಲಾಗಿದೆ.

ಯಾವ ಸರಕುಗಳ ಮೇಲೆ ಕಸ್ಟಮ್ ಸುಂಕ ಹೆಚ್ಚಳ?

ಬಂಡವಾಳ ಸರಕುಗಳ ಮೇಲೆ ಶೇಕಡಾ 7.5ರಷ್ಟು ಆಮದು ಸುಂಕವನ್ನು ವಿಧಿಸಲಾಗಿದ್ದು, ಈ ಮೊದಲು ಇದ್ದ ಆಮದು ಸುಂಕದಲ್ಲಿ ವಿನಾಯಿತಿಯನ್ನು ತೆಗೆದುಹಾಕಲಾಗಿದೆ. ಅನುಕರಣೆ ಆಭರಣಗಳ ಮೇಲಿನ ಕಸ್ಟಮ್ ಸುಂಕವನ್ನು ಹೆಚ್ಚಿಸಲಾಗಿದ್ದು, ಅದರ ಆಮದನ್ನು ಕಡಿಮೆ ಮಾಡಬಹುದು. ವಿದೇಶಿ ಕೊಡೆ ಕೂಡ ದುಬಾರಿಯಾಗಲಿದೆ. ಇದಲ್ಲದೆ ಮಿಶ್ರಣ ಮಾಡದ ಇಂಧನದ ಮೇಲೂ ಕೂಡ ಬೆಲೆ ಏರಿಕೆ ಮಾಡಲಾಗಿದೆ.ಉಳಿದಂತೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್ ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಈ ಹಿಂದೆ ಇದ್ದ ತೆರಿಗೆ ಪದ್ಧತಿಯನ್ನೇ ಮುಂದುವರೆಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com