ಸಾಂದರ್ಭಿಕ ಚಿತ್ರ
ಕೇಂದ್ರ ಬಜೆಟ್
ವಿವಾದ್ ಸೇ ವಿಶ್ವಾಸ್- 2: ವಾಣಿಜ್ಯ ವಿವಾದಗಳ ಪರಿಹಾರಕ್ಕೆ ಮತ್ತೊಂದು ಯೋಜನೆ ಪ್ರಕಟ
ವಾಣಿಜ್ಯ ವಿವಾದಗಳ ಇತ್ಯರ್ಥಕ್ಕಾಗಿ ವಿವಾದ್ ಸೆೇ ವಿಶ್ವಾಸ್-2 ಯೋಜನೆಯಡಿ ಸರ್ಕಾರ ಮತ್ತೊಂದು ಪರಿಹಾರ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
ನವದೆಹಲಿ: ವಿವಾದ್ ಸೆೇ ವಿಶ್ವಾಸ್-2 ಯೋಜನೆಯಡಿ ಸರ್ಕಾರ ಮತ್ತೊಂದು ಪರಿಹಾರ ಯೋಜನೆಯನ್ನು ಜಾರಿಗೆ ತರಲಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಬುಧವಾರ ಹೇಳಿದ್ದಾರೆ.
2023-24ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್, ವಾಣಿಜ್ಯ ವಿವಾದಗಳ ಇತ್ಯರ್ಥಕ್ಕಾಗಿ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ ಎಂದರು.
ವಿವಾದ್ ಸೇ ವಿಶ್ವಾಸ್ ಯೋಜನೆಯಡಿ ತೆರಿಗೆ, ದಂಡ ಅಥವಾ ಶುಲ್ಕಗಳಿಗೆ ಸಂಬಂಧಿಸಿದ ವಿವಾದಗಳನ್ನು ಇತ್ಯರ್ಥಪಡಿಸಲಾಗುತ್ತದೆ. ವಿವಾದಿತ ತೆರಿಗೆಯ ಶೇ. 100 ರಷ್ಟು ಪಾವತಿ ಕುರಿತ ಮೌಲ್ಯಮಾಪನ ಅಥವಾ ಮರುಮೌಲ್ಯಮಾಪನ ಆದೇಶ ಮತ್ತು ಶೇ. 25 ರಷ್ಟು ದಂಡ, ಬಡ್ಡಿ ಅಥವಾ ಶುಲ್ಕಕ್ಕೆ ಸಂಬಂಧಿಸಿದ ವಿವಾದವನ್ನು ಪರಿಹರಿಸಲಾಗುತ್ತದೆ.
ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ 5 ಜಿ ಸೇವೆಗಾಗಿ ಆ್ಯಪ್ ಅಭಿವೃದ್ಧಿಗಾಗಿ 100 ಲ್ಯಾಬ್ ಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ