ಕೆಂಪು ಸೀರೆ, ಕೆಂಪು ಬಿಂದಿ, ಕೆಂಪು ಡಿಜಿಟಲ್ ಟ್ಯಾಬ್... ಕೆಂಪಿನಿಂದ ಕಂಗೊಳಿಸಿದ ಸಚಿವೆ ನಿರ್ಮಲಾ: ಕೆಂಪು ಶಕ್ತಿ, ಧೈರ್ಯದ ಸಂಕೇತ

2023 ರ ಕೇಂದ್ರ ಬಜೆಟ್ ನ್ನು ಬುಧವಾರ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಎಲ್ಲಾ ಕಣ್ಣುಗಳು ಇರುವುದರಿಂದ, ಈ ವರ್ಷ ಸಚಿವೆ ಯಾವ ಬಣ್ಣದ ಸೀರೆ ಉಟ್ಟಿದ್ದಾರೆ, ಎಂತಹ ಸೀರೆ ಉಟ್ಟಿದ್ದಾರೆ ಎಂಬ ಮೇಲೆ ಸಹ ಚರ್ಚೆಗಳು, ಮಾಧ್ಯಮಗಳ ಕಣ್ಣು ಹೊರಳುತ್ತವೆ.
ಕೆಂಪು ಸೀರೆಯಲ್ಲಿ ಕಂಗೊಳಿಸಿದ ಸಚಿವೆ ನಿರ್ಮಲಾ ಸೀತಾರಾಮನ್
ಕೆಂಪು ಸೀರೆಯಲ್ಲಿ ಕಂಗೊಳಿಸಿದ ಸಚಿವೆ ನಿರ್ಮಲಾ ಸೀತಾರಾಮನ್

ನವದೆಹಲಿ: 2023 ರ ಕೇಂದ್ರ ಬಜೆಟ್ ನ್ನು ಬುಧವಾರ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಮೇಲೆ ಎಲ್ಲಾ ಕಣ್ಣುಗಳು ಇರುವುದರಿಂದ, ಈ ವರ್ಷ ಸಚಿವೆ ಯಾವ ಬಣ್ಣದ ಸೀರೆ ಉಟ್ಟಿದ್ದಾರೆ, ಎಂತಹ ಸೀರೆ ಉಟ್ಟಿದ್ದಾರೆ ಎಂಬ ಮೇಲೆ ಸಹ ಚರ್ಚೆಗಳು, ಮಾಧ್ಯಮಗಳ ಕಣ್ಣು ಹೊರಳುತ್ತವೆ.

ವಿತ್ತ ಸಚಿವೆ ಈ ವರ್ಷ ಕಂದು ಬಣ್ಣದ ಬಾರ್ಡರ್‌ನೊಂದಿಗೆ ಕಾಂತಿಯುತ ಕೆಂಪು ಸೀರೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. 2019ರಲ್ಲಿ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಬಂದ ನಂತರ ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮ್ ಬಜೆಟ್ ಮಂಡನೆ ದಿನ ಕೈಮಗ್ಗ ಸೀರೆಗಳನ್ನು ಧರಿಸುತ್ತಾ ಬಂದಿದ್ದಾರೆ. 

ಭಾರತೀಯ ಸೀರೆ ಎಂದರೆ ಹಣಕಾಸು ಸಚಿವೆಗೆ ಸಹಜವಾಗಿ ಅಚ್ಚುಮೆಚ್ಚು.  ಕೈಮಗ್ಗ ಸೀರೆಯನ್ನು ಉತ್ತೇಜಿಸುವ ಬಗ್ಗೆ ಅವರು ಆಗಾಗ ಮಾತನಾಡುವುದುಂಟು. 2019 ರಲ್ಲಿ, ಅವರು ಭಾರತೀಯ ಜವಳಿಗಳ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. "ರೇಷ್ಮೆ ಅಥವಾ ಹತ್ತಿ, ಒರಿಸ್ಸಾ-ಕೈಮಗ್ಗ ಸೀರೆಗಳು ನನ್ನ ಅಚ್ಚುಮೆಚ್ಚು. ಅವುಗಳ ಬಣ್ಣ, ನೇಯ್ಗೆ, ವಿನ್ಯಾಸ, ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಿಕೊಂಡಿದ್ದರು.

ಈ ವರ್ಷ ಸಚಿವೆ ಧರಿಸಿರುವ ಸೀರೆ ಸಾಂಪ್ರದಾಯಿಕ ಟೆಂಪಲ್ ಬಾರ್ಡರ್ ಸೀರೆ ಎಂದು ಕರೆಯಲಾಗುತ್ತದೆ. ಟೆಂಪಲ್ ಸೀರೆಗಳು ಸಾಮಾನ್ಯವಾಗಿ ಹತ್ತಿ, ರೇಷ್ಮೆ ಅಥವಾ ಎರಡೂ ಮಿಶ್ರಣವಿರುವ ಸೀರೆಗಳಾಗಿರುತ್ತವೆ. ಕೆಂಪು ಬಣ್ಣ ಪ್ರೀತಿ, ಬದ್ಧತೆ, ಶಕ್ತಿ ಮತ್ತು ಧೈರ್ಯಗಳನ್ನು ಸೂಚಿಸುತ್ತದೆ. ಹಿಂದೂ ಸಂಪ್ರದಾಯದಲ್ಲಿ ಕೆಂಪು ಬಣ್ಣ ದುರ್ಗೆ ದೇವಿಗೆ ಹೋಲಿಕೆ ಮಾಡಲಾಗುತ್ತದೆ. ದುರ್ಗೆ ದೇವಿ ಸ್ತ್ರೀಯರ ಶಕ್ತಿ, ಸಾಮರ್ಥ್ಯದ ಸಂಕೇತ. 

ಕೆಂಪು ಡಿಜಿಟಲ್ ಟ್ಯಾಬ್: ಕೇವಲ ಕೆಂಪು ಸೀರೆ ಮಾತ್ರವಲ್ಲದೆ, ಕೈಯಲ್ಲಿ ಬಜೆಟ್ ಪ್ರತಿಗಳನ್ನು ಕೆಂಪು ಡಿಜಿಟಲ್ ಟ್ಯಾಬ್ ನಲ್ಲಿ ಇರಿಸಲಾಗಿದೆ. ಕೆಂಪು ಬಣ್ಣದಲ್ಲಿ ಸಾಂಪ್ರದಾಯಿಕವಾಗಿ ನಿರ್ಮಲಾ ಸೀತಾರಾಮನ್ ಮಿಂಚುತ್ತಿದ್ದಾರೆ. ಹಣೆಗೊಂದು ಸಣ್ಣ ತಿಲಕ ಮತ್ತು ಚಿನ್ನದ ಬಳೆಗಳನ್ನು ಧರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com