ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ಸ್ಪೈಸ್‌ಜೆಟ್ ವಿಮಾನಯಾನ

ಭಾರತದಲ್ಲಿ ಹೆಚ್ಚಿನ ವಿಮಾನಯಾನ ಪ್ರಯಾಣಿಕರು ಬಯಸುವ ಕಡಿಮೆ ದರದಲ್ಲಿ ಪ್ರಯಾಣ...
ಬೆಂಗಳೂರು-ಬ್ಯಾಂಕಾಕ್ ನಡುವೆ ನೇರ ಸ್ಪೈಸ್‌ಜೆಟ್ ವಿಮಾನಯಾನ
Updated on

ಭಾರತದಲ್ಲಿ ಹೆಚ್ಚಿನ ವಿಮಾನಯಾನ ಪ್ರಯಾಣಿಕರು ಬಯಸುವ ಕಡಿಮೆ  ದರದಲ್ಲಿ ಪ್ರಯಾಣ ಸೌಲಭ್ಯ ಕಲ್ಪಿಸುವ ಸ್ಪೈಸ್‌ಜೆಟ್, ಬೆಂಗಳೂರು ಮತ್ತು ಥೈಲ್ಯಾಂಡ್‌ನ ರಾಜಧಾನಿ ಬ್ಯಾಂಕಾಕ್ ನಡುವೆ ನೇರ ವಿಮಾನಯಾನ ಸೌಲಭ್ಯ ಆರಂಭಿಸಿದೆ.
ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್‌ನಿಂದ ಸ್ಪೈಸ್‌ಜೆಟ್‌ನ ಎಸ್‌ಜಿ 91 ವಿಮಾನ ಇತ್ತೀಚೆಗೆ ಬೆಳಗಿನ ಜಾವ 03.35ಗಂಟೆಗೆ ನಿರ್ಗಮಿಸುವುದರೊಂದಿಗೆ ಬೆಂಗಳೂರಿನಿಂದ ಕಡಿಮೆ ಪ್ರಯಾಣ ದರದಲ್ಲಿ ವಿಮಾನ ಸಂಪರ್ಕ ಸೌಲಭ್ಯ ಕಲ್ಪಿಸಿದ ಮೊದಲ ಸಂಸ್ಥೆ ಎಂಬ ಹಿರಿಮೆಗೂ ಪಾತ್ರವಾಗಿದೆ.
ಬ್ಯಾಂಕಾಕ್‌ಗೆ ವಿಮಾನ ಸೌಲಭ್ಯ ಪ್ರತಿ ಸೋಮವಾರ, ಬುಧವಾರ, ಶುಕ್ರವಾರ ಮತ್ತು ಭಾನುವಾರ ಇರಲಿದ್ದು, , ಅದೇ ದಿನಗಳಂದು ಎಸ್‌ಜಿ 92 ವಿಮಾನ ಬೆಂಗಳೂರಿಗೆ ವಾಪಸ್ಸಾಗಲಿದೆ.
ಏಕ ಮುಖದ ಆರಂಭಿಕ ದರ 7999 ಆಗಿದೆ. ಇದು, ಉದ್ಯಮದಲ್ಲಿಯೇ ಅತಿ ಕಡಿಮೆ, ಆಕರ್ಷಕ ದರವಾಗಿದೆ. ಸ್ಪೈಸ್‌ಜೆಟ್ ಇದರ ಜತೆಗೆ ಬೆಂಗಳೂರು ಮೂಲಕ ಇತರೆ ನಗರಗಳಿಗೂ ಉತ್ತಮ ವಿಮಾನ ಸಂಪರ್ಕ ಒದಗಿಸಲಿದೆ. ಬೆಂಗಳೂರು ಮತ್ತು ಬ್ಯಾಂಕಾಕ್ ನಡುವೆ ಪ್ರಯಾಣಿಸಲು ಯೋಜನೆ ರೂಪಿಸುತ್ತಿರುವ ಪ್ರಯಾಣಿಕರು ಸ್ಪೈಸ್‌ಜೆಟ್ ವೆಬ್‌ಸೈಟ್ (www.spicejet.com) ಅಥವಾ ಶುಲ್ಕರಹಿತ ಟಿಕೆಟ್ ಕಾದಿರಿಸುವ ದೂರವಾಣಿ ಸಂಖ್ಯೆ 09871803333 ಗೆ ಕರೆ ಮಾಡಿ ಟಿಕೆಟ್ ಕಾದಿರಿಸಬಹುದು.

ನೋಕಿಯಾ ಆಶಾ 501 ಮೊಬೈಲ್
ಫೋನ್‌ಗಳಿಗೆ ಉಚಿತ ಇನ್ಷೂರೆನ್ಸ್
ಬೆಂಗಳೂರು: ದೀಪಾವಳಿ ಹಬ್ಬದ ಸಡಗರವನ್ನು ಮತ್ತಷ್ಟು ಹೆಚ್ಚಿಸಲು ನೋಕಿಯಾ ಇಂಡಿಯಾ ಸಂಸ್ಥೆ ತನ್ನ ನೋಕಿಯಾ ಆಶಾ 501 ಸರಣಿಯ ಮೊಬೈಲ್ ಫೋನ್‌ಗಳಿಗೆ ಉಚಿತ ಇನ್ಷೂರೆನ್ಸ್ ಆಫರ್ ಒದಗಿಸುತ್ತಿದೆ. ನೋಕಿಯಾ ಪ್ರಸ್ತುತಪಡಿಸುತ್ತಿರುವ ಈ ನೂತನ ಆಫರ್ ನ.15ರವರೆಗೆ ಮಾತ್ರವೇ ಲಭ್ಯವಿದೆ. ಈ ಮೂಲಕ ಗ್ರಾಹಕರಿಗೆ ಮೊಬೈಲ್ ಫೋನ್ ಕಳೆದುಹೋಗುವ ಅಥವಾ ಹಾಳಾಗುವ ಕುರಿತಾಗಿ ಯೋಚಿಸುವ ಚಿಂತೆ ದೂರವಾಗಲಿದೆ. ಗ್ರಾಹಕರ ಮೊಬೈಲ್ ಫೋನ್‌ಗಳಿಗೆ ನ್ಯೂ ಇಂಡಿಯಾ ಅಸ್ಷೂರೆನ್ಸ್ ಸಂಸ್ಥೆ ವಿಮಾ ಸೌಲಭ್ಯ ಒದಗಿಸಲಿದೆ. ಈ ಎಲ್ಲಾ ಕಾರ್ಯಗಳನ್ನು ಯೂನಿವರ್ಸಲ್ ಇನ್ಷುರೆನ್ಸ್ ಬ್ರೋಕರ್ಸ್ ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಮೇಲ್ವಿಚಾರಣೆ ನಡೆಸಲಿದೆ. ನೋಕಿಯಾ ಇಂಡಿಯಾ ಸಂಸ್ಥೆಯ ಮಾರ್ಕೆಟಿಂಗ್ ಡೈರೆಕ್ಟರ್ ವಿರಲ್ ಓಜಾ ಮಾತನಾಡಿ, 'ಸಂಸ್ಥೆಯ ನೋಕಿಯಾ ಆಶಾ 501 ಸರಣಿಯ ಮೊಬೈಲ್ ಫೋನ್‌ಗಳಿಗೆ ಯಶಸ್ಸು ತಂದು ಕೊಟ್ಟ ಗ್ರಾಹಕರುಗಳಿಗೆ ಧನ್ಯವಾದ ತಿಳಿಸಿದರು. ಭಾರತದಲ್ಲಿ ಶೇ.53ರಷ್ಟು ವಯಸ್ಕರು ತಮ್ಮ ಮೊಬೈಲ್ ಫೋನ್‌ಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಸಂಸ್ಥೆಯು ಗ್ರಾಹಕರನ್ನು ಇಂತಹ ಗೋಜಿನಿಂದ ಪಾರು ಮಾಡಲು ವಿಮಾ ಸೌಲಭ್ಯ ಒದಗಿಸಲು ಮುಂದಾಗಿದೆ' ಎಂದು ತಿಳಿಸಿದರು.

ಮಲಬಾರ್ ಗೋಲ್ಡ್ ಆನ್‌ಲೈನ್
ವಿಶ್ವದ 3ನೇ ಅತಿದೊಡ್ಡ ಚಿನ್ನಾಭರಣ ಮಾರಾಟಗಾರರಾದ 'ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್‌' ಆನ್‌ಲೈನ್ ಕ್ಷೇತ್ರದಲ್ಲೂ ಸಹ ತನ್ನ ವ್ಯಾಪಾರವನ್ನು ವಿಸ್ತರಿಸಿಕೊಂಡಿದೆ. ಸದಾ ವೈವಿಧ್ಯತೆಯ ಮೂಲಕ ಗಮನ ಸೆಳೆಯುವ ಮಲಬಾರ್ ಗೋಲ್ಡ್ ಸಂಸ್ಥೆಯು ತನ್ನ ಮಹಾತ್ವಾಕಾಂಕ್ಷಿ 'ಆನ್‌ಲೈನ್ ಮಳಿಗೆ' ಆರಂಭಿಸುವ ಮೂಲಕ ಗ್ರಾಹಕರ ಮನೆ ತಲುಪಲು ಸಜ್ಜಾಗಿದೆ. ರಾಯಬಾರಿ ಬಾಲಿವುಡ್ ನಟಿ ಕರೀನಾ ಕಪೂರ್ 'ಮಲಬಾರ್ ಸಂಸ್ಥೆಯ ಆನ್‌ಲೈನ್‌' ಮಳಿಗೆಯನ್ನು ಇತ್ತೀಚಿಗೆ ಉದ್ಘಾಟಿಸಿದರು. ಸಂಸ್ಥೆಯು ಸದಾ ಬದಲಾವಣೆಗೆ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಈ ಆನ್‌ಲೈನ್ ಮಳಿಗೆ ಆರಂಭವೇ ಸೂಚನೆ. ನವೀನ ಮತ್ತು ಉತ್ತಮ ಗುಣಮಟ್ಟದ ಶೈಲಿಯ ಚಿನ್ನಾಭರಣಗಳ ಸಂಗ್ರಹಗಳು ಈ ಆನ್‌ಲೈನ್ ಮಳಿಗೆಯಲ್ಲಿ ಲಭ್ಯ ಎಂದು ಮಲಬಾರ್ ಸಂಸ್ಥೆ ನಿರ್ವಾಹಕ ನಿರ್ದೇಶಕ ಕೆ.ಪಿ.ಅಬ್ದುಲ್ ಸಲಾಂ ತಿಳಿಸಿದ್ದಾರೆ. ಗ್ರಾಹಕರು ತಮಗೆ ಬೇಕಾದ ವಸ್ತುಗಳನ್ನು ಆನ್‌ಲೈನ್ ಮಳಿಗೆಯಲ್ಲಿ ಖರೀದಿ ಮಾಡುವ ಮೂಲಕ ಅದನ್ನು ತಮಗೆ ಬೇಕಾದ ವಿಳಾಸಕ್ಕೆ ತರಿಸಿಕೊಳ್ಳಬಹುದು. ಒಂದು ವೇಳೆ ಖರೀದಿಸಿದ ವಸ್ತು ಬೇಡವೆಂದೆನಿಸಿದರೆ 14  ದಿನಗಳ ಒಳಗಾಗಿ ಅದನ್ನು ಹಿಂದಿರುಗಿಸಬಹುದು. ಅಲ್ಲದೇ ಗ್ರಾಹಕರು ತಾವು ಪಡೆದ ವಸ್ತುವಿಗೆ ಉಚಿತ ಇನ್ಷೂರೆನ್ಸ್ ಹಾಗೂ ಜೀವನಪರ್ಯಂತ ಉಚಿತ ನಿರ್ವಹಣೆ ಸೌಲಭ್ಯವನ್ನು ಪಡೆಯಬಹುದು.

ಯುನಿವರ್ಸೆಲ್‌ನಿಂದ ಹೊಸ ಆಫರ್
ಮೊಬೈಲ್ ರಿಟೇಲರ್ ಆಗಿರುವ ಯುನಿವರ್ಸೆಲ್ ಈಗ ವರ್ಷದ ಅತಿದೊಡ್ಡ ಹಬ್ಬಕ್ಕಾಗಿ ಅಮಿತ ಆಫರ್‌ಗಳನ್ನು ಕೊಡುಗೆಯಾಗಿ ನೀಡುತ್ತಿದೆ. ಈ ದೀಪಾವಳಿಯಲ್ಲಿ, ಗ್ರಾಹಕರು ಶೇ.100ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ನ.2ರವರೆಗೆ ಮೊಬೈಲ್ ಫೋನ್ ಅಥವಾ ಟ್ಯಾಬ್ಲೆಟ್ ಕೊಂಡುಕೊಳ್ಳುವ ಗ್ರಾಹಕರು ಅದೃಷ್ಟಶಾಲಿಗಳಾಗಿದ್ದು, ಸಂಪೂರ್ಣ ಕ್ಯಾಶ್ ಬ್ಯಾಕ್‌ನ ಅವಕಾಶ ತಮ್ಮದಾಗಿಸಿಕೊಳ್ಳಬಹುದು. ಮಾತ್ರವಲ್ಲದೇ, ಯಾವುದೇ ಫೋನ್ ಖರೀದಿಸಿದರೂ ಆ ಗ್ರಾಹಕರಿಗೆ ಒಂದು ಖಚಿತ ಉಡುಗೊರೆ ನೀಡಲಾಗುತ್ತದೆ. ಉಚಿತ ಡೆಟಾ ಪ್ಯಾಕೇಜ್‌ನಿಂದ ಹಿಡಿದು  ಬ್ರ್ಯಾಂಡೆಡ್ ಬ್ಲೂಟೂತ್ ಸೆಟ್‌ವರೆಗೂ, ಯುನಿವರ್ಸೆಲ್‌ನಲ್ಲಿ ಖರೀದಿ ಮಾಡಿದ ಬಳಿಕ ಖಚಿತ ಉಡುಗೊರೆ ಪಡೆಯಬಹುದು.

'ಸಂಪೂರ್ಣ ಲಕ್ಷ್ಮೀ ಪೂಜಾ ಪ್ಯಾಕ್‌'
ಸೈಕಲ್ ಬ್ರಾಂಡ್ ಅಗರಬತ್ತಿ ಮಾರುಕಟ್ಟೆಗೆ
ಸೈಕಲ್ ಪ್ಯೂರ್ ಅಗರಬತ್ತಿ ದೀಪಾವಳಿ ಹಬ್ಬಕ್ಕಾಗಿ 'ಸಂಪೂರ್ಣ ಲಕ್ಷ್ಮೀ ಪೂಜಾ ಪ್ಯಾಕ್‌' ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಲಕ್ಷ್ಮೀ ಪೂಜಾ ಪ್ಯಾಕ್ ಅತ್ಯಂತ ಸುಲಭವಾಗಿ ಬಳಸಬಹುದಾದ ಪೂಜಾ ಪ್ಯಾಕ್ ಆಗಿದ್ದು, ಈ ಹಬ್ಬದ ಋತುವಿನಲ್ಲಿ ಲಕ್ಷ್ಮೀ ಪೂಜೆಯನ್ನು ಸರಾಗವಾಗಿ ಮಾಡಲೆಂದೇ ತಯಾರಿಸಲಾಗಿದೆ. ಈ ಪ್ಯಾಕ್ ಲಕ್ಷ್ಮೀ ಪೂಜೆಗೆ ಅಗತ್ಯವಿರುವ ಎಲ್ಲಾ ಪರಿಕರಗಳನ್ನು ಹೊಂದಿದೆ. ಗಣೇಶ  ಮತ್ತು ಲಕ್ಷ್ಮೀ ಮೂರ್ತಿಗಳು, ತೋರಣ, ಕಪ್ ಸಾಂಬ್ರಾಣಿ, ಅಗರಬತ್ತಿ ಹೋಲ್ಡರ್, ಗಂಧದ ಮಾತ್ರೆಗಳು, ಧೂಪ, ದೀಪಕ್ಕೆ ಬೇಕಾದ ಪೂಗಿ ಫಲ, ಗಂಗಾಜಲ, ಕಂಕಣ, ಸೌಭಾಗ್ಯ ಅಲಂಕಾರ ಮತ್ತು ಅನೇಕ ಪರಿಕರಗಳನ್ನು ಪ್ಯಾಕ್ ಹೊಂದಿದೆ. ಈ ಬಗ್ಗೆ ಮಾತನಾಡಿದ ಸೈಕಲ್ ಪ್ಯೂರ್ ಅಗರಬತ್ತೀಸ್‌ನ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ 'ಹಬ್ಬ ಅಂದರೆ ನಮ್ಮ ಕುಟುಂಬ ಹಾಗೂ ಗೆಳೆಯರು ಒಂದುಕಡೆ ಸೇರಿ ಹಬ್ಬದ ಸಂಭ್ರಮವನ್ನು ಸವಿಯುವ ಸಮಯವಾಗಿದೆ. ಈ ಸಾಂಪ್ರದಾಯಿಕ ಆಚರಣೆಗೆ ಸೈಕಲ್ ಪ್ಯೂರ್ ಅಗರಬತ್ತೀಸ್ ಉತ್ತಮ ಕೊಡುಗೆ ನೀಡಿದೆ' ಎಂದರು.

'ನಿಸಾನ್ ಸೇಫ್ಟಿ ಡ್ರೈವಿಂಗ್ ಫೋರಂ' ಕಾರ್ಯಕ್ರಮ
ಭಾರತದಲ್ಲಿ ನಿಸಾನ್ ಗ್ರೂಪ್ ಆಫ್ ಇಂಡಿಯಾ ತನ್ನ ಯೋಜನೆ 'ನಿಸಾನ್ ಸೇಫ್ಟಿ ಡ್ರೈವಿಂಗ್ ಫೋರಂ'ನ 2ನೇ ಹಂತದ ಕಾರ್ಯಕ್ರಮಕ್ಕೆ ಇತ್ತೀಚಿಗೆ  ಬೆಂಗಳೂರಿನಲ್ಲಿ ಚಾಲನೆ ನೀಡಿತು. ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳು ರಸ್ತೆ ಸುರಕ್ಷಾ ನಿಯಮಗಳನ್ನು ಸಿಮ್ಯುಲೇಟರ್‌ಗಳು, ಸಂವಹನದ ಮೂಲಕ ತಿಳಿದರು. ಸೀಟ್ ಬೆಲ್ಟ್‌ಗಳು, ಏರ್ ಬ್ಯಾಗ್‌ಗಳ ಪ್ರಾಮುಖ್ಯ ಅರಿತರು. ಕಾರ್ಯಕ್ರಮ ಉದ್ಘಾಟಿಸಿದ ನಿಸಾನ್ ಮೋಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆನಿಚಿರೋ ಯೊಮುರಾ ಅವರು 'ನಿಸಾನ್ ಸೇಫ್ಟಿ ಡ್ರೈವಿಂಗ್ ಫೋರಂ ರಸ್ತೆ ಸುರಕ್ಷಾ ಕ್ರಮಗಳ ಕುರಿತು ಜಾಗೃತಿ ಮೂಡಿಸುತ್ತಿದೆ. ಇದು, ಕಾರು ಬಳಕೆದಾರರಿಗೆ ಸುರಕ್ಷಿತ ಚಾಲನೆ ಅರಿವು ಮೂಡಿಸಲಿದ್ದು, ಈ ಮೂಲಕ ಭವಿಷ್ಯದಲ್ಲಿ ಅಪಘಾತಗಳ ಪ್ರಮಾಣ ಕುಗ್ಗಿಸಲು ಒತ್ತು ನೀಡಲಿದೆ' ಎಂದರು.

ಪೇಬ್ಯಾಕ್‌ನಿಂದ ಹಬ್ಬದ ಕೊಡುಗೆ
ಪೇಬ್ಯಾಕ್ ಸಂಸ್ಥೆಯು ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಶಾಪಿಂಗ್ ಮಾಡುವ ಗ್ರಾಹಕರುಗಳಿಗೆ ವಿಶೇಷ ಪ್ರತಿಫಲ ಹಾಗೂ ಬಹುಮಾನಗಳನ್ನು ನೀಡಲಿದ್ದು, ನ.6ರವರೆಗೆ 'ಫೆಸ್ಟಿವಲ್ ಆಫ್ ರಿವಾರ್ಡ್ಸ್‌' ಆಚರಿಸಲಿದೆ. ಈ 'ಫೆಸ್ಟಿವಲ್ ಆಫ್ ರಿವಾರ್ಡ್ಸ್‌' ಮೂಲಕ ಪೇಬ್ಯಾಕ್ ಸದಸ್ಯರು ಎರಡು ಅಥವಾ ಮೂರಕ್ಕಿಂತಲೂ ಹೆಚ್ಚಿನ ಬ್ರಾಂಡ್‌ಗಳನ್ನು ಶಾಪಿಂಗ್ ಮಾಡಬಹುದು. ಜತೆಗೆ ಪೇಬ್ಯಾಕ್‌ನ ಅತ್ಯಾಕರ್ಷಕ ಬೋನಸ್ ಪಾಯಿಂಟ್‌ಗಳನ್ನು ಪಡೆದುಕೊಳ್ಳಬಹುದು. ಈ ವಿಶೇಷ ಆಫರ್ ಜತೆಗೆ ಹೊಟೇಲ್ ಫಾರ್ಮ್ಯೂಲಾ 1 ಇಂಡಿಯಾದಲ್ಲಿ ಉಳಿದುಕೊಳ್ಳಲು ಇಚ್ಛಿಸುವವರಿಗೆ ಶೇ.30ರಷ್ಟು ರಿಯಾಯಿತಿ ಕೂಡ ನೀಡಲಾಗುತ್ತಿದೆ. ಇವೆಲ್ಲದನ್ನು ಹೊರತುಪಡಿಸಿ 50 ಐಪಾಡ್ ಮಿನಿ ಹಾಗೂ 100 ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಮತ್ತು ಹುಂಡೈ ಇಯಾನ್ ಕಾರು ಬಹುಮಾನವಾಗಿ ಪಡೆಯುವ ಸದಾವಕಾಶ ಕೂಡ ಲಭ್ಯವಾಗಲಿದೆ. ಪೇಬ್ಯಾಕ್ ಕುರಿತಾದ ಹೆಚ್ಚಿನ ಮಾಹಿತಿಗಾಗಿ www.payback.in; www.payback.net ಲಾಗ್ ಇನ್ ಮಾಡಿ. ಇಲ್ಲವೇ, https://www.facebook.com/paybackIndia ಫೇಸ್‌ಬುಕ್ ಪೇಜ್‌ಗೂ ಭೇಟಿ ನೀಡಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com