ಟರ್ಕಿಯಲ್ಲಿ ೧೬.೯೬ ಮಿಲಿಯನ್ ಯೂರೋ ಗುತ್ತಿಗೆ ಬಾಚಿದ ಬಿ ಎಚ್ ಇ ಎಲ್

BHEL
BHEL

ನವದೆಹಲಿ: ಕೇಂದ್ರ ಸರ್ಕಾರ ಒಡೆತನದ ಬಿ ಎಚ್ ಇ ಎಲ್, ಟರ್ಕಿಯಲ್ಲಿ ಶಾಖೋತ್ಪನ್ನ ವಿದ್ಯುತ್‌ಜನಕ ಕೇಂದ್ರ ಸ್ಥಾಪಿಸಲು ೧೬.೯೬ ಮಿಲಿಯನ್ ಯೂರೋಗಳ ಗುತ್ತಿಗೆಯನ್ನು ಪಡೆದಿದೆ.

೧೬.೯೬ ಮಿಲಿಯನ್ ಯುರೋ(ಸುಮಾರು ೧೩೦.೮ ಕೋಟಿ) ಆಗಬಹುದು ಎಂದು ಅಂದಾಜಿಸಿರುವ ಈ ಯೋಜನೆಯಲ್ಲಿ, ವಿದ್ಯುತ್ ಜನಕ ಕೇಂದ್ರದ ಸ್ಥಾಪನೆಯ ಹಲವಾರು ಘಟ್ಟಗಳ ಕೆಲಸಗಳನ್ನು ಬಿ ಎಚ್ ಇ ಲ್ ಸಂಸ್ಥೆ ನಿರ್ವಹಿಸಲಿದೆ.

ಟರ್ಕಿಯ ಅತಿ ದೊಡ್ಡ ವಿದ್ಯುಚ್ಚಕ್ತಿ ಸಂಸ್ಥೆಯಾದ 'ಎಲೆಕ್ಟ್ರಿಕ್ ಜನರೇಶನ್ ಕಂಪನಿ', ಬಿ ಎಚ್ ಇ ಎಲ್ ಗೆ ಈ ಗುತ್ತಿಗೆಯನ್ನು ನೀಡಿದೆ. ದೇಶಾದಾದ್ಯಂತ ವಿದ್ಯುಚ್ಛಕ್ತಿ ಪೂರೈಸುವ ಈ ಸಂಸ್ಥೆ ಟರ್ಕಿ ಸರ್ಕಾರದ ಒಡೆತನದಲ್ಲಿದೆ.

ಈ  ಗುತ್ತಿಗೆಗೆ ಬೇಕಾದ ಪರಿಕರಗಳನ್ನು ಬಿ ಎಚ್ ಇ ಲ್ ನ ರಾಣಿಪೇಟ್, ಭೋಪಾಲ್ ಮತ್ತು ಬೆಂಗಳೂರು ಕೇಂದ್ರಗಳು ಒದಗಿಸಲಿವೆ ಎಂದು ಸಂಸ್ಥೆ ತಿಳಿಸಿದೆ.

ಬಾಂಬೆ ಶೇರು ಪೇಟೆಯಲ್ಲಿ ಬಿ ಎಚ್ ಇ ಎಲ್ ಷೇರುಗಳು ೨.೫೭% ಏರಿಕೆ ಕಂಡಿದ್ದು, ೨೬೫.೫೦ ರೂ ನಲ್ಲಿ ವಹಿವಾಟು ನಡೆಸುತ್ತಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com