ಹಳೇ ನೋಟು, ಇನ್ನೂ 6 ತಿಂಗಳು ಚಿಂತೆ ಬೇಡ

ಹೆದರಬೇಡಿ, ಗಾಬರಿಯನ್ನೂ ಪಡಬೇಡಿ, 2005ಕ್ಕಿಂತ ಹಳೆಯ ನೋಟು...
ಹಳೇ ನೋಟು, ಇನ್ನೂ 6 ತಿಂಗಳು ಚಿಂತೆ ಬೇಡ

ಮುಂಬೈ: ಹೆದರಬೇಡಿ, ಗಾಬರಿಯನ್ನೂ ಪಡಬೇಡಿ, 2005ಕ್ಕಿಂತ ಹಳೆಯ ನೋಟು ವಿನಿಮಯಕ್ಕೆ ಇನ್ನೂ 6 ತಿಂಗಳು ಕಾಲಾವಕಾಶ ಇದೆ. ಹೀಗಾಗಿ ಹತ್ತಿರದ ಬ್ಯಾಂಕ್ ಎಲ್ಲಿದೇ? ಹೋಗಿ ಸಾಲಿನಲ್ಲಿ ನಿಲ್ಲಬೇಕೆಂಬ ಚಿಂತೆಯನ್ನು ಸದ್ಯಕ್ಕೆ ಮಾಡುವ ಅಗತ್ಯವಿಲ್ಲ.

ಇನ್ನು 7 ದಿನದಲ್ಲಿ ಅವುಗಳು ಮೌಲ್ಯ ಕಳೆದು ಕೊಳ್ಳಲಿವೆ ಎಂಬ ಆತಂಕವನ್ನು ದೂರ ಮಾಡಿರುವ ಭಾರತೀಯ ರಿಸರ್ವ್ ಬ್ಯಾಂಕ್, 2015ರ ಜೂ.30ರವರೆಗ ವಿನಿಮಯ ಅವಧಿಯನ್ನು ವಿಸ್ತರಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ರು.500 ಮತ್ತು ರು.1000 ಮುಖಬೆಲೆಯ ಹಳೆಯ ನೋಟುಗಳು ಇರುವವರು ಉಸಿರಾಡುವಂತಾಗಿದೆ.

ಏಕೆ ಈ ನಿರ್ಧಾರ?: 2005ಕ್ಕಿಂತ ಮುಂಚೆ ಮುದ್ರಿತವಾದ ನೋಟುಗಳಲ್ಲಿ ಮುದ್ರಿತವಾದ ಇಶವಿ ಇರುತ್ತಿರಲಿಲ್ಲ. ಹೀಗಾಗಿ ಇದು ನಕಲಿ ನೋಟುಗಳ ತಯಾರಿಕೆಗೆ ಎಡೆ ಮಾಡಿಕೊಟ್ಟಿತ್ತು. ಇದನ್ನು ತಡೆಯುವ ಹಾಗೂ ರಕ್ಷಣೆ ವಿಚಾರವಾಗಿ ಆರ್‌ಬಿಐ ಈ ನಿರ್ಧಾರವನ್ನು ಕೈಗೊಂಡಿತ್ತು.

ಹೀಗಾಗಿ ಇಂಥ ನೋಟುಗಳನ್ನು ಹೊಂದಿರುವವರು ತಮ್ಮ ಖಾತೆಯಲ್ಲಿ ಜಮಾ ಮಾಡಬಹುದು. ಇಲ್ಲವೇ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು ಎಂದು ಸಾರ್ವಜನಿಕರಿಗೆ ಸೂಚನೆಯನ್ನೂ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com