ದೇಶದಲ್ಲಿ ಬ್ಯಾಂಕಿಂಗ್ ವಂಚನೆ ಹೆಚ್ಚಳ

ಕಳೆದ 2 ವರ್ಷಗಳಲ್ಲಿ ಬ್ಯಾಂಕಿಂಗ್ ಅವ್ಯವಹಾರ, ಕ್ರೆಡಿಟ್ ಕಾರ್ಡ್‌ಗಳ ದುರ್ಬಳಕೆ ಮತ್ತು ಸೈಬರ್ ಅಪರಾಧಗಳ...
ಮೋಸ (ಸಾಂದರ್ಭಿಕ ಚಿತ್ರ)
ಮೋಸ (ಸಾಂದರ್ಭಿಕ ಚಿತ್ರ)

ನವದೆಹಲಿ: ಕಳೆದ 2 ವರ್ಷಗಳಲ್ಲಿ ಬ್ಯಾಂಕಿಂಗ್ ಅವ್ಯವಹಾರ, ಕ್ರೆಡಿಟ್ ಕಾರ್ಡ್‌ಗಳ ದುರ್ಬಳಕೆ ಮತ್ತು ಸೈಬರ್ ಅಪರಾಧಗಳ ಸಂಖ್ಯೆಯಲ್ಲಿ ಶೇ. 40 ಹೆಚ್ಚಳವಾಗಿದೆ.

ಗೃಹ ಖಾತೆಯ ಅಂಕಿಅಂಶಗಳ ಪ್ರಕಾರ,  2013ರಲ್ಲಿ 71,780 ಸೈಬರ್ ಅಪರಾಧ ಪ್ರಕರಣಗಳು ವರದಿಯಾಗಿದ್ದು, 2012ರಲ್ಲಿ 22,060 ಪ್ರಕರಣಗಳು ವರದಿಯಾಗಿದ್ದವು.

ಸೈಬರ್ ಅಪರಾಧಗಳು ಬ್ಯಾಂಕಿಂಗ್ ಅವ್ಯವಹಾರಕ್ಕೆ ಸಂಬಂಧಿಸಿದ್ದೇ ಆಗಿವೆ. ಹಲವಾರು ಬ್ಯಾಂಕಿಂಗ್ ಖಾತೆಗಳು ಹ್ಯಾಕ್ ಆಗಿದ್ದು ಅದರಲ್ಲಿ ಹೆಚ್ಚಿನವು ಬ್ಯಾಂಕಿಂಗ್ ವ್ಯವಹಾರವನ್ನು ದುರುಪಯೋಗ ಪಡಿಸಿಕೊಂಡಿವೆ. ಹಲವಾರು ಜನರಿಗೆ ಆರ್‌ಬಿಐ ಬಹುಮಾನ ನೀಡುತ್ತದೆ ಎಂಬ ಹುಸಿ ಮೇಲ್‌ನ್ನು ಕಳುಹಿಸಿ ಮೋಸ ಮಾಡಲಾಗಿದೆ.

ಬ್ಯಾಂಕಿಂಗ್ ವ್ಯವಹಾರದಲ್ಲಿ ಇಷ್ಟೆಲ್ಲಾ ಮೋಸಗಳು ನಡೆಯುತ್ತಿರುವಾಗ ಗ್ರಾಹಕರು ಅಪರಿಚಿತರ ಜತೆ ಅಥವಾ ಶಂಕಿತ ಇಮೇಲ್‌ಗೆ ತಮ್ಮ ಖಾತೆಯ ವಿವರಗಳನ್ನು ನೀಡಬಾರದು ಎಂದು ಬ್ಯಾಂಕಿಂಗ್ ಸೇವಾ ವಿಭಾಗ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com