
ಇತ್ತೀಚೆಗೆ ಬಹಳಷ್ಟು ಸುದ್ದಿಗೆ ಗ್ರಾಸವಾಗಿರುವುದು ಕೆವಿಪಿ ಅಂದರೆ 'ಕಿಸಾನ್ ವಿಕಾಸ್ ಪತ್ರ'(ಕೆವಿಪಿ). 2011ರ ನವೆಂಬರ್‌ನಲ್ಲಿ ಸ್ಥಗಿತಗೊಂಡಿದ್ದ ಈ ಪತ್ರವನ್ನು ಕೇಂದ್ರ ಸರ್ಕಾರವು ನವೆಂಬರ್ 18, 2014ರಂದು ಮರು ಚಾಲನೆ ನೀಡಿತು.
ಅಂದಿನಿಂದ ಕಪ್ಪುಹಣಕ್ಕೂ ಇದಕ್ಕೂ ನಂಟೂ ಬೆಳಸಿಕೊಂಡು ಆಡಳಿತ ಮತ್ತು ಪ್ರತಿಪಕ್ಷಗಳು ಒಬ್ಬರ ಮೇಲೋಬ್ಬರು ಕೆಸರೆರಚಾಡುತ್ತಿದ್ದಾರೆ.
ಕಳೆದ 3 ವರ್ಷಗಳ ಹಿಂದೆ ಸೇ.36.8 ಇದ್ದ ಇಳಿತಾಯ ಪ್ರಮಾಣ ಈಗ ಶೇ.30ಕ್ಕೆ ಕುಸಿದಿದೆ. ಈ ನಿಟ್ಟಿನಲ್ಲಿ ಉಳಿತಾಯ ಹೆಚ್ಚಿಸಲು ಅರುಣ್ ಜೇಟ್ಲಿಯವರು ಕೆವಿಪಿಗೆ ಮರುಜನ್ಮ ನೀಡಿದ್ದಾರೆ. 2010-11ರ ಆರ್ಥಿಕ ವರ್ಷದಲ್ಲಿ ಕೆವಿಪಿಯು 21631.16 ಕೋಟಿ ರು.ನಷ್ಟು ಹೂಡಿಕೆಯನ್ನು ಒಟ್ಟುಗೂಡಿಸಿತ್ತು.
ಕಿಸಾನ್ ವಿಕಾಸ ಪತ್ರದ ಬಗ್ಗೆ ಜನರಲ್ಲಿ ಹಲವು ಗೊಂದಲಗಳು ಮನೆ ಮಾಡಿವೆ. ಇದರ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಲೇಬೇಕಾದ ಪ್ರಮುಖ 13 ಅಂಶಗಳು ಇಲ್ಲಿವೆ.
ಕೆವಿಪಿ ಪಡೆಯಲು 2 ಭಾವಚಿತ್ರ, ಪ್ಯಾನ್ ಕಾರ್ಡ್ (50,000 ಸಾವಿರಕ್ಕಿಂತ ಮೇಲ್ಬಟ್ಟು) ಹಾಗೂ ಸ್ವ ಹಸ್ತಾಕ್ಷರವುಳ್ಳ ಕೆವೈಸಿ (know your customer) ದಾಖಲೆಯ ನಕಲು ಪ್ರತಿ ಬೇಕು.
ಕೆವಿಪಿ ಹೂಡಿಕೆಯನ್ನು ನಗದು, ಚೆಕ್ ಹಾಗೂ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಹೂಡಬಹುದು. ಚೆಕ್ ಹಾಗೂ ಡಿಮ್ಯಾಂಡ್ ಡ್ರಾಫ್ಟ್‌ಗಳು ನಗದೀಕರಿಸಿದ ದಿನಾಂಕವು ಖರೀದಿಯ ದಿನಾಂಕವಾಗುತ್ತದೆ.
ಕೆವಿಪಿಯನ್ನು ಒಬ್ಬರು ಇಲ್ಲವೇ ಜಂಟಿಯಾಗಿ ಮೂವರು ಖರೀದಿಸಬಹುದು. ಮಕ್ಕಳ ಹೆಸರಲ್ಲಿ ಪೋಷಕರೂ ಖರೀದಿಸಹುದು.
ಕೇವಲ 100 ದಿನಗಳು ಅಥವಾ 8 ವರ್ಷ 7 ತಿಂಗಳುಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಬಹುದು. ವಾರ್ಷಿಕ ಶೇ.8.7ರಷ್ಟು ಬಡ್ಡಿ ದೊರೆಯುತ್ತದೆ.
ಕೆವಿಪಿಯು 1000, 50000, 10000, 50000 ಸಾವಿರ ರು.ಮುಖಬೆಲೆಗಳಲ್ಲಿ ದೊರೆಯುತ್ತದೆ. ಹೂಡಿಕೆಗೆ ಕನಿಷ್ಠ ಮಿತಿ 1000 ರು. ಗರಿಷ್ಠ ಮಿತಿ ಇರುವುದಿಲ್ಲ.
ಕೆವಿಪಿ ಹೂಡಿಕೆದಾರರಿಗೆ ಯಾವುದೇ ತೆರಿಗೆ ವಿನಾಯಿತಿ ಇರುವುದಿಲ್ಲ.
ಕೆವಿಪಿಗೆ 3 ಜನ ನಾಮಿನಿ ಮಾಡಲು ಅವಕಾಶವಿರುತ್ತದೆ. ನಾಮಿನಿ ಅವಯಸ್ಕನಾಗಿದ್ದಲ್ಲಿ ಅದಕ್ಕೊಬ್ಬ ಗಾರ್ಡಿಯನ್ ಹೆಸರು ನಮೂದಿಸಬೇಕು. ನಾಮಿನಿಯನ್ನು ಬದಲಾಯಿಸಲು ಅವಕಾಶವಿರುತ್ತದೆ.
ಕೆವಿಪಿಯ ಲಾಕ್‌ಇನ್ ಅವಧಿ 2 ವರ್ಷ 6 ತಿಂಗಳು. ಈ ಅವಧಿಯ ಒಳಗೆ ಹೂಡಿಕೆದಾರ ಮರಣ ಹೊಂದಿದಲ್ಲಿ ಮಾತ್ರ ನಾಮಿನಿ ಇಲ್ಲವೇ ಕಾನೂನಾತ್ಮಕ ಹಕ್ಕುದಾರರು ಹಣ ಪಡೆಯಲು ಅವಕಾಶವಿರುತ್ತದೆ.
ಕೆವಿಪಿಯನ್ನು ವ್ಯಕ್ತಿಯಿಂದ ವ್ಯಕ್ತಿಗೆ, ಕಚೇರಿಯಿಂದ ಕಚೇರಿಗೆ ಎಷ್ಟು ಬಾರಿಯಾದರೂ ವರ್ಗಾಯಿಸಬಹುದು.
ಕೆವಿಪಿಯನ್ನು ಬ್ಯಾಂಕ್, ಹಣಕಾಸು ಸಂಸ್ಥೆಗಳು ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ಅಡಮಾನವಿಡಬಹುದು.
ಕೆವಿಪಿ ಕಳೆದು ಹೋದಲ್ಲಿ ನಕಲು ಪ್ರತಿಯನ್ನು ಪಡೆಯಬಹುದು
ಸದ್ಯಕ್ಕೆ ಕೆವಿಪಿ ಅಂಚೆ ಕಚೇರಿಯಲ್ಲಿ ಮಾತ್ರ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ದೊರೆಯಬಹುದು.
ಕೆವಿಪಿ ಮೆಚ್ಯೂರಿಟಿ ಹಣವನ್ನು ಆಯಾ ಅಂಚೆಕಚೇರಿಯಲ್ಲಾದರೆ ತಕ್ಷಣ ಪಡೆದುಕೊಳ್ಳಬಹುದು. ಬೇರೆ ಅಂಚೆ ಕಚೇರಿಯಲ್ಲಿ ಪಡೆಯಬೇಕೆಂದರೆ ಮೊದಲು ವರ್ಗಾವಣೆ ಮಾಡಿಕೊಳ್ಳಬೇಕು. ಕೋರ್ ಬ್ಯಾಂಕಿಂಗ್ ಅಂಚೆ ಕಚೇರಿಯಲ್ಲಿ ಖರೀದಿಸಿದರೆ, ಕೊರ್ ಬ್ಯಾಂಕಿಂಗ್ ಆದ ಭಾರತದ ಯಾವ ಅಂಚೆ ಕಚೇರಿಯಲ್ಲಾದರೂ ತಕ್ಷಣ ಪಡೆಯಬಹುದು.
-ರಂಗನಾಥ್ ಹಾರೋಗೊಪ್ಪ
Advertisement