ಬಡವ, ರೈತರಿಗೆ ದಾಕ್ಷಿಣ್ಯ ತೋರಿ

ದೇಶದ ರೈತರ ಹೀನಾಯ ಸ್ಥಿತಿ ಬ್ಯಾಂಕಿಂಗ್ ಕ್ಷೇತ್ರದ ಪ್ರಜ್ಞೆಯನ್ನು ಕಲಕಬೇಕು, ಬಡವರು, ಕೃಷಿಕರಿಗೆ ಹಣಕಾಸು ನೆರವು ನೀಡುವಾಗ ಸ್ವಲ್ಪ ದಾಕ್ಷಿಣ್ಯ ತೋರಿಸಬೇಕು...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಮುಂಬೈ: ದೇಶದ ರೈತರ ಹೀನಾಯ ಸ್ಥಿತಿ ಬ್ಯಾಂಕಿಂಗ್ ಕ್ಷೇತ್ರದ ಪ್ರಜ್ಞೆಯನ್ನು ಕಲಕಬೇಕು, ಬಡವರು, ಕೃಷಿಕರಿಗೆ ಹಣಕಾಸು ನೆರವು ನೀಡುವಾಗ ಸ್ವಲ್ಪ ದಾಕ್ಷಿಣ್ಯ ತೋರಿಸಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರು ರೈತಾಪಿ ವರ್ಗದ ಪರ ಧ್ವನಿಯೆತ್ತಿದ ಪರಿ. ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್‍ನ 80ನೇ ವರ್ಷಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ಮೋದಿ, ರೈತರ ಬಗ್ಗೆ ಉದಾರತೆ ತೋರುವಂತೆ ಬ್ಯಾಂಕಿಂಗ್ ವಲಯಕ್ಕೆ ಸಲಹೆ ನೀಡಿದ್ದಾರೆ. ಜತೆಗೆ, ಎಲ್ಲರನ್ನೊಳಗೊಂಡ ಹಣಕಾಸು ನೀತಿಗಾಗಿ 20 ವರ್ಷಗಳ ಮಾರ್ಗಸೂಚಿಯನ್ನು ರಚಿಸಬೇಕು ಎಂದೂ ಸೂಚಿಸಿದ್ದಾರೆ.  ನಮ್ಮ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಈ ನೋವು ಕೇವಲ ಪತ್ರಿಕೆಗಳು, ಟಿವಿ ಪರದೆಗಳಿಗಷ್ಟೇ ಸೀಮಿತವಾಗಿವೆ. ರೈತ ಸತ್ತಾಗ, ಬ್ಯಾಂಕಿಂಗ್ ವಲಯದವರ ಮನಸ್ಸು ವಿಚಲಿತಗೊಳ್ಳುತ್ತದೆಯೇ ? ಯಾರೋ ಬಡ್ಡಿಗೆ ಸಾಲ ಕೊಡುವಾತನಿಂದ ಹಣ ಪಡೆದಿದ್ದೇ ರೈತನ ಸಾವಿಗೆ ಕಾರಣವಾಗಿರುತ್ತದೆ. ಅದು ನಿಮಗೆ ಗೊತ್ತಿದೆಯೆ ?  ರೈತರು ಸಾಲದ ಹೊರೆ ತಾಳಲಾರದೆ ಆತ್ಮಹತ್ಯೆ ಮಾಡದಂತೆ ತಡೆಯುವ ಬಗ್ಗೆ, ನಮ್ಮ ಬ್ಯಾಂಕಿಂಗ್ ಕ್ಷೇತ್ರವನ್ನು ವಿಸ್ತರಿಸುವ ಬಗ್ಗೆ ಆಲೋಚಿಸೋಣವೇ? ಬಡವರಿಗೆ ಸಹಾಯ ಮಾಡುವುದರಿಂದ ಬ್ಯಾಂಕ್ ದಿವಾಳಿಯಾಗುತ್ತದೆ ಎಂದು ನನಗಂತೂ ಅನಿಸುತ್ತಿಲ್ಲ.

  •  ಹಸಿರು ಕಾರ್ಯಕ್ರಮಗಳಿಗೆ ನೆರವಾಗುವ ಬ್ಯಾಂಕುಗಳು ರೈತರಿಗೆ ಗಿಡ ನೆಡಲು ಬೇಕಾದ ಹಣಕಾಸು ನೆರವನ್ನೂ ಒದಗಿಸಲಿ.
  • ನಾನು ಬಡ, ಅವಕಾಶವಂಚಿತ, ಬುಡುಕಟ್ಟು ಜನಾಂಗೀಯರ ಪ್ರತಿನಿಧಿಯಾಗಿ ಬಂದಿದ್ದೇನೆ. ನೀವು ನನಗೆ ನಿರಾಶೆ ಮಾಡುವುದಿಲ್ಲ ಎಂಬ ನಂಬಿಕೆಯಿದೆ
  •  ಕರೆನ್ಸಿ ನೋಟುಗಳ ಮುದ್ರಣಕ್ಕೆ ಅಗತ್ಯವಾದ ಪೇಪರ್ ಮತ್ತು ಶಾಯಿಯನ್ನು ಭಾರತದಲ್ಲೇ ಉತ್ಪಾದನೆಯಾಗುವಂತೆ ಆರ್‍ಬಿಐ ಕ್ರಮ ಕೈಗೊಳ್ಳಲಿ
  • ನಿಮ್ಮ ಸಂಸ್ಥೆಗಳ ನೌಕರರಿಗೆ ಎಲ್‍ಪಿಜಿ ಸಬ್ಸಿಡಿ ಬಿಟ್ಟುಬಿಡುವಂತೆ ಹುರಿದುಂಬಿಸಿ. ಬಡವರಿಗೆ ಸ್ವಚ್ಛ ಇಂಧನ ಸಿಗುವಂತಾಗಲಿ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com