
ಮುಂಬೈ: ಬಡ್ಡಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಬ್ಯಾಂಕುಗಳ ಮೇಲೆ ಆರ್‍ಬಿಐ ಗವರ್ನರ್ ರಘುರಾಂ ರಾಜನ್ ಕೆಂಡಕಾರಿದ ಬೆನ್ನಲ್ಲೇ ಎಸ್‍ಬಿಐ, ಎಚ್ ಡಿಎಫ್ ಸಿ ಹಾಗೂ ಐಸಿಐಸಿಐ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡಿವೆ. ಮೊದಲು ರಾಜನ್ ಹೇಳಿಕೆಗೆ ಖಡಕ್ ಆಗಿ ಪ್ರತಿಕ್ರಿಯಿಸಿದ್ದ
ಬ್ಯಾಂಕುಗಳು ಸಂಜೆ ವೇಳೆಗೆ ರಾಜನ್ ಒತ್ತಡಕ್ಕೆ ಮಣಿದಿವೆ. ಎಸ್‍ಬಿಐ ಹಾಗೂ ಎಚ್‍ಡಿಎಫ್ ಸಿ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರವನ್ನು ಶೇ.0.15ರಷ್ಟು ಇಳಿಕೆ ಮಾಡಿರು
ವುದಾಗಿ ಘೋಷಿಸಿವೆ. ಹೀಗಾಗಿ ಎರಡೂ ಬ್ಯಾಂಕುಗಳ ಬಡ್ಡಿ ದರ ಶೇ.10ರಿಂದ ಶೇ.9.85ಕ್ಕಿಳಿದಿದೆ. ಇದರ ಬೆನ್ನಲ್ಲೇ ಐಸಿಐಸಿಐ ಕೂಡ ಶೇ.0.25ರಷ್ಟು ಬಡ್ಡಿ ದರ ಕಡಿಮೆ ಮಾಡಿದ್ದು, ಇದರ ಬಡ್ಡಿ ಶೇ.9.75 ಆಗಿದೆ. ಈ ಬ್ಯಾಂಕುಗಳು ಬಡ್ಡಿ ದರ ಕಡಿಮೆ ಮÁಡಿರುವ ಕಾರಣ ಉಳಿದ ಬ್ಯಾಂಕು ಗಳಿಗೂ ಇವುಗಳನ್ನೇ ಅನುಸರಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದಾಗಿ ಗೃಹ, ವಾಹನ ಸಾಲ ಪಡೆದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಬ್ಯಾಂಕುಗಳ ವಾದ `ನಾನ್‍ಸೆನ್ಸ್' ಆರ್‍ಬಿಐ ದ್ವೈಮಾಸಿಕ ಹಣಕಾಸು ನೀತಿ ಪರಾಮರ್ಶೆ ಬಗ್ಗೆಮಂಗಳವಾರ ಬೆಳಗ್ಗೆ ಮಾಹಿತಿ ನೀಡಿದ ಆರ್‍ಬಿಐ ಗವರ್ನರ್ ರಘುರಾಂ ರಾಜನ್, ಬಡ್ಡಿ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಬ್ಯಾಂಕುಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಆರ್‍ಬಿಐ ಸಾಲದ ಮೇಲಿನ ಬಡ್ಡಿ ದರವನ್ನು ಎರಡೆರಡು ಬಾರಿ ಕಡಿಮೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸರ್ಕಾರಿ ಸ್ವಾಮ್ಯದ ಎಸ್‍ಬಿಐ, ಖಾಸಗಿ ಸ್ವಾಮ್ಯದ ಐಸಿಐಸಿಐ ಸೇರಿದಂತೆ ಯಾವುದೇ
ಬ್ಯಾಂಕುಗಳೂ ಬಡ್ಡಿ ದರ ಇಳಿಕೆಯ ಅನುಕೂಲವನ್ನುಗ್ರಾಹಕರಿಗೆ ವರ್ಗಾಯಿಸಿಲ್ಲ. ನಾವು ಬಡ್ಡಿ ದರ ಏರಿಕೆ ಮಾಡಿದ ತಕ್ಷಣವೇ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿ ದರ ಏರಿಸುತ್ತವೆ, ಆದರೆ ನಾವು ಕಡಿಮೆ ಮಾಡಿದರೆ ಮಾತ್ರ ಸುಮ್ಮನಿರುವುದೇಕೆ ಎಂದು ಬ್ಯಾಂಕುಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಜತೆಗೆ, ಸಾಲಕ್ಕಾಗುವ ವೆಚ್ಚ ಹೆಚ್ಚಳವಾಗಿದೆ ಎಂಬ ಬ್ಯಾಂಕುಗಳ ನೆಪವನ್ನು `ನಾನ್‍ಸೆನ್ಸ್' ಎಂದೂ ರಾಜನ್ ಜರೆದಿದ್ದರು. ರಾಜನ್‍ಗೆ ತಿರುಗೇಟು ರಘುರಾಂ ರಾಜನ್ ಅವರು ಬ್ಯಾಂಕುಗಳ ವಿರುದ್ಧ ವಾಗ್ದಾಳಿ ನಡೆಸಿದ ಬೆನ್ನಲ್ಲೇ ಬ್ಯಾಂಕುಗಳು ಕೂಡ ಗವರ್ನರ್ ವಿರುದ್ಧ ತಿರುಗಿಬಿದ್ದಿದ್ದವು. ಕೇವಲ ರೆಪೋ ದರದಲ್ಲಾಗುವ ಬದಲಾವಣೆಯೇ ಮೂಲ ದರ ಏರಿಕೆಗೆ ಮಾನದಂಡವಲ್ಲ. ಹಾಗಾಗಿ ಸಾಲಕ್ಕಿರುವ ಬೇಡಿಕೆ, ವೆಚ್ಚ ಮತ್ತು ಠೇವಣಿ ಬಡ್ಡಿಯನ್ನು ಪರಿಗಣಿಸಿ ಸಾಲದ ಮೇಲಿನ ಬಡ್ಡಿ ದರ ಇಳಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಆದರೆ ಇದಕ್ಕೆ ಕಾಲಮಿತಿ ನಿಗದಿ ಮಾಡಲು ಸಾಧ್ಯವಿಲ್ಲ ಎಂದು ಐಸಿಐಸಿಐ ಬ್ಯಾಂಕ್ ಎಂಡಿ ಚಂದಾ ಕೊಚ್ಚರ್ ಹೇಳಿದ್ದರು. ಇದೇ ವೇಳೆ, ರಾಜನ್‍ಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಎಸ್‍ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ, ಆರ್‍ಬಿಐ 350 ಮೂಲ ದರದಲ್ಲಿ ಬಡ್ಡಿ ದರವನ್ನು ಏರಿಸಿದ್ದಾಗ, ನಾವೇನೂ ಗ್ರಾಹಕರ ಇಎಂಐ ಅನ್ನೂ 300 ಅಂಕ ಏರಿಸಿದ್ದೆವೆ? ಎಷ್ಟೋ ಬಾರಿ ಆರ್‍ಬಿಐ ಬಡ್ಡಿ ದರ ಏರಿಕೆ ಮಾಡಿದ್ದರೂ, ನಾವು ಅದರ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಗ್ರಾಹಕರಿಗೆ ಪ್ರಯೋ ಜನವನ್ನು ವರ್ಗಾಯಿಸಲು ಸ್ವಲ್ಪ ಸಮಯ ಬೇಕು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದಿದ್ದರು.
Advertisement