ಆಲ್ಕಟೆಲ್-ಲ್ಯೂಸೆಂಟ್ ಸಂಸ್ಥೆಯನ್ನು ಕೊಳ್ಳಲಿರುವ ನೋಕಿಯಾ

ಫ್ರಾನ್ಸ್ ಟೆಲಿಕಾಮ್ ತಂತ್ರಜ್ಞಾನ ಸಂಸ್ಥೆ ಆಲ್ಕಟೆಲ್-ಲ್ಯೂಸೆಂಟ್ ಅನ್ನು ಫಿನ್ಲ್ಯಾಂಡ್ ನ ದೈತ್ಯ ನೋಕಿಯಾ ೧೬.೫೮ ಬಿಲಿಯನ್ ಡಾಲರ್ ಡೀಲ್ ನಲ್ಲಿ
ನೋಕಿಯಾ
ನೋಕಿಯಾ

ಫ್ರಾನ್ಸ್ ಟೆಲಿಕಾಮ್ ತಂತ್ರಜ್ಞಾನ ಸಂಸ್ಥೆ ಆಲ್ಕಟೆಲ್-ಲ್ಯೂಸೆಂಟ್ ಅನ್ನು ಫಿನ್ಲ್ಯಾಂಡ್ ನ ದೈತ್ಯ ನೋಕಿಯಾ ೧೬.೫೮ ಬಿಲಿಯನ್ ಡಾಲರ್ ಡೀಲ್ ನಲ್ಲಿ ಕೊಂಡೂಕೊಳ್ಳಲಿದೆ.

ಆಲ್ಕಟೆಲ್-ಲ್ಯೂಸೆಂಟ್ ಶೇರುದಾರರ ಪ್ರತಿ ಶೇರಿಗೆ ೦.೫೫ ಶೇರ್ ಸಿಗಲಿದೆ. ಇದರಿಂದ ಹೊಸ ಸಂಸ್ಥೆಯಲ್ಲಿ ಆಲ್ಕಟೆಲ್-ಲ್ಯೂಸೆಂಟ್ ೩೩.೫% ಶೇರುಗಳನ್ನು ಹೊಂದಲಿದ್ದು, ನೋಕಿಯಾ ಇನ್ನುಳಿದ ೬೬.೫% ಶೇರುಗಳನ್ನು ಹೊಂದಿರುತ್ತದೆ.

೨೦೧೬ರ ಮೊದಲ ಭಾಗದಲ್ಲಿ ಈ ಡೀಲ್ ಮುಕ್ತಾಯಗೊಳ್ಳಲಿದೆ ಎಂದು ಎರಡು ಸಂಸ್ಥೆಗಳು ತಿಳಿಸಿವೆ. ಟೆಲಿಕಾಮ್ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಇರದಿದ್ದರಿಂದ ಈ ಹೊಂದಾಣಿಗೆ ಅಗತ್ಯವಾಗಿತ್ತು ಎಂದು ತಿಳಿದುಬಂದಿದೆ. ಈಗ ಈ ಹೊಸ ಸಂಸ್ಥೆ ವಿಶ್ವದ ಮತ್ತೊಂದು ದೈತ್ಯ ಸ್ವೀಡನ್ನಿನ ಎರಿಕ್ಸನ್ ಜೊತೆ ಸೆಣಸಲಿದೆ.

ನೋಕಿಯಾ, ಆಲ್ಕಟೆಲ್-ಲ್ಯೂಸೆಂಟ್ ಸಂಸ್ಥೆಯನ್ನು ಕೊಳ್ಳಲಿದೆ ಎಂಬ ಸುದ್ದಿ ಬಂದ ತಕ್ಷಣ ನೋಕಿಯಾ ಶೇರುಗಳ ಬೆಲೆ ೭% ಇಳಿಕೆ ಕಂಡಿದ್ದು ಆಲ್ಕಟೆಲ್-ಲ್ಯೂಸೆಂಟ್ ಶೇರುಗಳು ೧೬% ಇಳಿಕೆ ಕಂಡಿವೆ.

ಈಗ ಈ ಒಗ್ಗೂಡಿದ ಸಂಸ್ಥೆಯಲ್ಲಿ ೧೧೪೦೦ ಜನ ಕೆಲಸ ಮಾಡಲಿದ್ದು, ಒಟ್ಟು ವರ್ಷದ ವಹಿವಾಟು ಸುಮಾರು ೨೬ ಬಿಲಿಯನ್ ಯೂರೋಗಳು ಎನ್ನಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com