

ಬೆಂಗಳೂರು: ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ
ಮಹಾಒಕ್ಕೂಟ (ಎಫ್ ಕೆಸಿಸಿಐ) ವತಿಯಿಂದ ನವೆಂಬರ್‍ನಲ್ಲಿ ಮಹಿಳಾ ಉದ್ದಿಮೆದಾರರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ತಲ್ಲಂ ಆರ್.ದ್ವಾರಕನಾಥ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಗೆ ರಾಜ್ಯ ಸಾಕಷ್ಟು ಕೊಡುಗೆ ನೀಡಿದೆ. ಇಲ್ಲಿನ ಕೈಗಾರಿಕಾ ಪೂರಕ ವಾತಾವರಣ ಬಳಸಿಕೊಂಡು ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು ಸಮಾವೇಶ ನಡೆಸಲಾಗುವುದು. ರಾಜ್ಯ ಸೇರಿ ದಂತೆ ಹೊರ ರಾಜ್ಯಗಳಿಂದ 500ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಕೇಂದ್ರ ಸರ್ಕಾರ ಕಂಪನಿ ಕಾಯಿದೆಗೆ ತಿದ್ದುಪಡಿ ತಂದಿದ್ದು, ಇದರ ಫಲವಾಗಿನಿರ್ದಿಷ್ಟ ಆದಾಯ ಗಳಿಸಿರುವ ಮತ್ತು ಸುಸ್ಥಿರ ಬೆಳವಣಿಗೆ ಸಾಧಿಸುತ್ತಿರುವ ಕಂಪನಿಯಲ್ಲಿ ಕಡ್ಡಾಯವಾಗಿ ಓರ್ವ ಮಹಿಳಾ ನಿರ್ದೇಶಕರನ್ನು ನೇಮಿಸಿಕೊಳ್ಳಬೇಕೆಂಬ ಕಾನೂನಿದೆ. ಈ ಹಿನ್ನೆಲೆಯಲ್ಲಿಎಫ್ ಕೆಸಿಸಿಐ ಇತ್ತೀಚೆಗೆ 30 ಮಹಿಳಾಉದ್ಯಮಿಗಳಿಗೆ ತರಬೇತಿ ನೀಡಿದೆ ಎಂದು ತಿಳಿಸಿದರು.
`ಲೀಸ್ ಕಂ ಸೇಲ್' ಜಾರಿಗೆ ತನ್ನಿ :ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು ಉದ್ದಿಮೆ ನಡೆಸಲು ಅಗತ್ಯವಿರುವ ಭೂಮಿ ಸರ್ಕಾರನೀಡಬೇಕು. ಕೈಗಾರಿಕಾ ಕಾಯಿದೆಗೆ ತಿದ್ದುಪಡಿ ತಂದು 2 ಎಕರೆಗಿಂತ ಕಡಿಮೆ ಭೂಮಿ ಉಳ್ಳವರಿಗೆ `ಲೀಸ್ ಕಂ ಸೇಲ್' ಯೋಜನೆ ಜಾರಿಗೆ ತರಬೇಕು. ಇದರಿಂದ ಉದ್ಯಮಿಗಳು ಜಾಗ ಮಾರಿ ಹಣ ಮಾಡುವುದಿಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಬ್ಬಿಬ್ಬರು ಹಾಗೆ ಮಾಡಬಹುದು. ಹಾಗಂದ ಮಾತ್ರಕ್ಕೆ ನೂರಾರು ಉದ್ಯಮಿಗಳಿಗೆ ಅನುಕೂಲ ವಾಗುವ ನೀತಿ ಕೈಬಿಡಬಾರದು ಎಂದು ಮನವಿ ಮಾಡಿದರು. ವಿಷನ್ ಗ್ರೂಪ್: ರಾಜ್ಯಕ್ಕೆ ಬಂದಿದ್ದ ಹಿರೋ ಮೋಟಾರ್ಸ್ ಮತ್ತು ಪೋಸ್ಕೋ ಕಂಪನಿಗಳು ಇಲ್ಲಿನ ನೀತಿ ನಿಯಮಗಳ ತೊಡಕಿನಿಂದ ಬೇರೆ ರಾಜ್ಯದತ್ತ ಮುಖ ಮಾಡಿದ್ದವು. ಆ ಕಂಪನಿಗಳನ್ನು ಪುನಃ ರಾಜ್ಯಕ್ಕೆ ಕರೆತರಲು ಎಫ್ ಕೆಸಿಸಿಐ ಪ್ರಯತ್ನಿಸಲಿದೆ. ಹಿರೋ ಮೋಟಾರ್ಸ್ ನಂತಹ ಕಂಪನಿಗಳನ್ನು ಕಳೆದುಕೊಳ್ಳು ವುದು ನಮಗೆ ಬೇಕಾಗಿಲ್ಲ. ಸರ್ಕಾರ ಉನ್ನತ ಮಟ್ಟದ `ವಿಷನ್ ಗ್ರೂಪ್' ರಚಿಸಿದ್ದು ರಾಷ್ಟ್ರದಲ್ಲಿಯೇ ಅತ್ಯುತ್ತಮ ಕೈಗಾರಿಕಾ ನೀತಿ ರೂಪಿಸಲು ಪ್ರಯತ್ನಿ ಸಲಿದೆ ಎಂದು ದ್ವಾರಕನಾಥ್ ವಿಶ್ವಾಸ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಕೈಗಾರಿಕಾ ಖಾತೆ ಇದು ವರೆಗೂ ಮುಖ್ಯಮಂತ್ರಿಗಳ ಬಳಿಯೇ ಇತ್ತು. ಈಗ ಆರ್.ವಿ.ದೇಶಪಾಂಡೆಗೆ ವಹಿಸಿರುವುದು ಉತ್ತಮ ನಡೆ ಎಂಬ ಅಭಿಪ್ರಾಯವನ್ನು ದ್ವಾರಕಾನಾಥ್ ವ್ಯಕ್ತಪಡಿಸಿದರು.
Advertisement