ಮ್ಯಾಗಿಯಲ್ಲಿ ಲೆಡ್ ಅಂಶ ಇದೆ, ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸಿದೆ: ಕೇಂದ್ರ

ಮ್ಯಾಗಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಸೀಸದ ಅಂಶ ಪತ್ತೆಯಾಗಿದೆ ಮತ್ತು ನೆಸ್ಲೆ ಇಂಡಿಯಾ ಲೇಬಲಿಂಗ್ ನಿಮಯಗಳನ್ನು ಉಲ್ಲಂಘಿಸಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮ್ಯಾಗಿಯಲ್ಲಿ ನಿಗದಿತ ಮಿತಿಗಿಂತ ಹೆಚ್ಚು ಪ್ರಮಾಣದ ಸೀಸದ ಅಂಶ ಪತ್ತೆಯಾಗಿದೆ ಮತ್ತು ನೆಸ್ಲೆ ಇಂಡಿಯಾ ಲೇಬಲಿಂಗ್ ನಿಮಯಗಳನ್ನು ಉಲ್ಲಂಘಿಸಿದೆ. ಹೀಗಾಗಿ ಉತ್ಪನ್ನವನ್ನು ಹಿಂಪಡೆಯುವಂತೆ ಕಂಪನಿಗೆ ಸೂಚಿಸಲಾಗಿದೆ ಎಂದು ಕೇಂದ್ರ ಮಂಗಳವಾರ ಹೇಳಿದೆ.

ಈ ಕುರಿತು ಇಂದು ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು, 'ಮ್ಯಾಗಿ ನೂಡಲ್ಸ್‌ನ ಸ್ಯಾಂಪಲ್ಸ್‌ನಲ್ಲಿ ಅನುಮತಿ ನೀಡಿದ್ದಕ್ಕಿಂತಲೂ ಹೆಚ್ಚು ಸೀಸದ ಅಂಶ ಪತ್ತೆಯಾಗಿದೆ. ಲೇಬಲಿಂಗ್ ನಿಮಯಗಳನ್ನು ಉಲ್ಲಂಘಿಸಲಾಗಿದೆ' ಎಂದು ತಿಳಿಸಿದ್ದಾರೆ.

ವಿವಿಧ ರಾಜ್ಯಗಳು ನೀಡಿದ ಪ್ರಯೋಗಾಲದ ವರದಿಯನ್ನು ಆಧರಿಸಿ, ಭಾರತೀಯ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಜೂನ್ 5, 2015ರಂದು ಮ್ಯಾಗಿ ಉತ್ಪನ್ನವನ್ನು ಹಿಂಪಡೆಯುವಂತೆ ನೆಸ್ಲೆ ಇಂಡಿಯಾ ಕಂಪನಿಗೆ ಆದೇಶಿಸಿತ್ತು ಎಂದು ನಡ್ಡಾ ಹೇಳಿದ್ದಾರೆ.

ಮ್ಯಾಗಿಯಲ್ಲಿ ಮಾನೋಸೋಡಿಯಂ ಗ್ಲುಟಾಮೇಟ್ (ಎಂಎಸ್​ಜಿ) ಮತ್ತು ಸತುವಿನ ಅಂಶ ಮಿತಿಗಿಂತ ಹೆಚ್ಚಿದೆ ಎಂಬ ಪ್ರಾಥಮಿಕ ವರದಿಗಳ ಬಳಿಕ ದೇಶಾದ್ಯಂತ 500 ಮಾದರಿಗಳನ್ನು ಸಂಗ್ರಹಿಸಲಾಯಿತು. ಇವುಗಳಲ್ಲಿ ಐದು ಮಾದರಿಗಳು ಸಂಪೂರ್ಣ ‘ಅಯೋಗ್ಯ’ ಎಂದು ಕಂಡು ಬಂದಿದೆ ಎಂದು ಎಫ್​ಎಸ್​ಎಸ್​ಎಐ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com