
ಮುಂಬೈ: ಸ್ಮಾರ್ಟ್ ಫೋನ್‍ಗಳ ಮೂಲಕ ನಡೆಸುವ ಆನ್‍ಲೈನ್ ವಹಿವಾಟು ಮುಂದಿನ ವರ್ಷದ ವೇಳೆಗೆ 4 ಕೋಟಿ ಡಾಲರ್ ತಲುಪಲಿದೆ ಎಂದು ಭಾರತೀಯ ಉದ್ಯಮ ಒಕ್ಕೂಟ ಅಸೋಚಾಮ್ ಮತ್ತು ಗ್ರಾಂಟ್‍ಥಾರ್ಟನ್ ಸಮೀಕ್ಷೆ ಹೇಳಿದೆ. ಮುಂದಿನ ಮೂರು ವರ್ಷಗಳಲ್ಲಿ ಇನ್ನೂ 20 ಕೋಟಿ ಮಂದಿ ಮೊಬೈಲ್ ಇಂಟರ್‍ನೆಟ್ ಪಡೆಯಲಿದ್ದಾರೆ. ಇದರಿಂದ ಮೊಬೈಲ್
ಆನ್‍ಲೈನ್ ವಹಿವಾಟು ಮತ್ತಷ್ಟು ಹೆಚ್ಚಲಿದೆ ಎಂದು ಅಂದಾಜಿಸಲಾಗಿದೆ. ಮೊಬೈಲ್‍ಗಳಲ್ಲಿ ಇಂಟರ್‍ನೆಟ್ ಬಳಕೆ ಮಾಡುತ್ತಿರುವವರ ಪೈಕಿ ಶೇ.75ರಷ್ಟು ಮಂದಿ 15ರಿಂದ 34ರ ವಯೋಮಾನದವರಾಗಿದ್ದಾರೆ.
Advertisement