ಏರ್‍ಇಂಡಿಯಾದಲ್ಲಿ 25 ಕೆಜಿ ಉಚಿತ ಚೆಕ್ ಇನ್ ಲಗೇಜ್

ಏರ್ ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವವರು ದೇಶೀಯ ಮಾರ್ಗಗಳಲ್ಲಿ 25 ಕೆಜಿ ವರೆಗೂ ಉಚಿತವಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವವರು ದೇಶೀಯ ಮಾರ್ಗಗಳಲ್ಲಿ 25 ಕೆಜಿ ವರೆಗೂ ಉಚಿತವಾಗಿ ಚೆಕ್ ಇನ್ ಲಗ್ಗೇಜ್ ಕೊಂಡೊಯ್ಯಬಹುದಾಗಿದೆ.

ಈ ಸೇವೆ ಬುಧವಾರದಿಂದ ಆರಂಭವಾಗಲಿದ್ದು ಮುಂದಿನ ವರ್ಷ ಫೆಬ್ರವರಿ 7ರವರೆಗೆ ಈ ಸೌಲಭ್ಯ ಕಲ್ಪಿಸಲಾಗಿದೆ. ಸದ್ಯ ಈ ಪ್ರಮಾಣ 20 ಕೆಜಿ ಮಾತ್ರ ಇದೆ. ಆಗಸ್ಟ್ 12ಕ್ಕಿಂತಲೂ ಮೊದಲು ಟಿಕೆಟ್ ಕಾಯ್ದಿರಿಸಿರುವವರಿಗೂ ಈ ಸೌಲಭ್ಯ ಸಿಗಲಿದೆ.

ಏರ್ ಇಂಡಿಯಾ ವಿಮಾನಗಳೊಂದಿಗೆ ಕನೆಕ್ಟಿಂಗ್ ಒಪ್ಪಂದ ಹೊಂದಿರುವ ಅಲಯನ್ಸ್ ಏರ್ಫೆ್ಲೈಟ್‍ಗಳಲ್ಲೂ ಈ ಸೌಲಭ್ಯ ಕಲ್ಪಿಸಲಾಗುವುದು. ಆದರೆ ಅಲಯನ್ಸ್ ವಿಮಾನಗಳಲ್ಲಿ ಪ್ರಯಾಣಿಸುವವರಿಗೆ ಈ ಸೌಲಭ್ಯ ಇರುವುದಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com