
ಮುಂಬೈ: ಚೀನಾ ಕರೆನ್ಸಿ ಅಪಮೌಲ್ಯ ಸೇರಿದಂತೆ ಹಲವು ಒತ್ತಡಗಳಿಗೆ ಸಿಲುಕಿರುವ ರುಪಾಯಿ ಮೌಲ್ಯ ದಿನೇ ದಿನೇ ಕುಸಿತ ಕಾಣುತ್ತಿದೆ. ಗುರುವಾರದ ವಹಿವಾಟಿನಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 65.10ಕ್ಕೆ ಕುಸಿಯಿತು. ಕಳೆದ ಎರಡು ವರ್ಷಗಳಲ್ಲಿ ಇದು ಕನಿಷ್ಠ ಮೌಲ್ಯವಾಗಿದೆ. ಚೀನಾ ಅನಿರೀಕ್ಷಿತವಾಗಿ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದ್ದರಿಂದ ಕಳೆದ ಮೂರು ದಿನಗಳಿಂದ ರುಪಾಯಿ ಒತ್ತಡಕ್ಕೆ ಸಿಲುಕಿದ್ದು ಇಳಿಮುಖ ಕಾಣುತ್ತಿದೆ. ಯುಆನ್ ಅಪಮೌಲ್ಯ ವಿಶ್ವದ ಎಲ್ಲ ಷೇರು ಮತ್ತು ಕರೆನ್ಸಿ ಮಾರುಕಟ್ಟೆಗಳನ್ನು ಕೆಳಕ್ಕೆಳೆಯಿತು. ಚೀನಾದ ಈ ಕ್ರಮ ಜಗತ್ತಿನಲ್ಲಿ ಕರೆನ್ಸಿ ಸಮರಕ್ಕೆ ಕಾರಣವಾಗಬಹುದು ಎಂಬ ಭೀತಿ ಕಾಡುತ್ತಿದೆ. ಯುಆನ್ ಅಪಮೌಲ್ಯ ಮುಂದುವರೆದರೆ ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ದರಗಳು ಕುಸಿಯಲಿದೆ. ಚೀನಾದ ಅಗ್ಗದ ಗೂಡ್ಸ್ ನಿಂದ ಈಗಾಗಲೆ ಕಂಗಾಲಾಗಿದ್ದು ದರಗಳು ಮತ್ತಷ್ಟು ಕುಸಿದರೆ ದೇಶೀಯ ಉತ್ಪನ್ನಗಳು ಇಇನ್ನಷ್ಟು ಬೇಡಿಕೆ ಕಳೆದುಕೊಳ್ಳಲಿವೆ.
Advertisement