ಹಣದುಬ್ಬರ ದರದಲ್ಲಿ ಭಾರಿ ಇಳಿಕೆ

ಜುಲೈ ನಲ್ಲಿ ಸಗಟು ದರ ಆಧಾರಿತ ಹಣದುಬ್ಬರ ದಾಖಲೆಯ ಶೇ (-) 4 .05 ಕ್ಕೆ ಇಳಿಕೆಯಾಗಿದೆ.
ಹಣದುಬ್ಬರ ದರದಲ್ಲಿ ಭಾರಿ ಇಳಿಕೆ

ನವದೆಹಲಿ: ಜುಲೈ ನಲ್ಲಿ ಸಗಟು ದರ ಆಧಾರಿತ ಹಣದುಬ್ಬರ ದಾಖಲೆಯ ಶೇ (-) 4 .05 ಕ್ಕೆ ಇಳಿಕೆಯಾಗಿದೆ. ಕಳೆದ ತಿಂಗಳು ಹಣದುಬ್ಬರದ ದರ ಶೇ.(-)2 .4 ರಷ್ಟಿತ್ತು.

ಆಗಸ್ಟ್ 14 ರಂದು ಬಿಡುಗಡೆಯಾಗಿರುವ  ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಬಿಡುಗಡೆ ಮಾಡಿರುವ ಅಧಿಕೃತ ಅಂಕಿ-ಅಂಶದ ಪ್ರಕಾರ ಇಂಧನ ಹಣದುಬ್ಬರ ಸೂಚ್ಯಂಕ ಶೇ.12 .8 ರಷ್ಟು ಇಳಿಕೆಯಾಗಿದೆ. 2014 ರ ಜುಲೈ ನಲ್ಲಿ ವಾರ್ಷಿಕ ಹಣದುಬ್ಬರ ದರ ಶೇ.5 .41 ರಷ್ಟಿದ್ದ  ಹಣದುಬ್ಬರ ಸತತ 9 ನೇ ತಿಂಗಳಿನಿಂದ ಇಳಿಕೆಯಾಗುತ್ತಿದೆ.

ಆಹಾರ ಧಾನ್ಯಗಳ ಬೆಲೆ ಜುಲೈನಲ್ಲಿ ಶೇ 35 .75 ರಷ್ಟು ಹೆಚ್ಚಾಗಿದೆ. ಇಂಧನ ಹಣದುಬ್ಬರ (-)12 .81,  ತಯಾರಿಸಲ್ಪಟ್ಟ ಉತ್ಪನ್ನಗಳ ಹಣದುಬ್ಬರ (-) 1 .47 ರಷ್ಟಿದೆ. ಮೇ ತಿಂಗಳಲ್ಲಿ ಋಣಾತ್ಮಕ ವಲಯದಲ್ಲೇ ಮುಂದುವರೆದಿದ್ದ ಹಣದುಬ್ಬರ ದರ ಶೇ. (-) 2 .65 ರಿಂದ 2 .36 ಕ್ಕೆ ಅಲ್ಪ ಏರಿಕೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com