ಸ್ನ್ಯಾಪ್ ಡೀಲ್ ಗೆ ಆಲಿಬಾಬ, ಫಾಕ್ಸ್ ಕಾಮ್, ಸಾಫ್ಟ್ ಬ್ಯಾಂಕ್ ನಿಂದ ೫೦೦ ಮಿಲಿಯನ್ ಡಾಲರ್ ಹೂಡಿಕೆ

ಅಂತರ್ಜಾಲ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ೫೦೦ ಮಿಲಿಯನ್ ಡಾಲರ್ ಹೂಡಿಕೆ ಗಳಿಸಲು ಯಶಸ್ವಿಯಾಗಿದೆ. ಈ ಬೃಹತ್ ಮೊತ್ತದ ಹೂಡಿಕೆದಾರರು ಆಲಿಬಾಬ, ಫಾಕ್ಸ್ ಕಾಮ್
ಸ್ನ್ಯಾಪ್ ಡೀಲ್ ಲೋಗೋ
ಸ್ನ್ಯಾಪ್ ಡೀಲ್ ಲೋಗೋ

ನವದೆಹಲಿ: ಅಂತರ್ಜಾಲ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ೫೦೦ ಮಿಲಿಯನ್ ಡಾಲರ್ ಹೂಡಿಕೆ ಗಳಿಸಲು ಯಶಸ್ವಿಯಾಗಿದೆ. ಈ ಬೃಹತ್ ಮೊತ್ತದ ಹೂಡಿಕೆದಾರರು ಆಲಿಬಾಬ, ಫಾಕ್ಸ್ ಕಾಮ್ ಮತ್ತು ಸಾಫ್ಟ್ ಬ್ಯಾಂಕ್ ಎಂದು ಸಂಸ್ಥೆ ಮಂಗಳವಾರ ತಿಳಿಸಿದೆ.

ಈಗ ಸ್ನ್ಯಾಪ್ ಡೀಲ್ ಗೆ ಸದ್ಯದ ಹೂಡಿಕೆದಾರರಾದ ಟೆಮಸೇಕ್, ಬ್ಲ್ಯಾಕ್ ರಾಕ್, ಮೈರಾಡ್ ಮತ್ತು ಪ್ರೇಂ ಜಿ ಇನ್ವೆಸ್ಟ್ ಸಂಸ್ಥೆಗಳು ಕೂಡ ಈ ಹೂಡಿಕೆಯ ಸುತ್ತಿನಲ್ಲಿ ಭಾಗವಹಿಸಿವೆ.

"ನಮ್ಮ ಸದ್ಯದ ಹೂಡಿಕೆದಾರರೊಂದಿಗೆ ಜಾಗತಿಕ ಹೂಡಿಕೆದಾರರಾದ ಆಲಿಬಾಬಾ, ಫಾಕ್ಸ್ ಕಾಮ್ ಮತ್ತು ಸಾಫ್ಟ್ ಬ್ಯಾಂಕ್ ಕೂಡ ಈಗ ಭಾಗವಹಿಸಿರುವುದು ದೇಶದ ಅತಿ ಶಕ್ತಿಯುತ ಇ ಕಾಮರ್ಸ್ ಸಂಸ್ಥೆಯನ್ನಾಗಿ ಬೆಳೆಸಲು ಸಾಧ್ಯವಾಗುತ್ತದೆ" ಎಂದು ಸಹ ಸಂಸ್ಥಾಪಕ ಮತ್ತು ಸ್ನ್ಯಾಪ್ ಡೀಲ್ ನ ಕಾರ್ಯ ನಿರ್ವಾಹಕ ಅಧಿಕಾರಿ ಕುನಾಲ್ ಬಾಹ್ಲ್ ತಿಳಿಸಿದ್ದಾರೆ.

೨೦೧೦ ರಲ್ಲಿ ಪ್ರಾರಂಭವಾದ ಸ್ನ್ಯಾಪ್ ಡೀಲ್ ೧೫೦೦೦೦ ಮಾರಾಟಗಾರರಿದ್ದು, ೧೫ ದಶಲಕ್ಷ ಉತ್ಪನ್ನಗಳ ಮಾರಾಟವನ್ನು ನಡೆಸುತ್ತದೆ. ಇದು ದೇಶದಾದ್ಯಂತ ೫೦೦೦ ಕ್ಕೂ ಹೆಚ್ಚು ನಗರಗಳ ಮತ್ತು ಪಟ್ಟಣಗಳ ಸಂಪರ್ಕವನ್ನು ಸಾಧಿಸುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com