ಪ್ರಧಾನಿ ಮೋದಿ ಭಾರತದಲ್ಲಿ ಅತಿ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನ ನಾಯಕ: ಲಿಂಕ್ಡ್ ಇನ್

ಒಂದು ದಶಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014-15ರಲ್ಲಿ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಜನನಾಯಕ...
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
Updated on

ನವದೆಹಲಿ: ಒಂದು ದಶಲಕ್ಷಕ್ಕೂ ಅಧಿಕ ಅನುಯಾಯಿಗಳನ್ನು ಹೊಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2014-15ರಲ್ಲಿ ಭಾರತದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟ ಜನನಾಯಕ ಎಂದು ವೃತ್ತಿಪರ ಸಾಮಾಜಿಕ ಜಾಲತಾಣ ಲಿಂಕ್ಡ್ ಇನ್ ಘೋಷಿಸಿದೆ.

ಲಿಂಕೆಡ್ ಇನ್ ಪಟ್ಟಿಯಲ್ಲಿ ಗೂಗಲ್ ನ ರಾಜನ್ ಆನಂದ್, ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಶ್ಹಾ, ಸ್ನಾಪ್ ಡೀಲ್ ನ ಕುನಲ್ ಬಾಲ್, ಫೇಸ್ ಬುಕ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕೀರ್ತಿಗಾ ರೆಡ್ಡಿ, ಇಂಟೆಲ್ ಇಂಡಿಯಾದ ಅಧ್ಯಕ್ಷ ಕುಮುದ್ ಶ್ರೀನಿವಾಸ್, ವೀಸಾ ಗ್ರೂಪ್ ಕಂಟ್ರಿ ವ್ಯವಸ್ಥಾಪಕ ರಾಮಚಂದ್ರನ್ ಟಿ.ಆರ್., ಸೀಮನ್ಸ್ ಕೈಗಾರಿಕಾ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಸುಂಮನ್ ಬೋಸ್ ಮತ್ತು ಸ್ವಾತಿ ಪಿರಮಲ್ ಸ್ಥಾನ ಗಳಿಸಿದ್ದಾರೆ.

ನಿಜವಾದ ನಾಯಕ ತನ್ನ ಮುಂದಿರುವ ಜನರನ್ನು ಮುಂದೆ ಕರೆದೊಯ್ಯಲು ಒಂದು ಬಲವಾದ ದೃಷ್ಟಿ ಹೊಂದಿರಬೇಕು. ಪ್ರಧಾನಮಂತ್ರಿ ನರೇಂದ್ರ ಮೋದಿಯವರಲ್ಲಿ ಆ ದೃಷ್ಟಿಕೋನವಿದೆ. ಅವರು ತಮ್ಮ ಡಿಜಿಟಲ್ ಇಂಡಿಯಾ ಯೋಜನೆಗಳ ಮೂಲಕ ದೇಶದ ಜನರ ಮೇಲೆ ಪ್ರಭಾವ ಬೀರಿದ್ದಾರೆ ಮತ್ತು ಕೋಟ್ಯಂತರ ಜನರ ಕನಸುಗಳಿಗೆ ಆಶಾಕಿರಣವಾಗಿದ್ದಾರೆ ಎಂದು ಲಿಂಕ್ಡ್ ಇನ್ ತನ್ನ ಬ್ಲಾಗ್ ನಲ್ಲಿ ಹೇಳಿದೆ.

ಇಂದು ಭಾರತ ವಿಶ್ವ ಭೂಪಟದಲ್ಲಿ ಗುರುತಿಸಿಕೊಂಡಿದೆ. ಮೋದಿಯವರು ಈಗಾಗಲೇ ಟ್ವಿಟ್ಟರ್ ನಲ್ಲಿ 14.4 ದಶಲಕ್ಷ ಅನುಯಾಯಿಗಳನ್ನು ಹೊಂದುವ ಮೂಲಕ ವಿಶ್ವದ ನಾಯಕರಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಫೇಸ್ ಬುಕ್ ನಲ್ಲಿ ಸಹ ಅವರಿಗೆ 3 ಕೋಟಿಗೂ ಅಧಿಕ ಅನುಯಾಯಿಗಳಿದ್ದಾರೆ.

ಲಿಂಕ್ಡ್  ಇನ್ ವೃತ್ತಿಪರರ ಸಾಮಾಜಿಕ ಜಾಲತಾಣವಾಗಿತ್ತು, ಇದರಲ್ಲಿ ಕೈಗಾರಿಕೆ, ತಂತ್ರಜ್ಞಾನ, ಅಂತರ್ಜಾಲ, ಮಾನವ ಸಂಪನ್ಮೂಲ, ದೂರಸಂಪರ್ಕ, ವ್ಯಾಪಾರ, ಜಾಹೀರಾತು ಮೊದಲಾದ ಹತ್ತು ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡುವ ವೃತ್ತಿಪರರು ತಮ್ಮ ಖಾತೆ ತೆರೆದಿರುತ್ತಾರೆ. ಇದರಲ್ಲಿ ಭಾರತದ 31 ದಶಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com