ಜಿಡಿಪಿ ಪ್ರಗತಿ ಹಿನ್ನಡೆ

ಮುಂಗಾರು ಮಳೆ ಸಾಧಾರಣ ಪ್ರಮಾಣಕ್ಕಿಂತಲೂ ಕಡಿಮೆಯಾಗಿರುವು ದರಿಂದ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ವೇಗವಾಗಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಮುಂಗಾರು ಮಳೆ ಸಾಧಾರಣ ಪ್ರಮಾಣಕ್ಕಿಂತಲೂ ಕಡಿಮೆಯಾಗಿರುವು ದರಿಂದ ಮತ್ತು ಆರ್ಥಿಕ ಸುಧಾರಣಾ ಕ್ರಮಗಳನ್ನು ವೇಗವಾಗಿ ಕೈಗೊಳ್ಳದಿರುವು ದರಿಂದ ಪ್ರಸಕ್ತ ವರ್ಷ ದೇಶದ ಆರ್ಥಿಕ ಪ್ರಗತಿಯನ್ನು ಜಾಗತಿಕ ರೇಟಿಂಗ್ ಸಂಸ್ಥೆ  ಪ್ರಸಕ್ತ ವರ್ಷದಲ್ಲಿ ಭಾರತದ ಆರ್ಥಿಕತೆ ಶೇ.7.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಮೂಡೀಸ್ ಈ ಹಿಂದೆ ಅಂದಾಜಿಸಿತ್ತು.
ಆದರೆ ಈಗ ಈ ಪ್ರಮಾಣವನ್ನು ಪರಿಷ್ಕರಿಸಿದ್ದು ಶೇ.7ಕ್ಕೆ ಇಳಿಸಿದೆ. ಮುಂಗಾರು ಆರಂಭದಲ್ಲಿ ನಿರೀಕ್ಷಿಸಿ ದ್ದಷ್ಟು ಮಳೆ ಕೊರತೆ ಎದುರಾಗಿಲ್ಲ. ಆದರೂ ಸರಾಸರಿಗಿಂತಲೂ ಕಡಿಮೆ
ಯಾಗಿದೆ. ಹೀಗಾಗಿ ದೇಶದ ಆರ್ಥಿಕ ಪ್ರಗತಿ ಅಂದಾಜನ್ನು ಪರಿಷ್ಕರಿಸಲಾಗಿದೆ ಎಂದು ಗ್ಲೋಬಲ್ ಮೈಕ್ರೊ ಔಟ್ ಲುಕ್ ವರದಿಯಲ್ಲಿ ಹೇಳಿದೆ. ಆದರೂ ಮುಂದಿನ ವರ್ಷ ಶೇ.7.5ರಷ್ಟು ಅಭಿವೃದ್ಧಿ ದಾಖಲಿಸಲಿದೆ ಎಂದು ವರದಿಯಲ್ಲಿ ಹೇಳಿದೆ. ಆರ್ಥಿಕ ಪ್ರಗತಿಯ ಮುನ್ನೋಟ ನೀಡಲು ಪ್ರಮುಖ ಅಡ್ಡಿಯಾಗಿರುವ ಅಂಶವೆಂದರೆ ಆರ್ಥಿಕ ಸುಧಾರಣೆ
ಕ್ರಮಗಳು ನಿಧಾನವಾಗಿ ಸಾಗಿರುವುದು ಮತ್ತು ಇದಕ್ಕೆ ಮೂಡಬೇಕಾದ ಒಮ್ಮತ ದುರ್ಬಲಗೊಳ್ಳುತ್ತಿದೆ ಎಂದು ಸಂಸ್ಥೆ ಅಭಿಪ್ರಾಯಪಟ್ಟಿದೆ. ಅತ್ಯಂತ ಪ್ರಮುಖ ಸುಧಾರಣೆಗಳಾ ದ ಜಿಎಸ್‍ಟಿ ಮತ್ತು ಭೂ ಸ್ವಾಧೀನ ಮಸೂದೆಯನ್ನು ರಾಜಕೀಯ ಕಾರಣಗಳಿಗಾಗಿ ಅನುಷ್ಠಾನಕ್ಕೆ ತರಲು ಸಾಧ್ಯವಾಗಿಲ್ಲ ಎಂದಿದೆ. ಈ ಸಾಲಿನಲ್ಲಿ ಭಾರತದ ಆರ್ಥಿಕತೆ ಶೇ.7.5ರಷ್ಟು ಪ್ರಗತಿ ಸಾಧಿಸಲಿದೆ ಎಂದು ಐಎಂಎಫ್  ಅಂದಾಜಿಸಿತ್ತು. ಇದಕ್ಕೆ ಹೋಲಿಸಿದರೆ ಮೂಡೀಸ್ ಅಂದಾಜು ಇನ್ನೂ ಕಡಿಮೆಯಾಗಿದೆ. ಇದಕ್ಕೆ ತದ್ವಿರುದ್ಧ ಅಂಶವೆಂದರೆ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಆರ್ ಬಿಐ ಅಂದಾಜಿಗಿಂತ ಮೂಡೀಸ್ ಮತ್ತು ಐಎಂಎಫ್ ಅಂದಾಜು ಕಡಿಮೆ ಇದೆ. ಈ ಹಣಕಾಸು ವರ್ಷದಲ್ಲಿ ಜಿಡಿಪಿ ಶೇ.8 ರಿಂದ 8.5ರಷ್ಟು ಪ್ರಗತಿ ದಾಖಲಿಸಲಿದೆ ಎಂದು ಹಣಕಾಸು ಸಚಿವಾಲಯ ಹೇಳಿದ್ದರೆ, ಶೇ.7.6ರಷ್ಟು ಇರಲಿದೆ ಎಂದು ಆರ್‍ಬಿಐ ಹೇಳಿತ್ತು. ಶೇ.7ರಷ್ಟು ಪ್ರಗತಿ ಸಾಧಿಸಿದರೂ ಭಾರತ ವೇಗವಾಗಿ ಆರ್ಥಿಕ ಪ್ರಗತಿ ಸಾಧಿಸುತ್ತಿರುವ ದೇಶಗಳ ಸಾಲಿನಲ್ಲಿರಲಿ ದೆ ಎಂದು ಮೂಡೀಸ್ ರೇಟಿಂಗ್ ವಿಶ್ಲೇಷಕರಾದ ಅತ್ಸಿ ಸೇಠ್ ಪುನರುಚ್ಚರಿಸಿದ್ದಾರೆ. ಮುಂದಿನ ವರ್ಷ ಬೆಳವಣಿ ಗೆ ವೇಗ ಪಡೆಯಲಿದೆ ಎಂತಲೂ ಹೇಳಿದ್ದಾರೆ. ದೇಶದ ಆರ್ಥಿಕತೆ ಮತ್ತು ಬ್ಯಾಂಕ್‍ಗಳ ಸಾಲ ಬೇಡಿಕೆ  , ಮುಂಗಾರು ಮತ್ತು  ಜಾಗತಿಕ ಆರ್ಥಿಕತೆಯಲ್ಲಿನ ಬೆಳವಣಿಗೆಗಳ ಆಧಾರದಲ್ಲಿ ಜಿಡಿಪಿ ಅಂದಾಜನ್ನು ನಿರ್ಮಿಸಲಾಗುವುದು. ದೇಶದ ಆರ್ಥಿಕತೆಯಲ್ಲಿನ ಬೆಳವಣಿಗೆಗಳ ಆಧಾರದಲ್ಲಿ ಜಿಡಿಪಿ ಅಂದಾಜನ್ನು ನಿರ್ಧರಿಸಲಾಗುವುದು.  ದೇಶದ ಆರ್ಥಿಕತೆ ಮತ್ತು ಬ್ಯಾಂಕ್ಗಳ ಸಾಲ ಬೇಡಿಕೆ ನಿಧಾನವಾಗಿದ್ದರೂ ಏರುಮುಖದಲ್ಲಿದೆ. ಮುಂಗಾರು ಹವಾಮಾನ ಅಂದಾಜಿಸಿ ದಷ್ಟು ಕೊರತೆಯಾಗಿಲ್ಲ ಎಂದು ಸೇಠ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com