ಈರುಳ್ಳಿ ಬೆಲೆ 100 ರೂಪಾಯಿಗೆ ಏರಿಕೆಯಾಗುವ ಸಾಧ್ಯತೆ

ಕಳೆದ ಕೆಲ ವಾರಗಳಿಂದ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ

ನವದೆಹಲಿ: ಕಳೆದ ಕೆಲ ವಾರಗಳಿಂದ ಏರಿಕೆಯಾಗುತ್ತಿರುವ ಈರುಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಈರುಳ್ಳಿ ದಾಸ್ತಾನು ಹೊಂದಿರುವವರು ಇದರ ಲಾಭ ಪಡೆಯುತ್ತಿದ್ದಾರೆ.

ಸರ್ಕಾರ ಕನಿಷ್ಠ ರಫ್ತು ಬೆಲೆಯನ್ನು ಹೆಚ್ಚಿಸಿರುವುದರ ಹೊರತಾಗಿಯೂ, ಈರುಳ್ಳಿ ಬೆಲೆ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಈರುಳ್ಳಿ ದರ ಪ್ರತಿ ಕೆ.ಜಿಗೆ 80 ರೂಪಾಯಿಯಾಗಿದ್ದು, ಪೂರೈಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ ಗೆ 100 ರಷ್ಟಾಗಲಿದೆ ಎಂದು ಅಂದಾಜಿಸಲಾಗಿದೆ.
ಮಹಾರಾಷ್ಟ್ರದ ನಾಸಿಕ್ ನಲ್ಲಿ ಈರುಳ್ಳಿ ದರ ಸರಾಸರಿ ರೂ 57 ಕ್ಕೆ ಏರಿಕೆಯಾಗಿದ್ದು, 2013 ರಲ್ಲಿ ದಾಖಲಾಗಿದ್ದ ಬೆಲೆ ಏರಿಕೆಯನ್ನು ಹಿಂದಿಕ್ಕಿದೆ. ಮಾರುಕಟ್ಟೆಗೆ ಈರುಳ್ಳಿ ಪೂರೈಕೆಯಾಗಲು ಕ್ರಮ ಕೈಗೊಂಡಿದ್ದ ಕೇಂದ್ರ ಸರ್ಕಾರ ಪ್ರತಿ ಟನ್ ಈರುಳ್ಳಿಗೆ 700 ಡಾಲರ್ ಕ್ಲನಿಷ್ಠ ರಫ್ತು ಬೆಲೆಯನ್ನು ನಿಗದಿಪಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com