
ಮುಂಬೈ: ರುಪಾಯಿ ಅಪಮೌಲ್ಯಗೊಲಿಸುವುದರ ಪರವಾಗಿಲ್ಲ ಎಂದು ಸ್ಪಷ್ಟಪಡಿಸಿರುವ ಆರ್ ಬಿಐ ಗರ್ವನರ್ ರಘುರಾಂ ರಾಜನ್, ಜಗತ್ತಿನಾದ್ಯಂತ ಕುಸಿಯುತ್ತಿರುವ ಕರೆನ್ಸಿ ಮೌಲ್ಯಗಳನ್ನು ನಿಯಂತ್ರಣಕ್ಕೆ ಹಣಕಾಸು ನೀತಿಗಳಲ್ಲಿ ಬದಲಾವಣೆ ತರುವುದನ್ನು ಬೆಂಬಲಿಸಿದ್ದಾರೆ.
ಆಂಗ್ಲ ಪತ್ರಿಯೊಂದಕ್ಕೆ ಬುಧವಾರ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ರುಪಾಯಿ ಅಪಮೌಲ್ಯಗೊಳಿಸುವುದಕ್ಕೆ ಬದಲಾಗಿ ಆರ್ಥಿಕತೆಯನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸಬೇಕು. 2013ಕ್ಕೆ ಹೋಲಿಸಿದರೆ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ದು ಜಾಗತಿಕ ಆರ್ಥಿಕತೆಯಲ್ಲಾಗುವ ಏಳುಬೀಳುಗಳನ್ನು ನಿಭಾಯಿಸುವ ಶಕ್ತಿ ಹೊಂದಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತಕ್ಕೆ ದೀರ್ಘ ಕಾಲ ಬೇಕು: ಜಾಗತಿಕ ಆರ್ಥಿಕತೆಯನ್ನು ಮುನ್ನಡೆಸುವಲ್ಲಿ ಚೀನಾವನ್ನು ಹಿಂದಿಕ್ಕಲು ಭಾರತಕ್ಕೆ ದೀರ್ಘಕಾಲ ಬೇಕಾಗಲಿದೆ ಎಂದು ರಘುರಾಂ ರಾಜನ್ ಹೇಳಿದ್ದಾರೆ. ಜಗತ್ತಿನ ಯಾವುದೇ ಭಾಕದಲ್ಲಿ ಏರುಪೇರಾದರೂ ಇತರ ಎಲ್ಲ ದೇಶಗಳ ಮೇಲೂ ಪರಿಣಾಮ ಬೀರಲಿದೆ ಎಂದು ರಾಜನ್ ಹೇಳಿದ್ದಾರೆ.
Advertisement