ಮಲ್ಯ ಐಷಾರಾಮಿ ವಿಮಾನದ ಬಿಡಿಭಾಗ ಸದ್ಯದಲ್ಲೇ ಹರಾಜು

ಮದ್ಯದ ದೊರೆ ಕಿಂಗ್‍ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯರ ಐಷಾರಾಮಿ ಜೆಟ್ ವಿಮಾನ ಹರಾಜಿನಲ್ಲಿ ಗುಜರಿ...
ವಿಜಯ್ ಮಲ್ಯ
ವಿಜಯ್ ಮಲ್ಯ
ಮುಂಬೈ: ಮದ್ಯದ ದೊರೆ ಕಿಂಗ್‍ ಫಿಷರ್ ಏರ್ ಲೈನ್ಸ್ ಮಾಲೀಕ ವಿಜಯ್ ಮಲ್ಯರ ಐಷಾರಾಮಿ ಜೆಟ್ ವಿಮಾನ ಹರಾಜಿನಲ್ಲಿ ಗುಜರಿ ಸೇರಲು ದಿನಗಣನೆ ಆರಂಭವಾಗಿದೆ.
ಮುಂಬೈಯ ಗುಜರಿ ವ್ಯಾಪಾರಿಗಳು ಕಿಂಗ್ ಫಿಷರ್ ವಿಮಾನದ ಬಿಡಿಭಾಗ ಕೊಳ್ಳಲು ಭಾರಿ ಉತ್ಸುಕತೆ ವಹಿಸಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ವಿಸ್ ಟ್ಯಾಕ್ಸ್ ಇಲಾಖೆ ತನ್ನ ಸುಪರ್ದಿಯಲ್ಲಿರುವ ವಿಜಯ್ ಮಲ್ಯರವರ ಸ್ವಂತ ಉಪಯೋಗದ ಲಕ್ಸುರಿ ಜೆಟ್ 319 ವಿಟಿ-ವಿಜೆಎಂ ಕಾರ್ಪೊರೆಟ್ ಏರ್ ಬಸ್ ಅನ್ನು ಸದ್ಯದಲ್ಲೇ ಹರಾಜಿಗಿಡಲು ನಿರ್ಧರಿಸಿದೆ. 
ಜಗತ್ತಿನ ಅತ್ಯಂತ ದುಬಾರಿ ಹಾಗೂ ಐಶಾರಾಮಿ ವಿಮಾನವೆಂಬ ಖ್ಯಾತಿ ಹೊಂದಿದ್ದ ಈ ಏರ್‍ಜೆಟ್ ಸದ್ಯದಲ್ಲೇ ಇತಿಹಾಸದ ಪುಟ ಸೇರಲಿದೆ ಎಂದು ಬೆಂಗಳೂರು ಮಿರರ್ ವರದಿ ಮಾಡಿದೆ. ಬಾಂಬೆ ಹೈಕೋರ್ಟ್ ಆದೇಶದ ಪ್ರಕಾರ ಮಾರ್ಚ್ 1ರೊಳಗಾಗಿ ಹರಾಜು ಪ್ರಕ್ರಿಯ.ೆ ಮುಗಿಯಬೇಕಿದ್ದು, ಇನ್ನು ಕೆಲವು ವಾರಗಳಲ್ಲೇ ಈ ಕೆಲಸ ಮಾಡಿ ಮುಗಿಸುವುದಾಗಿ ಇಲಾಖೆ ತಿಳಿಸಿದೆ. 
ಕಿಂಗ್ ಫಿಶರ್ ಕಂಪನಿ ತನ್ನ ಪ್ರಯಾಣಿಕರಿಂದ ಸಂಗ್ರಹಸಿದ ರು.182 ಕೋಟಿ ಸರ್ವಿಸ್ ಟ್ಯಾಕ್ಸ್ ಹಣವನ್ನು ಇಲಾಖೆಗೆ ಕಟ್ಟದೇ ಇದ್ದುದಕ್ಕಾಗಿ ಮೂರು ವರ್ಷದ ಹಿಂದೆ ಈ ವಿಮಾನವನ್ನು ಜಪ್ತಿ ಮಾಡಿಕೊಳ್ಳಲಾಗಿತ್ತು. 
2006ರಲ್ಲಿ ತಯಾರಾಗಿದ್ದ ಈ ವಿಮಾನ ಸದ್ಯಕ್ಕೆ ಮುಂಬೈ ವಿಮಾನವನ್ನು ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದು ನಿಂತಲ್ಲೇ ಹಾಳಾಗತೊಡಗಿದೆ. ಬಿಡಿಭಾಗಗಳು ಕಳಚಿ ಬೀಳತೊಡಗಿವೆ. ವಿಮಾನದಲ್ಲಿ ಒಟ್ಟು ನಾಲ್ಕು ಪಿಕಾಸೋ ಕಲಾಕೃತಿಗಳು ಹಾಗೂ 8 ಕ್ಯಾರಟ್ ಗುಣಮಟ್ಟದ 15 ವಜ್ರದ ಹರಳುಗಳುಳ್ಳ ಬಾಲಾಜಿ ಮೂರ್ತಿ ಇದೆ. 
ಅದನ್ನು ಮಲ್ಯರಿಗೆ ವಾಪಸ್ ನೀಡಲಾಗಿದೆ. ವಿಮಾನದ ಹೊರತಾಗಿ ಅದರಲ್ಲಿದ್ದ ಎಲ್ಲ ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿ ಮಲ್ಯರ ಸುಪರ್ದಿಗೆ ನೀಡಿರುವುದಾಗಿ ತೆರಿಗೆ ಇಲಾಖೆ ಖಚಿತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com