
ನವದೆಹಲಿ: ಬೇಳೆಕಾಳು, ಆಹಾರ ಪದಾರ್ಥಗಳ ಬೆಲೆ ಏರಿಕೆ ಮುಂದುವರೆದಿದ್ದು ವಾರ್ಷಿಕ ಹಣದುಬ್ಬರ ದರ ಶೇ.(-) 3 .81 ರಿಂದ (-) 1.99 ಪ್ರತಿಶತದಷ್ಟು ಏರಿಕೆಯಾಗಿದೆ.
ಡಿ.14 ರಂದು ನವೆಂಬರ್ ತಿಂಗಳ ಹಣದುಬ್ಬರದ ಬಗ್ಗೆ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದ್ದು, ನವೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ದರ ಶೇ.2 .3 ರಷ್ಟು ಏರಿಕೆಯಾಗಿದೆ.
ಒಟ್ಟಾರೆ ಹಣದುಬ್ಬರ ದರ ಋಣಾತ್ಮಕ ವಲಯದಲ್ಲೇ ಮುಂದುವರೆದಿದ್ದು, ಶೇ.(-) 3 .81 ರಿಂದ ಶೇ. (-)1 .99 ಕ್ಕೆ ಏರಿಕೆಯಾಗಿದೆ. ಹಣದುಬ್ಬರದ ದರ ಕಳೆದೆರಡು ತಿಂಗಳಲ್ಲಿ ಅನುಕ್ರಮವಾಗಿ ಶೇ. (-)5 .06 , ಶೇ. (-)4 .59 ರಷ್ಟಿತ್ತು. ಪರಿಶೀಲನೆಯಲ್ಲಿರುವ ಪ್ರಸಕ್ತ ಸಾಲಿನಲ್ಲಿ ಆಹಾರ ಪದಾರ್ಥಗಳ ಹಣದುಬ್ಬರ ಶೇ. (-)1 .2 ರಿಂದ 3 .12 ರಷ್ಟಾಗಿದೆ. ಇನ್ನು ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಸೂಚ್ಯಂಕ ಏರಿಕೆಯಾಗಿದ್ದು ಋಣಾತ್ಮಕ ವಲಯದಲ್ಲೇ ಮುಂದುವರೆದಿದೆ.
Advertisement