ಮೈಕ್ರೊಮ್ಯಾಕ್ಸ್ ರು.300 ಕೋಟಿ ಹೂಡಿಕೆ

ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಮೊಬೈಲ್ ತಯಾರಿಕಾ ಕಂಪನಿ ಮೈಕ್ರೊಮ್ಯಾಕ್ಸ್ ರು.300 ಕೋಟಿ ಬಂಡವಾಳ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಮೊಬೈಲ್ ತಯಾರಿಕಾ ಕಂಪನಿ ಮೈಕ್ರೊಮ್ಯಾಕ್ಸ್ ರು.300 ಕೋಟಿ ಬಂಡವಾಳ ತೊಡಗಿಸಲಿದೆ. 
ಈ ಬಂಡವಾಳದಲ್ಲಿ ಮೂರು ಹೊಸ ತಯಾರಿಕಾ ಘಟಕಗಳನ್ನು ನಿರ್ಮಾಣ ಮಾಡಲಿದ್ದು ತಯಾರಿಕೆ ಹೆಚ್ಚಿಸಲಿದೆ. ಆ ಮೂಲಕ ಚೀನಾದಿಂದ ಮಾಡಿಕೊಳ್ಳುವ ಆಮದು ಕಡಿಮೆಗೊಳಿಸುವುದು ಕಂಪನಿಯ ಯೋಜನೆಯಾಗಿದೆ. 
ಹೊಸ ಮೊಬೈಲ್ ತಯಾರಿಕಾ ಘಟಕಗಳನ್ನು ರಾಜಸ್ಥಾನ ತೆಲಂಗಾಣ ಮತ್ತು ಆಂಧ್ರಪ್ರದೇಶಗಳಲ್ಲಿ ನಿರ್ಮಿಸಲಿದ್ದು ಮುಂದಿನ ವರ್ಷದಿಂದ ಕಾರ್ಯಾರಂಭ ಮಾಡಲಿವೆ.
ತೆಲಂಗಾಣದಲ್ಲಿ 20 ಎಕರೆ ಭೂಮಿ ಮತ್ತು ಮೂಲಸೌಕರ್ಯ ಕಲ್ಪಿಸಲಾಗಿದೆ, ರಾಜಸ್ತಾನದಲ್ಲಿ 25 ಎಕರೆ ಭೂಮಿ ನೀಡಿದ್ದು ಇನ್ನು ಕೆಲವೇ ದಿನಗಳಲ್ಲಿ ನಿರ್ಮಾಣ ಆರಂಭಿಸಲಾಗುವುದು. ತಿರುಪತಿಯಲ್ಲೂ ಶೀಘ್ರದಲ್ಲಿ ತಯಾರಿಕೆ ಆರಂಭಿಸಲಾಗುವುದು ಎಂದು ಕಂಪನಿ ಸಹ ಸಂಸ್ಥಾಪಕ ರಾಜೇಶ್ ಅಗರ್‍ವಾಲ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com