ನಾರಾಯಣ ಹೃದಯಾಲಯದಿಂದ ಸಾರ್ವಜನಿಕ ಷೇರು ವಿತರಣೆ

ರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾರಾಯಣ ಹೃದಯಾಲಯ ಇದೀಗ ಷೇರು ಕ್ಷೇತ್ರಕ್ಕೆ ಪ್ರವೇಶಿಸಿದ್ದು,..
ಡಾ.ದೇವಿಪ್ರಸಾದ್ ಶೆಟ್ಟಿ
ಡಾ.ದೇವಿಪ್ರಸಾದ್ ಶೆಟ್ಟಿ

ಬೆಂಗಳೂರು: ಆರೋಗ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ನಾರಾಯಣ ಹೃದಯಾಲಯ ಇದೀಗ ಷೇರು ಕ್ಷೇತ್ರಕ್ಕೆ ಪ್ರವೇಶಿಸಿದ್ದು, ಡಿಸೆಂಬರ್ 17ರಿಂದ ಸಾರ್ವಜನಿಕ ಷೇರು ವಿತರಣೆಗೆ ಚಾಲನೆ ನೀಡಲಿದೆ.

ಈ ಸಂಬಂಧ ವಿವರಣಾ ಪತ್ರಿಕೆಯ ಮೂಲಕ ಸಾರ್ವಜನಿಕ ಷೇರು ವಿತರಣೆಯನ್ನು ಆರಂಬಿಸಲು ಡಿಸೆಂಬರ್ 8ರಂದು ನೋಂದಣಿ ಮಾಡಿದ್ದು, ತಲಾ ರು. 10 ಮುಖಬೆಲೆಯ 24,523,297 ಈಕ್ವಿಟಿ ಷೇರುಗಳನ್ನು ಪ್ರತಿ ಈಕ್ವಿಟಿ ಷೇರಿಗೆ ರು. 245 ರಿಂದ ರು.250ರ ದರಪಟ್ಟಿಯಲ್ಲಿ ವಿತರಿಸಲಿದೆ ಎಂದು ನಾರಾಯಣ ಹೃದಯಾಲಯ ಮುಖ್ಯಸ್ಥ ಡಾ.ದೇವಿಪ್ರಸಾದ್ ಶೆಟ್ಟಿ ಅವರು ತಿಳಿಸಿದ್ದಾರೆ.

ಈ ಸಂಬಂಧ ಇಂದು ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ, ಇದರಲ್ಲಿ ಷೇರು ಪ್ರೀಮಿಯಂ ಸೇರಿದ್ದು, ಒಟ್ಟು 6,287,978 ಈಕ್ವಿಟಿ ಷೇರುಗಳನ್ನು ಅಶೋಕಾ ಇನ್‍ವೆಸ್ಟ್‍ಮೆಂಟ್ ಹೋಲ್ಡಿಂಗ್ಸ್ ಲಿಮಿಟೆಡ್ ಮೂಲಕ; 1,886,455 ಈಕ್ವಿಟಿ ಷೇರುಗಳನ್ನು ಅಂಬಾದೇವಿ ಮಾರಿಷಸ್ ಹೋಲ್ಡಿಂಗ್ ಕಂಪೆನಿ ಮೂಲಕ; 12,261,648 ಈಕ್ವಿಟಿ ಷೇರುಗಳನ್ನು ಜೆಪಿ ಮಾರ್ಗನ್ ಮಾರಿಷಸ್ ಹೋಲ್ಡಿಂಗ್ v1ಲಿಮಿಟೆಡ್ ಮೂಲಕ (ದಿ ಇನ್‍ವೆಸ್ಟರ್ ಸೆಲ್ಲಿಂಗ್ ಷೇರ್‍ಹೋಲ್ಡರ್ಸ್) ಮೂಲಕ; 2,043,608 ಈಕ್ವಿಟಿ ಷೇರುಗಳನ್ನು ಸಂಗ್ರಹಿಸಲಾಗುವುಗು ಎಂದು ತಿಳಿಸಿದರು.

ಕನಿಷ್ಠ ಬಿಡ್ ಲಾಟ್ 60 ಈಕ್ವಿಟಿ ಷೇರುಗಳಾಗಿದ್ದು, ಆ ಬಳಿಕ 60ರ ಗುಣಕದಲ್ಲಿ ಖರೀದಿ ಮಾಡಬಹುದು. ಕಂಪೆನಿ, ಸೆಲ್ಲಿಂಗ್ ಶೇರ್‍ಹೋಲ್ಡರ್‍ಸ್‍ಗಳು ಬಿಆರ್‍ಎಲ್‍ಎಂ ಜೊತೆಗೆ ಚರ್ಚಿಸಿ, ಭಾಗವಹಿಸುವ ಆ್ಯಂಕರ್ ಹೂಡಿಕೆದಾರನ್ನು ನಿರ್ಧರಿಸಬಹುದು.

ಆ್ಯಂಕರ್ ಹೂಡಿಕೆದಾರರಲ್ಲಿ ಆ್ಯಂಕರ್ ಹೂಡಿಕೆ ಬಿಡ್ಡಿಂಗ್ ದಿನವನ್ನು ಹೂಡಿಕೆ ದಿನ ಅಥವಾ ಅದರ ಒಂದು ದಿನ ಮೊದಲು ಮಾಡಬಹುದು. ಬಿಡ್ಡಿಂಗ್ ಡಿಸೆಂಗಬರ್ 21,2015ರಂದು ಅಂತ್ಯವಾಗಲಿದೆ. ಈಕ್ವಿಟಿ ಷೇರುಗಳುನ್ನು ಬಿಎಸ್‍ಇ ಲಿಮಿಟೆಡ್ ಮತ್ತು ರಾಷ್ಟ್ರೀಯ ಷೇರು ವಿತರಣಾ ಲಿಮಿಟೆಡ್ (ಎನ್‍ಎಇ) ಅಲ್ಲಿ ನೋಂದಣಿ ಮಾಡಲಾಗಿದೆ.

ಈ ಷೇರು ಆಹ್ವಾನವನ್ನು ಸೆಕ್ಯೂರಿಟೀಸ್ ಅಂಡ್ ಎಕ್ಸ್‍ಚೇಂಜ್ ಬೋರ್ಡ್ ಆಫ್ ಇಂಡಿಯಾದ ನಿಯಮ 26(1)ರ ಅನ್ಯವ ಮಾಡಲಾಗುತ್ತಿದೆ. ಬುಕ್ ಬಿಲ್ಡಿಂಗ್ ಪ್ರಾಸೆಸ್ ಮೂಲಕ ಮಾಡಲಿದ್ದು, ಈ ಪೈಕಿ ಶೇ. 50ರಷ್ಟು ಷೇರುಗಳನ್ನು ಅರ್ಹ ಸಾಂಸ್ಥಿಕ ಖರೀದಿದಾರಿಗೆ ಹಂಚಿಕೆ ಮಾಡಲಾಗುತ್ತದೆ. ಕಂಪನಿ ಅಥವಾ ಸೆಲ್ಲಿಂಗ್ ಶೇರ್‍ಹೋಲ್ಡರ್ಸ್ ಶೇ 60ರಷ್ಟು ಕ್ಯೂಐಬಿ ಭಾಗವನ್ನು ಆ್ಯಂಕರ್ ಹೂಡಿಕೆದಾರರನ್ನು ತಮ್ಮ ವಿವೇಚನಾ ಅನುಸಾರ ನಿಗದಿಪಡಿಸಬಹುದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com