ಆರ್ಥಿಕತೆ ದಿನೇ ದಿನೇ ದುಬಾರಿಯಾಗುತ್ತಿದ್ದು ಬಡವರು ಖರೀದಿಸುವ ಉತ್ಪನ್ನಗಳ ದರಗಳು ನಿರಂತರವಾಗಿ ಮೇಲೇರುತ್ತಿವೆ...
ಆರ್ಥಿಕತೆ ದಿನೇ ದಿನೇ ದುಬಾರಿಯಾಗುತ್ತಿದ್ದು ಬಡವರು ಖರೀದಿಸುವ ಉತ್ಪನ್ನಗಳ ದರಗಳು ನಿರಂತರವಾಗಿ ಮೇಲೇರುತ್ತಿವೆ...

ರೀಟೆಲ್ ಹಣದುಬ್ಬರ ಗಗನಮುಖಿ

ಆರ್ಥಿಕತೆ ದಿನೇ ದಿನೇ ದುಬಾರಿಯಾಗುತ್ತಿದ್ದು ಬಡವರು ಖರೀದಿಸುವ ಉತ್ಪನ್ನಗಳ ದರಗಳು ನಿರಂತರವಾಗಿ...
ನವದೆಹಲಿ: ಆರ್ಥಿಕತೆ ದಿನೇ ದಿನೇ ದುಬಾರಿಯಾಗುತ್ತಿದ್ದು ಬಡವರು ಖರೀದಿಸುವ ಉತ್ಪನ್ನಗಳ ದರಗಳು ನಿರಂತರವಾಗಿ ಮೇಲೇರುತ್ತಿವೆ. ಗ್ರಾಹಕ ದರ ಆಧರಿತ ಹಣದುಬ್ಬರ ಪ್ರಮಾಣ ನವೆಂಬರ್‍ನಲ್ಲಿ ಶೇ.5.41ಕ್ಕೆ ಏರಿಕೆ ಕಂಡಿದೆ. 
ಇದರ ಹಿಂದಿನ ತಿಂಗಳು ಅಕ್ಟೋಬರ್‍ನಲ್ಲಿ ಈ ಪ್ರಮಾಣ ಶೇ.5ರಷ್ಟಿತ್ತು. ನವೆಂಬರ್ ತಿಂಗಳಲ್ಲಿ ಸಗಟು ದರ ಆಧರಿತ ಹಣದುಬ್ಬರ (ಡಬ್ಲ್ಯುಪಿಐ) ಪ್ರಮಾಣ ಸಹ ಶೇ.-1.99ಕ್ಕೆ ಏರಿಕೆ ಕಂಡಿದೆ. ಇದರ ಹಿಂದಿನ ತಿಂಗಳು ಈ ಪ್ರಮಾಣ ಶೇ.-3.8ರಷ್ಟಿತ್ತು. ಡಬ್ಲ್ಯುಪಿಐ ಕಳೆದ ವರ್ಷದ ನವೆಂಬರ್‍ನಿಂದಲೂ ನಕಾರಾತ್ಮಕ ವಲಯದಲ್ಲೇ ಮುಂದುವರೆದಿದೆ. 
ಎರಡೂ ಹಣದುಬ್ಬರ ಪ್ರಮಾಣಗಳು ಏರಿಕೆ ಕಾಣುತ್ತಿರುವುದು ಸಾಮಾನ್ಯ ಜನರ ಜೇಬಿಗೆ ಕತ್ತರಿ ಹಾಕಿದೆ. ಒಂದು ಕಡೆ ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳ ದರಗಳು ಕುಸಿತ ಕಂಡಿರುವುದರಿಂದ ದರ ನಿಗದಿ ಕುರಿತು ಉತ್ಪಾದಕರು ಇನ್ನೂ ನಿರ್ದಿಷ್ಟ ತೀರ್ಮಾನಗಳನ್ನು ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. 
ಆದರೆ ದೇಶೀಯ ಮಾರುಕಟ್ಟೆಯಲ್ಲಿ ಮಾತ್ರ ಹಣದುಬ್ಬರ ಪ್ರಮಾಣ ನಿರಂತರವಾಗಿ ಏರುತ್ತಿದೆ. ನವೆಂಬರ್ ತಿಂಗಳಲ್ಲಿ ಆಹಾರ ಉತ್ಪನ್ನಗಳ ರಿಟೇಲ್ ಹಣದುಬ್ಬರ ಪ್ರಮಾಣ ಶೇ.6.07ಕ್ಕೆ ತಲುಪಿದೆ. ಅಕ್ಟೋಬರ್ ತಿಂಗಳಲ್ಲಿ ಈ ಪ್ರಮಾಣ ಶೇ.5.25ರಷ್ಟಿತ್ತು. ಈ ತಿಂಗಳಲ್ಲಿ ಬೇಳೆ ಕಾಳು ದರಗಳು ಶೇ.46.08ರಷ್ಟು ಏರಿಕೆ ಕಂಡಿದೆ. 
ಡಬ್ಲ್ಯುಪಿಐ ಆಹಾರ ಹಣದುಬ್ಬರ ಪ್ರಮಾಣ ಸಹ ಶೇ.5.02ಕ್ಕೆ ಏರಿಕೆ ಕಂಡಿದೆ. ಇದರ ಹಿಂದಿನ ತಿಂಗಳು ಈ ಪ್ರಮಾಣ ಶೇ.2.44ರಷ್ಟಿತ್ತು. ಈರುಳ್ಳಿ ರೀಟೆಲ್ ದರ ದುಬ್ಬರ ಪ್ರಮಾಣ ಶೇ.52.69ರಷ್ಟು ಏರಿಕೆ ದಾಖಲಿಸಿದ್ದರೆ, ಡಬ್ಲ್ಯುಪಿಐ ಶೇ.14.8ರಷ್ಟು ಏರಿದೆ. 
ವಿದ್ಯುತ್ ಡಬ್ಲ್ಯುಪಿಐ ದರ ನವೆಂಬರ್ ನಲ್ಲಿ ಶೇ.-11.09ಕ್ಕೆ ಏರಿದೆ. ಅಕ್ಟೋಬರ್ ತಿಂಗಳಲ್ಲಿ ಈ ಪ್ರಮಾಣ ಶೇ.-16.32ರಷ್ಟು ಇತ್ತು. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲಕ್ಕೆ ಬೇಡಿಕೆ ಇಲ್ಲವಾಗಿರುವುದನ್ನು ಬಿಂಬಿಸಿದೆ. ರಿಟೇಲ್ ಇಂಧನ ದರದುಬ್ಬರ ಪ್ರಮಾಣ ಶೇ.5.28ಕ್ಕೆ ತಲುಪಿದೆ. ನವೆಂಬರ್‍ನಲ್ಲಿ ತಯಾರಿಕಾ ಉತ್ಪನ್ನಗಳ ರಿಟೇಲ್ ದರ ಶೇ.-1.42ರಷ್ಟಿದ್ದು ಇದರ ಹಿಂದಿನ ತಿಂಗಳು ಈ ಪ್ರಮಾಣ ಶೇ.-1.67ರಷ್ಟಿತ್ತು. 
ಕಳೆದ ಸೆಪ್ಟೆಂಬರ್‍ನಿಂದಲೂ ಸಗಟು ಮತ್ತು ರಿಟೇಲ್ ಹಣದುಬ್ಬರ ಪ್ರಮಾಣವನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ತಿಂಗಳುಗಳಲ್ಲಿ ಈ ದರಗಳು ನಿಯಂತ್ರಣಕ್ಕೆ ಬರಬಹುದು ಎಂದು ಆರ್ಥಿಕ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಉತ್ಪನ್ನಗಳಿಗೆ ಬೇಡಿಕೆ ಇಲ್ಲದಿರುವುದು ಮತ್ತು ಮುಂಗಾರು ಕೊಯ್ಲು ಆರಂಭವಾಗುವುದರಿಂದ ಉತ್ಪನ್ನಗಳ ದರ ಏರಿಕೆ ನಿಯಂತ್ರಣಕ್ಕೆ ಬರಲಿದೆ. 
ಸರ್ಕಾರ ಸಹ ಹಿಂಗಾರು ಸೀಸನ್ ಆಹಾರ ಧಾನ್ಯಗಳ ಉತ್ಪಾದನೆ ಶೇ.5ರಷ್ಟು ಏರಿಕೆ ಕಾಣಬಹುದು ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ. ಹಾಗಿದ್ದರೂ ಮುಂಗಾರು ಸೀಸನ್‍ನಲ್ಲಿ ಸರಾಸರಿ ಮಳೆ ಆಗದಿರುವುದರಿಂದ ಮತ್ತು ಮಹಾರಾಷ್ಟ್ರದಲ್ಲಿ ಜಲಾಶಯಗಳು ಪೂರ್ಣ ಪ್ರಮಾಣದಲ್ಲಿ ತುಂಬದಿರುವುದು ಆತಂಕಕ್ಕೆ ಕಾರಣವಾಗಿದೆ.

Related Stories

No stories found.

Advertisement

X
Kannada Prabha
www.kannadaprabha.com