ಅಕ್ರಮ ಮಾರಾಟದಿಂದ ಸರ್ಕಾರಕ್ಕೆ ರು.39 ಸಾವಿರ ಕೋಟಿ ನಷ್ಟ

ದೇಶದಲ್ಲಿ ಸಿಗರೇಟ್, ಆಟೊ ಮೊಬೈಲ್‍ಗಳು ಸೇರಿದಂತೆ ಏಳು ವಸ್ತುಗಳ ಅಕ್ರಮ ಮಾರಾಟದಿಂದಾಗಿ ಸರ್ಕಾರಕ್ಕೆ 2014ನೇ ಸಾಲಿನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಬೆಂಗಳೂರು: ದೇಶದಲ್ಲಿ ಸಿಗರೇಟ್, ಆಟೊ ಮೊಬೈಲ್‍ಗಳು ಸೇರಿದಂತೆ ಏಳು ವಸ್ತುಗಳ ಅಕ್ರಮ ಮಾರಾಟದಿಂದಾಗಿ ಸರ್ಕಾರಕ್ಕೆ 2014ನೇ ಸಾಲಿನಲ್ಲಿ ರು.39,239 ಕೋಟಿ ನಷ್ಟವಾಗಿದೆ ಎಂದು ಎಫ್ ಕೆಸಿಸಿಐ (ಫಿಕ್ಕಿ) ವರದಿ ತಿಳಿಸಿದೆ. 2011-12ರಿಂದ 2013-14ರ ನಡುವಿನ ಎರಡು ವರ್ಷಗಳಲ್ಲಿ ಸರ್ಕಾರದ ಬೊಕ್ಕಸಕ್ಕೆ ಆದ ನಷ್ಟ ಶೇ.49.8ರಷ್ಟು ಹೆಚ್ಚಳ ಕಂಡಿದೆ. 
ಫಿಕ್ಕಿ ಕ್ಯಾಸ್ಕೇಡ್ ಸಮಿತಿ `ಅಕ್ರಮ ಮಾರುಕಟ್ಟೆ: ನಮ್ಮ ರಾಷ್ಟ್ರೀಯ ಆಸಕ್ತಿಗೊಂದು ಬೆದರಿಕೆ' ವಿಚಾರವನ್ನಿಟ್ಟುಕೊಂಡು 9 ವಸ್ತುಗಳ ಅಕ್ರಮ ಮಾರಾಟದ ಬಗ್ಗೆ ವರದಿ ಸಿದ್ಧಪಡಿಸಿದೆ. ಇದರಲ್ಲಿ ಪ್ಯಾಕೇಜ್ ಆಹಾರ, ಕಂಪ್ಯೂಟರ್ ಹಾರ್ಡ್‍ವೇರ್, ವಾಹನ, ಮೊಬೈಲ್, ತಂಬಾಕು ಮತ್ತು ಮದ್ಯ,ಚಲನಚಿತ್ರ, ಮಾಧ್ಯಮ ಮತ್ತು ಮನರಂಜನೆ,ಕೈಗಾರಿಕೆ ಮತ್ತಿತರ ವಲಯಗಳು ಸೇರಿವೆ. ಖಾಸಗಿ ಹೊಟೇಲ್‍ನಲ್ಲಿ ಫಿಕ್ಕಿ ಸಲಹೆಗಾರ ಹಾಗೂ ಕೇಂದ್ರ ಅಬಕಾರಿ ಮತ್ತು ಸುಂಕ ಇಲಾಖೆ ಮಾಜಿ ಅಧ್ಯಕ್ಷ ಪಿ.ಸಿ.ಝ ವರದಿ ಬಿಡುಗಡೆಗೊಳಿಸಿದರು.
ಫಿಕ್ಕಿ ಕ್ಯಾಸ್ಕೇಡ್ ಈ ಸಂಬಂಧ ದೇಶದಾದ್ಯಂತ ಜಾಗೃತಿ ಮೂಡಿಸುವ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ನಕಲಿ ವಸ್ತುಗಳ ಹಾವಳಿ ಮತ್ತು ಕಳ್ಳಸಾಗಣೆ ತಡೆಯಲು ಸಮ್ಮೇಳನ ಮತ್ತು ಕ್ಯಾಂಡಲ್ ಲೈಟ್ ಕಾಂಗ್ರಿಗೇಷನ್ ನಡೆಸಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com