ರಫ್ತು ಉತ್ತೇಜಿಸಲು ಕೇಂದ್ರ ಸರ್ಕಾರ ಕ್ರಮ: ಈರುಳ್ಳಿ ರಫ್ತು ಕನಿಷ್ಠ ದರ ರದ್ದು

ಈರುಳ್ಳಿ ರಫ್ತು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ ರಫ್ತು ದರ (ಎಂಇಪಿ)ವನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಈರುಳ್ಳಿ ರಫ್ತು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ ರಫ್ತು ದರ (ಎಂಇಪಿ)ವನ್ನು ತೆಗೆದುಹಾಕಿದೆ. 
ದೇಶದಲ್ಲಿ ಉತ್ಪಾದಿಸುವ ಎಲ್ಲ ಮಾದರಿ ಈರುಳ್ಳಿಯನ್ನು ಕನಿಷ್ಠ ರಫ್ತು ದರ ಇಲ್ಲದೆ ರಫ್ತು ಮಾಡಬಹುದಾಗಿದೆ ಎಂದು ವಿದೇಶಿ ವಾಣಿಜ್ಯ ಪ್ರಧಾನ ನಿರ್ದೇಶನಾಲಯ ಅಧಿಸೂಚನೆಯಲ್ಲಿ ಹೇಳಿದೆ.
ಎಂಇಪಿ ನಿಗದಿಪಡಿಸಿದ್ದಲ್ಲಿ ಅದಕ್ಕಿಂತಕೂ ಕಡಿಮೆ ದರಕ್ಕೆ ರಫ್ತು ಮಾಡುವಂತಿಲ್ಲ. ಎಂಇಪಿ ಹೆಚ್ಚಿಸಿದಾಗ  ವರ್ತಕರು ರಫ್ತು ಮಾಡುವುದನ್ನು ಕಡಿಮೆ ಮಾಡಲಿದ್ದು ದೇಶೀಯ ಮಾರುಕಟ್ಟೆಗೆ ಹೆಚ್ಚು ಉತ್ಪನ್ನ ಬರಲಿದೆ.
ಇದರಿಂದ ಬೆಲೆ ನಿಯಂತ್ರಣದಲ್ಲಿರಲಿದೆ. ಅನಿಯಮಿತ ಮಳೆಯಿಂದಾಗಿ ದೇಶದಲ್ಲಿ ಉತ್ಪಾದನೆ ಕುಸಿದಿದ್ದರಿಂದ ರಫ್ತು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ಆಗಸ್ಟ್ ನಲ್ಲಿ ಪ್ರತಿ ಟನ್ ಎಂಇಪಿಯನ್ನು 425ರಿಂದ 700 ಡಾಲರ್ ಗೆ ಹೆಚ್ಚಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಎಂಇಪಿಯನ್ನು 700 ಡಾಲರ್ ನಿಂದ 400 ಡಾಲರ್ ಗೆ ಇಳಿಸಲಾಗಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿ ದರಗಳು ಇಳಿಮುಖ ಕಂಡಿದ್ದರಿಂದ ಮಹಾರಾಷ್ಟ್ರ ಸರ್ಕಾರ ಎಂಇಪಿಯನ್ನು ತೆರವುಗೊಳಿಸುವಂತೆ ಕೇಂದ್ರ ಸರ್ಕಾರವನ್ನು ಮನವಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com