ವೋಕ್ಸ್ ವ್ಯಾಗನ್ ಹಿಂದಿಕ್ಕಿದ ಟೊಯೋಟಾ

ಜಾಗತಿಕ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಜರ್ಮನಿಯ ವೋಕ್ಸ್ ವ್ಯಾಗನ್ ಕಂಪನಿಯನ್ನು ಜಪಾನ್‍ನ ಟೊಯೋಟಾ ಕಂಪನಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಟೋಕಿಯೊ: ಜಾಗತಿಕ ಮಾರುಕಟ್ಟೆಯಲ್ಲಿ ಕಾರು ಮಾರಾಟದಲ್ಲಿ ಜರ್ಮನಿಯ ವೋಕ್ಸ್ ವ್ಯಾಗನ್ ಕಂಪನಿಯನ್ನು ಜಪಾನ್‍ನ ಟೊಯೋಟಾ ಕಂಪನಿ ಹಿಂದಿಕ್ಕಿದೆ.
ಜನವರಿನವೆಂಬರ್ ಅವಧಿಯಲ್ಲಿ 9.21 ದಶಲಕ್ಷ ಕಾರುಗಳು ಮಾರಾಟವಾಗಿವೆ ಎಂದು ಟೊಯೋಟಾ ಕಂಪನಿ ಶುಕ್ರವಾರ ಹೇಳಿದೆ. ಈ ಅವಧಿಯಲ್ಲಿ ವೋಕ್ಸ್ ವ್ಯಾಗನ್ 9.10 ದಶಲಕ್ಷ ವಾಹನ ಮಾರಾಟವಾಗಿದೆ. 
ಕಳೆದ ಜುಲೈನಿಂದಲೂ ಟೊಯೋಟಾ ಕಂಪನಿ ನಿರಂತರವಾಗಿ ವೋಕ್ಸ್ ವ್ಯಾಗನ್‍ನ್ನು ಹಿಂದಿಕ್ಕುತ್ತಾ ಸಾಗಿದೆ. ನವೆಂಬರ್ ತಿಂಗಳಲ್ಲಿ ಕಂಪನಿಯ ಕಾರುಗಳ ಮಾರಾಟ  ಶೇ.2.2ರಷ್ಟು ಕುಸಿದಿದೆ ಎಂದು ವೋಕ್ಸ್ ವ್ಯಾಗನ್ ಕಂಪನಿ ಹೇಳಿತ್ತು.
ಹೊಗೆ ಹೊರಸೂಸುವ ಸಾಫ್ಟ್ ವೇರ್ ಹಗರಣ ಬಯಲಿಗೆ ಬಂದಿದ್ದರಿಂದ ಮಾರಾಟ ಹಿನ್ನಡೆ ಕಂಡಿದೆ ಎಂದು ಕಂಪನಿ ಹೇಳಿತ್ತು. ಮೂರು ತಿಂಗಳ ಹಿಂದೆ ವಿಶ್ವದ ಕೆಲವು ಮಾರುಕಟ್ಟೆಗಳಲ್ಲಿ ವೋಕ್ಸ್ ವ್ಯಾಗನ್ ಟೊಯೋಟಾ ಮಾರಾಟವನ್ನು ಹಿಂದಿಕ್ಕಿತ್ತು. ಈಗ ಟೊಯೋಟಾ ಮತ್ತೆ ಮುಂದಡಿ ಇಟ್ಟಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com