ಪ್ರಮುಖ ವಲಯ ಪ್ರಗತಿ ಇಳಿಮುಖ

ಅತಿ ಪ್ರಮುಖವಾದ (ಕೋರ್ ಸೆಕ್ಟರ್) ಎಂಟು ಕ್ಷೇತ್ರಗಳ ಪ್ರಗತಿ ನವೆಂಬರ್ ತಿಂಗಳಲ್ಲಿ ಶೇ.1.3ರಷ್ಟು ಕುಸಿದಿದೆ. ಇದು ಕಳೆದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅತಿ ಪ್ರಮುಖವಾದ (ಕೋರ್ ಸೆಕ್ಟರ್) ಎಂಟು ಕ್ಷೇತ್ರಗಳ ಪ್ರಗತಿ ನವೆಂಬರ್ ತಿಂಗಳಲ್ಲಿ ಶೇ.1.3ರಷ್ಟು ಕುಸಿದಿದೆ. ಇದು ಕಳೆದ ಏಳು ತಿಂಗಳಲ್ಲಿಯೇ ನೀರಸ ಪ್ರಗತಿಯಾಗಿದೆ. 
ಉಕ್ಕು, ಸಿಮೆಂಟ್ ಮತ್ತು ಕಚ್ಚಾ ತೈಲ ಉತ್ಪಾದನೆ ಗಣನೀಯ ವಾಗಿ ಇಳಿಮುಖ ಕಂಡಿದ್ದು ಕೋರ್ ವಲಯ ಹಿನ್ನಡೆಗೆ ಕಾರಣ ವಾಗಿದೆ. ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ರಿಫೈನರಿ ಪ್ರಾಡೆಕ್ಟ್ಸ್, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ಕೋರ್ ಕ್ಷೇತ್ರಗಳಾಗಿವೆ.
ಈ ಎಂಟು ಕ್ಷೇತ್ರಗಳು ಐಐಪಿಯಲ್ಲಿ ಶೇಕಡ 38ರಷ್ಟು ಮೌಲ್ಯ ಹೊಂದಿವೆ. ಇದರ ಹಿಂದಿನ ತಿಂಗಳು ಅಕ್ಟೋಬರ್ ನಲ್ಲಿ ಈ ಪ್ರಗತಿ ಶೇ.3.2ರಷ್ಟಿತ್ತು. ಏಪ್ರಿಲ್-ನವೆಂಬರ್ ಅವಧಿಯಲ್ಲಿ ಒಟ್ಟಾರೆ ಪ್ರಗತಿ ಶೇ.2ರಷ್ಟು ದಾಖಲಾಗಿದೆ. 
ಕಳೆದ ವರ್ಷದ ಮೊದಲ ಎಂಟು ತಿಂಗಳಲ್ಲಿ ಕಂಡಿದ್ದ ಶೇ.6ರಷ್ಟು ಪ್ರಗತಿಗೆ  ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳು ಹೇಳಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com