ವಿದೇಶಿ ವಿನಿಮಯ ನಿಧಿ ಭಾರಿ ಏರಿಕೆ

ದೇಶಧ ವಿದೇಶಿ ವಿನಿಮಯ ನಿಧಿ ಪ್ರಮಾಣ ಜ.30ಕ್ಕೆ ಕೊನೆಗೊಂಡ ವಾರದಿಂದ ಈವರೆಗೆ 327.88 ಶತಕೋಟಿ...
ವಿದೇಶಿ ವಿನಿಮಯ ನಿಧಿ ಭಾರಿ ಏರಿಕೆ

ಮುಂಬೈ: ದೇಶದ ವಿದೇಶಿ ವಿನಿಮಯ ನಿಧಿ ಪ್ರಮಾಣ ಜ.30ಕ್ಕೆ ಕೊನೆಗೊಂಡ ವಾರದಿಂದ ಈವರೆಗೆ 327.88 ಶತಕೋಟಿ ಡಾಲರ್ ತಲುಪಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ. ಈ ವಾರ ವಿದೇಶಿ ವಿನಿಮಯ ನಿಧಿಯು 5.84 ಬಿಲಿಯನ್‌ನಷ್ಟು ಏರಿಕೆ ಕಂಡಿತ್ತು.

ಇದಕ್ಕೂ ಮೊದಲ ವಾರದಲ್ಲಿ ವಿದೇಶಿ ವಿನಿಮಯ ನಿಧಿ 97.9 ದಶಲಕ್ಷ ಡಾಲರ್‌ನಷ್ಟು ಇಳಿಕೆ ಕಂಡಿತ್ತು. ಇದರಿಂದ ವಿದೇಶಿ ವಿನಿಮಯ ನಿಧಿ 322.037 ಶತಕೋಟಿ ಡಾಲರ್‌ಗೆ ಕುಸಿದಿತ್ತು. ಜನವರಿ ತಿಂಗಳ ಎರಡನೇ ವಾರದಲ್ಲಿ ವಿದೇಶಿ ವಿನಿಮಯ ನಿಧಿ 322.13 ಶತಕೋಟಿ ಡಾಲರ್ ತಲುಪುವ ಮೂಲಕ  ದಿಢೀರ್ ಏರಿಕೆ ದಾಖಲಿಸಿತ್ತು. ಆದರೆ, ದೇಶದ ಚಿನ್ನದ ನಿಧಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅದು 19.377 ಶತಕೋಟಿ ಡಾಲರ್‌ನಷ್ಟೇ ಇದೆ.

ಜ.23ರಿಂದ
ಒಟ್ಟು ವಿದೇಶಿ ವಿನಿಮಯ 322.037 ದಶಲಕ್ಷ ಡಾಲರ್
ವಿದೇಶಿ ಕರೆನ್ಸಿ ಆಶ್ತಿ 297.510 ದಶಲಕ್ಷ ಡಾಲರ್
ಚಿನ್ನ 19,377 ದಶಲಕ್ಷ ಡಾಲರ್
ಎಸ್‌ಡಿಆರ್‌ಗಳು 4,047 ದಶಲಕ್ಷ ಡಾಲರ್
ಐಎಂಎಫ್‌ನಲ್ಲಿ ನಿಧಿ ಪ್ರಮಾಣ 1,101 ದಶಲಕ್ಷ ಡಾಲರ್

2011ರಲ್ಲೂ...
2011ರ ಜು.1ರಂದು ಅಂತ್ಯಗೊಂಡ ವಾರದಲ್ಲಿ ವಿದೇಶಿ ವಿನಿಮಯ ನಿಧಿ 6.70 ಬಿಲಿಯನ್ ಡಾಲರ್‌ನಷ್ಟು ಏರಿಕೆ ಕಂಡಿತ್ತು. ಅದು ಇತ್ತೀಚಿನ ದಾಖಲೆ.

ಯಾಕೆ ಬೇಕು?

ಅಂತಾರಾಷ್ಟ್ರೀಯ ಪಾವತಿಗಾಗಿ, ವಾಣಿಜ್ಯ ಸಾಲಗಳು, ಆಮದು, ಅಂತಾರಾಷ್ಟ್ರೀಯ ಕರೆನ್ಸಿ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸಲು.

ಕಾರಣಗಳೇನು?

ವಿದೇಶಿ ವಿನಿಮಯ ನಿಧಿಯಲ್ಲಿನ ಹೆಚ್ಚಳಕ್ಕೆ ಅನೇಕ ವಿಚಾರಗಳು ಪಾತ್ರವಹಿಸುತ್ತವೆ. ವಿದೇಶಿ ಕರೆನ್ಸಿ ಅದರಲ್ಲೂ ಮುಖ್ಯವಾಗಿ ಡಾಲರ್‌ನ ಮೌಲ್ಯ ಕುಸಿತವೂ ಒಂದು ಕಾರಣ. ಈ ನಡುವೆ, ಕಳೆದ ತಿಂಗಳಾಂತ್ಯದಲ್ಲಿ ದೇಶದ ಈಕ್ವಿಟಿ ಮತ್ತು ಸಾಲದ ಮಾರುಕಟ್ಟೆಯಲ್ಲಿ ಹೆಚ್ಚಿನ ಹೂಡಿಕೆಯಾಗಿದೆ. ಕಳೆದ 35 ತಿಂಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹೂಡಿಕೆಯಾಗುತ್ತಿರುವುದು ಇದೇ ಮೊದಲು. ಆದರೆ, ಫಸ್ಟ್‌ರ್ಯಾಂಡ್ ಬ್ಯಾಂಕ್‌ನ ಖಜಾಂಚಿ ಹರಿಹರ್ ಕೃಷ್ಣಮೂರ್ತಿ ಅವರ ಪ್ರಕಾರ, ರುಪಾಯಿ ಮೌಲ್ಯ ಏರಿಕೆಯಾಗುವುದನ್ನು ತಡೆಯಲು ಆರ್‌ಬಿಐ ಒಂದುಷ್ಟು ಡಾಲರ್‌ಗಳನ್ನು ಖರೀದಿಸಿದ್ದೇ ಈ ಬೆಳವಣಿಗೆಗೆ ಮುಖ್ಯ ಕಾರಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com