
ಮುಂಬೈ/ ನವದೆಹಲಿ: ಅಗ್ಗದ ದರದಲ್ಲಿ ವಿಮಾನಯಾನ ಒದಗಿಸುವ ಸ್ಪೈಸ್ ಜೆಟ್ ಸಂಸ್ಥೆ ಮತ್ತೆ ಸಂಸ್ಥಾಪಕ ಅಜಯ್ ಸಿಂಗ್ ತೆಕ್ಕೆಗೇ ಬಂದಿದೆ. ಸದ್ಯ, ಸಾಲದ ಹೊರೆಯಲ್ಲಿರುವ ಕಂಪನಿಯನ್ನು ಮಾರಲು ಹಾಲಿ ಮಾಲೀಕ ಸನ್ ಗ್ರೂಪ್‌ನ ಕಲಾನಿಧಿ ಮಾರನ್ ನಿರ್ಧರಿಸಿದ್ದಾರೆ. ಮುಂಬೈನಲ್ಲಿ ನಡೆದ ಷೇರುದಾರರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದು ರು.1500 ಕೋಟಿ ಡೀಲ್.
205ರಲ್ಲಿ ಆರಂಭವಾಗಿದ್ದ ಕಂಪನಿಯನ್ನು 2010ರಲ್ಲಿ ಸನ್‌ಗ್ರೂಪ್ ಖರೀದಿಸಿತ್ತು. 2 ಜಿ ಹಗರಣ ಮತ್ತು ಸ್ಥಿತ್ಯಂತರಗಳಿಂದಾಗಿ ಕಂಪನಿ ಇತ್ತೀಚಿನ ದಿನಗಳಲ್ಲಿ ಭಾರಿ ನಷ್ಟ ಅನುಭವಿಸಿತ್ತು. ತೈಲ ಕಂಪನಿ ಇತ್ತೀಚಿನ ದಿನಗಳಲ್ಲಿ ಭಾರಿ ನಷ್ಟ ಅನುಭವಿಸಿತ್ತು. ತೈಲ ಕಂಪನಿಗಳಿಗೆ ಬಾಕಿ ಪಾವತಿ ಮಾಡದಿದ್ದ ಹಿನ್ನೆಲೆಯಲ್ಲಿ ಅವುಗಳು ಇಂಧನ ಪೂರೈಕೆ ಸ್ಥಗಿತಗೊಳಿಸಿದ್ದವು. ಮಾಲೀಕತ್ವ ಬದಲಾವಣೆಯಿಂದಾಗಿ ವಿಜಯ ಮಲ್ಯ ಒಡೆತನದ ಕಿಂಗ್ ಫಿಶರ್‌ನ ಸ್ಥಿತಿ ತಲುಪುವುದರಿಂದ ಸ್ಪೈಸ್ ಜೆಟ್ ಪಾರಾದಂತಾಗಿದೆ. 2 ವಿಮಾನಯಾನ ಸಂಸ್ಥೆಗಳ ಬಿಕ್ಕಟ್ಟಿನಿಂದಾಗಿ ವಾಯುಯಾನ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪ್ರತಿಷ್ಠಿಗೆ ಧಕ್ಕೆ ಉಂಟಾಗಿತ್ತು.
Advertisement