ದರ ಕಡಿತ: ಸೆನ್ಸೆಕ್ಸ್ 728 ಅಂಕ ಜಿಗಿತ

ಆರ್ ಬಿಐನ ರೆಪೋ ದರ ಕಡಿತದ ಪರಿಣಾಮ ಹೂಡಿಕೆದಾರರ ಮೇಲೂ ಅಗಿದೆ...
ದರ ಕಡಿತ: ಸೆನ್ಸೆಕ್ಸ್ 728 ಅಂಕ ಜಿಗಿತ

ಮುಂಬೈ: ಆರ್ ಬಿಐನ ರೆಪೋ ದರ ಕಡಿತದ ಪರಿಣಾಮ ಹೂಡಿಕೆದಾರರ ಮೇಲೂ ಅಗಿದೆ. ಷೇರು ಮಾರುಕಟ್ಟೆ ಭಾರಿ ಜಿಗಿತ ಕಂಡಿದೆ. ಐದು ವರ್ಷದಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನ ಮುಂಬೈ ಷೇರು ಮಾರುಕಟ್ಟೆ 728.73 ಅಂಕ ಏರಿಕೆ ದಾಖಲಿಸಿದೆ.

ದಿನದ ಅಂತ್ಯಕ್ಕೆ 28,075 ಅಂಕದಲ್ಲಿ ವಹಿವಾಟು ಮುಕ್ತಾಯಗೊಳಿಸಿದೆ. ಇನ್ನು 8,424 ಅಂಕದೊಂದಿಗೆ ವಹಿವಾಟು ಆರಂಭಿಸಿದ ಎನ್ಎಸ್ಇ ನಿಫ್ಟಿ ಒಂದು ಹಂತದಲ್ಲಿ 8,527 ಅಂಕ ಏರಿಕೆ ದಾಖಲಿಸಿ, ದಿನದ ಅಂತ್ಯಕ್ಕೆ 8,494 ಅಂಕದಲ್ಲಿ ವಹಿವಾಟು ಮುಕ್ತಾಯಗೊಳಿಸಿತು. ಅಂದರೆ 216 ಅಂಕ ಏರಿಕೆ ದಾಖಲಿಸಿತು. ಷೇರುಪೇಟೆಯ ಈ ನೆಗೆತದಿಂದಾಗಿ ಹೂಡಿಕೆದಾರರು ಮತ್ತೆ ರು.100 ಲಕ್ಷ ಕೋಟಿ ವಹಿವಾಟಿನ ಗಡಿ ದಾಟುವುದು ಸಾಧ್ಯವಾಯಿತು.

ಇತರೆ ರಾಷ್ಟ್ರಗಳಲ್ಲೂ: ಆರ್ಬಿಐ ನಿರ್ಧಾರ ಭಾರತ ಮಾತ್ರವಲ್ಲದೆ ಚೀನಾ, ಹಾಂಗ್ಕಾಂಗ್, ಜಪಾನ್, ಸಿಂಗಾಪುರ ಮತ್ತು ದಕ್ಷಿಣ ಕೊರಿಯಾದ ಷೇರು ಮಾರುಕಟ್ಟೆ ಮೇಲೂ ತನ್ನದೇ ಆದ ಪ್ರಭಾವ ಬೀರಿದೆ. ಈ ಎಲ್ಲ ದೇಶಗಳ ಮಾರುಕಟ್ಟೆ ಶೇ.0.03ರಿಂದ ಶೇ.3.54 ಅಂಕಗಳಷ್ಟು ಏರಿಕೆ ಕಂಡಿದೆ. ತೈವಾನ್ ಮಾರುಕಟ್ಟೆ ಶೇ.0.16 ಅಂಕ ಏರಿಕೆ ದಾಖಲಿಸಿದೆ.

ಲಾಭ ಪಡೆದವರು: ಎಚ್ಡಿಎಫ್ಸಿ(ಶೇ.7.16), ಎಸ್ಬಿಐ(ಶೇ.5.02), ಐಸಿಐಸಿಐ ಬ್ಯಾಂಕ್(ಶೇ.4.60), ಎಲ್ಆ್ಯಂಡ್ಟಿ(ಶೇ.3.61), ಟಾಟಾ ಪವರ್(ಶೇ.3.55), ಆರ್ಐಎಲ್(ಶೇ.3.53), ಮಹಿಂದ್ರಾ ಆ್ಯಂಡ್ ಮಹಿಂದ್ರಾ(ಶೇ.3.10), ಮಾರುತಿ ಸುಜುಕಿ(ಶೇ.3.04), ಐಟಿಸಿ(ಶೇ.2.76), ಆ್ಯಕ್ಸಿಸ್ ಬ್ಯಾಂಕ್(ಶೇ.2.57) ಮತ್ತು ಟಾಟಾ ಪವರ್ಸ್ (ಶೇ.2.33).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com