
ಮುಂಬೈ: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಮೂರು ದಿನಗಳ ಪ್ರವಾಸ ಮುಗಿಸಿ ವಾಪಸಾಗುತ್ತಿದ್ದಂತೆ ಷೇರುಪೇಟೆಯಲ್ಲಿ ಸಂಚಲನ ಸೃಷ್ಟಿಯಾಯಿತು. ಅಮೆರಿಕ ಭಾರತ ವ್ಯಾಪಾರ ಸಂಬಂಧ ಬಲಿಷ್ಠವಾಗುತ್ತಿರುವುದು ಹೂಡಿಕೆದಾರರ ಹರ್ಷಕ್ಕೆ ಕಾರಣವಾಯಿತು.
ಎಲ್ಲರೂ ಷೇರುಗಳ ಖರೀದಿಯಲ್ಲಿ ಭಾರಿ ಎಲ್ಲರೂ ಷೇರುಗಳ ಖರೀದಿಯಲ್ಲಿ ಭಾರಿ ಆಸಕ್ತಿ ವಹಿಸಿದ ಕಾರಣ ಮಂಗಳವಾರ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 292 ಅಂಕಗಳ ಏರಿಕೆ ದಾಖಲಿಸಿ ದಿನಾಂತ್ಯ 29,571ರಲ್ಲಿ ಕೊನೆಗೊಳ್ಳುವ ಮೂಲಕ ಹೊಸ ಇತಿಹಾಸ ಬರೆಯಿತು. ನಿಫ್ಟಿ ಕೂಡ 74 ಅಂಕ ಏರಿಕೆ ಕಂಡು, 8,910ರಲ್ಲಿ ಅಂತ್ಯಗೊಂಡಿತು.
ಷೇರು ಮಾರುಕಟ್ಟೆಯು ಸತತ 8ನೇ ದಿನವೂ ಏರಿP ಏರಿಕೆ ಕಂಡಂತಾಯಿತು. ಭಾರತದಲ್ಲಿ ವ್ಯಾಪಾರ ಮತ್ತು ವಹಿವಾಟು ಹೆಚ್ಚಿಸಲು ಅಮೆರಿಕವು ರು.24 ಸಾವಿರ ಕೋಟಿ ಹೂಡಿಕೆ ಮತ್ತು ಸಾಲದ ಘೋಷಣೆ ಮಾಡಿರುವುದು ದೇಶೀಯ ಮಾರುಕಟ್ಟೆಯಲ್ಲಿ ಹೂಡಿಕೆದಾರರಲ್ಲಿ ಆರ್ಥಿಕ ಚೇತರಿಕೆ ಆಶಾಕಿರಣ ಮೂಡಿಸಿತು.
Advertisement