
ಟಾಟಾ ಒಡೆತನದ ಸಂಸ್ಥೆಗಳ ಮುಖ್ಯಸ್ಥ ರತನ್ ಟಾಟಾ, ಅಂತರ್ಜಾಲ ಟ್ಯಾಕ್ಸಿ ಆಪ್ ಸೇವಾ ಸಂಸ್ಥೆ 'ಓಲಾ'ದಲ್ಲಿ ಹಣ ಹೂಡಿದ್ದಾರೆ ಎಂದು ಬುಧವಾರ ಸಂಸ್ಥೆ ತಿಳಿಸಿದೆ.
ಬಹಳ ಪ್ರಖ್ಯಾತ ಹಾಗು ಗೌರವಯುತ ಸಂಸ್ಥೆ ಈ ಹಿಂದೆಯೂ ಹಲವಾರು ಸ್ಟಾರ್ಟ್-ಅಪ್ ಉದ್ದಿಮೆಗಳಲ್ಲಿ ಹಣ ಹೂಡಿದ ಉದಾಹರಣೆಗಳಿವೆ. ಈ ಹಿಂದೆ ಅಂತರ್ಜಾಲ ಇ ಕಾಮರ್ಸ್ ಸಂಸ್ಥೆ ಸ್ನ್ಯಾಪ್ ಡೀಲ್ ಮತ್ತು ಚೈನಾದ ಮೊಬೈಲ್ ಫೋನ್ ಉತ್ಪನ್ನ ಸಂಸ್ಥೆ ಕ್ಸಯೋಮಿಯಲ್ಲೂ ಹಣ ಹೂಡಿದ್ದರು.
ಎಷ್ಟು ಹಣ ಹೂಡಿದ್ದಾರೆ ಎಂಬುದನ್ನು ಬಹಿರಂಗಪಡಿಸದ ಓಲಾ, ಟಾಟಾ ಅವರು ಸ್ವಂತ ಸಾಮರ್ಥ್ಯದ ಮೇಲೆ ಶೇರುಗಳನ್ನು ಕೊಂಡಿದ್ದಾರೆ ಎಂದು ತಿಳಿಸಿದೆ.
ಈ ರೀತಿಯ ಹಲವಾರು ಹೂಡಿಕೆಗಳಲ್ಲಿ ಇದು ಅತಿ ದೊಡ್ಡ ಮೊತ್ತದ ಹೂಡಿಕೆ ಅಲ್ಲದೆ ಹೋದರು, ಸ್ಟಾರ್ಟ್-ಅಪ್ ಸಂಸ್ಥೆಗಳಿಗೆ ಇದು ಮೌಲ್ಯಯುತ ಎಂಬುದು ವ್ಯವಹಾರ ಪಂಡಿತರ ಅಭಿಮತ.
ಊಬರ್ ಕ್ಯಾಬ್ ಸೇವಾ ಸಂಸ್ಥೆಯ ಜೊತೆ ಸ್ಪರ್ಧೆ ಒಡ್ಡಿರುವ ಓಲಾ ದೇಶದ ಅತಿ ದೊಡ್ಡ ಆನ್ಲೈನ್ ಕ್ಯಾಬ್ ಸೇವಾ ಸಂಸ್ಥೆಯಾಗಿದೆ.
ಜಪಾನಿನ ಸಾಫ್ಟ್ ಬ್ಯಾಂಕ್ ಹೂಡಿಕೆಯಿಂದ ಓಲಾ ೨೦೦ ಮಿಲಿಯನ್ ಡಾಲರ್ ಒಪ್ಪಂದದಲ್ಲಿ 'ಟ್ಯಾಕ್ಸಿ ಫಾರ್ ಶ್ಯೂರ್' ಸಂಸ್ಥೆಯನ್ನು ಕೊಂಡಿತ್ತು.
Advertisement